‘ರಾಜಮೌಳಿ ಬೇಡ, ಈ ನಿರ್ದೇಶಕ ಬೇಕು’; ರಣಬೀರ್ ಕಪೂರ್ ಅಚ್ಚರಿಯ ಆಯ್ಕೆ
ಸಾಮಾನ್ಯವಾಗಿ ರಾಜಮೌಳಿ ಬಂದು ನಾನಾ ಅಥವಾ ಇನ್ನೊಬ್ಬರಾ ಎಂದು ಪ್ರಶ್ನೆ ಮಾಡಿದರೆ ರಾಜಮೌಳಿ ಹೆಸರನ್ನೇ ಎಲ್ಲರೂ ತೆಗೆದುಕೊಳ್ಳುತ್ತಾರೆ. ಆದರೆ, ರಣಬೀರ್ ಕಪೂರ್ ಆ ರೀತಿ ಅಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
‘ಬಾಹುಬಲಿ’, ‘ಆರ್ಆರ್ಆರ್’ ರೀತಿಯ ಚಿತ್ರಗಳನ್ನು ಕಟ್ಟಿಕೊಟ್ಟಿರುವ ಖ್ಯಾತಿ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರಿಗೆ ಇದೆ. ಭಾರತಕ್ಕೆ ಅವರು ಆಸ್ಕರ್ ಕೂಡ ತೆಗೆದುಕೊಂಡು ಬಂದಿದ್ದರು. ಅವರ ಜೊತೆ ಕೆಲಸ ಮಾಡುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ? ಎಲ್ಲಾ ಹೀರೋ ಹಾಗೂ ಹೀರೋಯಿನ್ಗಳಿಗೆ ಹೀಗೊಂದು ಕನಸು ಇರುತ್ತದೆ. ಭಾರತದ ಯಾವುದೇ ನಿರ್ದೇಶಕನ ಹೆಸರು ನೀಡಿದರೂ ರಾಜಮೌಳಿ ಹೆಸರು ಹೇಳಿದರೆ ತೂಕ ಜಾಸ್ತಿ ಎನ್ನಬಹುದು. ಆದರೆ, ರಾಜಮೌಳಿ ಜೊತೆ ಕೆಲಸ ಮಾಡಲ್ಲ ಎಂದು ರಣಬೀರ್ ಕಪೂರ್ ಈ ಹಿಂದೆ ಹೇಳಿದ ಮಾತು ನೆನಪಿದೆಯೇ?
ಅದು ‘ಅನಿಮಲ್’ ಸಿನಿಮಾ ರಿಲೀಸ್ ಸಂದರ್ಭ. ‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಹೀರೋ ಆಗಿ ನಟಿಸಿದರೆ, ಸಂದೀಪ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಕಾರ್ಯಕ್ರಮಕ್ಕಾಗಿ ರಾಜಮೌಳಿ ವೇದಿಕೆ ಮೇಲೆ ಇದ್ದರು. ಈ ವೇಳೆ ರಾಜಮೌಳಿ ಹಾಗೂ ರಣಬೀರ್ ಮಧ್ಯೆ ಚರ್ಚೆ ನಡೆದಿದೆ.
‘ಸಂದೀಪ್ ರೆಡ್ಡಿ ವಂಗ ಅವರು ನಿಮಗೆ ಅತ್ಯುತ್ತಮ ನಿರ್ದೇಶಕರು ಅಲ್ಲವೇ? ಒಂದೊಮ್ಮೆ ನನ್ನ ಹಾಗೂ ಸಂದೀಪ್ ಮಧ್ಯೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ’ ಎಂದು ರಾಜಮೌಳಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ್ದ ರಣಬೀರ್ ಕಪೂರ್, ‘ನಾನು ಡಬಲ್ ಶಿಫ್ಟ್ ಮಾಡುತ್ತೇನೆ’ ಎಂದರು. ಇದನ್ನು ರಾಜಮೌಳಿ ಒಪ್ಪಿಕೊಂಡಿಲ್ಲ.
‘ಒಬ್ಬರನ್ನು ಮಾತ್ರ ಆಯ್ಕೆ ಮಾಡಬೇಕು’ ಎಂದು ರಾಜಮೌಳಿ ಷರತ್ತು ಹಾಕಿದರು. ಆಗ ರಣಬೀರ್ ಅವರು ನೇರವಾಗಿ, ‘ಸಂದೀಪ್ ರೆಡ್ಡಿ ವಂಗ’ ಎಂದು ಹೇಳಿದರು. ‘ನಾನು ನಿಯತ್ತಿನ ಕಲಾವಿದ. ಹೀಗಾಗಿ, ಸಂದೀಪ್ ರೆಡ್ಡಿ ವಂಗ’ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದರು. ಅವರ ಈ ಉತ್ತರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಸಾಮಾನ್ಯವಾಗಿ ರಾಜಮೌಳಿ ಬಂದು ನಾನಾ ಅಥವಾ ಇನ್ನೊಬ್ಬರಾ ಎಂದು ಪ್ರಶ್ನೆ ಮಾಡಿದರೆ ರಾಜಮೌಳಿ ಹೆಸರನ್ನೇ ಎಲ್ಲರೂ ತೆಗೆದುಕೊಳ್ಳುತ್ತಾರೆ. ಆದರೆ, ರಣಬೀರ್ ಕಪೂರ್ ಆ ರೀತಿ ಅಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
‘ಅನಿಮಲ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಡುಗಡೆ ಕಂಡಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರವನ್ನು ಕೆಲವರು ಅತಿಯಾಗಿ ಟೀಕೆ ಮಾಡಿದ್ದೂ ಇದೆ. ಇನ್ನೂ ಕೆಲವರು ಸಿನಿಮಾನ ಹೊಗಳಿದ್ದಾರೆ.
ಇದನ್ನೂ ಓದಿ: ಕಪಿಲ್ ಶರ್ಮಾ, ಜೂ ಎನ್ಟಿಆರ್ ವಿರುದ್ಧ ರಾಜಮೌಳಿ ಅಭಿಮಾನಿಗಳ ಅಸಮಾಧಾನ
ಸಿನಿಮಾ ವಿಚಾರಕ್ಕೆ ಬರೋದಾದರೆ ರಾಜಮೌಳಿ ಅವರು ಮಹೇಶ್ ಬಾಬು ಜೊತೆಯಲ್ಲಿ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.