ಕಪಿಲ್ ಶರ್ಮಾ, ಜೂ ಎನ್​ಟಿಆರ್ ವಿರುದ್ಧ ರಾಜಮೌಳಿ ಅಭಿಮಾನಿಗಳ ಅಸಮಾಧಾನ

ನೆಟ್​ಫ್ಲಿಕ್ಸ್​ನಲ್ಲಿ ಇತ್ತೀಚೆಗೆ ಪ್ರಸಾರವಾದ ಕಪಿಲ್ ಶರ್ಮಾ ಶೋನಲ್ಲಿ ಎಸ್​ಎಸ್ ರಾಜಮೌಳಿಯ ಅನುಕರಣೆ ಮಾಡಲಾಗಿತ್ತು. ಆದರೆ ಇದು ಕೆಲ ರಾಜಮೌಳಿ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ರಾಜಮೌಳಿಗೆ ಅವಮಾನ ಮಾಡಲಾಗಿದೆ ಎಂಬ ಆಕ್ಷೇಪಣೆ ಎದ್ದಿದೆ.

ಕಪಿಲ್ ಶರ್ಮಾ, ಜೂ ಎನ್​ಟಿಆರ್ ವಿರುದ್ಧ ರಾಜಮೌಳಿ ಅಭಿಮಾನಿಗಳ ಅಸಮಾಧಾನ
Follow us
ಮಂಜುನಾಥ ಸಿ.
|

Updated on: Oct 01, 2024 | 6:45 PM

ಎಸ್​ಎಸ್ ರಾಜಮೌಳಿ, ಪ್ರಸ್ತುತ ಭಾರತದ ಟಾಪ್ ನಿರ್ದೇಶಕ. ಭಾರತೀಯ ಸಿನಿಮಾಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತು ಸಿಗುವಂತೆ ಮಾಡಿರುವ ನಿರ್ದೇಶಕ. ‘ಬಾಹುಬಲಿ’ ಸಿನಿಮಾ ಮೂಲಕ ಅದಾಗಲೇ ದಕ್ಷಿಣ ಭಾರತದ ಸಿನಿಮಾಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯ ಹೆಬ್ಬಾಗಿಲು ತೆಗೆಯುವಂತೆ ಮಾಡಿದ್ದ ಎಸ್​ಎಸ್ ರಾಜಮೌಳಿ, ಈಗ ‘ಆರ್​ಆರ್​ಆರ್’ ಸಿನಿಮಾ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆಸ್ಕರ್​ ಅಂಗಳದಲ್ಲಿಯೂ ಭಾರತೀಯ ಸಿನಿಮಾಗಳು ಮೆರೆಯುವಂತೆ ಮಾಡಿದ್ದಾರೆ. ಭಾರತದ ನೆಲದ ಕತೆಗಳನ್ನು ವಿದೇಶಗಳಲ್ಲಿ ಹೇಳುತ್ತಿರುವ ನಿರ್ದೇಶಕ ಎನಿಸಿಕೊಂಡಿರುವ ರಾಜಮೌಳಿ ಅವರನ್ನು ಕಾಮಿಡಿ ಶೋ ಒಂದರಲ್ಲಿ ಅಪಹಾಸ್ಯ ಮಾಡಲಾಗಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಕಪಿಲ್ ಶರ್ಮಾ, ಭಾರತದ ಜನಪ್ರಿಯ ಕಮಿಡಿಯನ್, ದಶಕದಿಂದಲೂ ‘ಕಪಿಲ್ ಶರ್ಮಾ ಶೋ’ ಅನ್ನು ಟಿವಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಈ ಶೋ ನೆಟ್​ಫ್ಲಿಕ್ಸ್​ಗೆ ವರ್ಗಾವಣೆಗೊಂಡಿದೆ. ಕಪಿಲ್ ಶೋನ ಹೊಸ ಸೀಸನ್​ ಇತ್ತೀಚೆಗಷ್ಟೆ ಪ್ರಾರಂಭವಾಗಿದ್ದು, ಇತ್ತೀಚೆಗೆ ಪ್ರಸಾರವಾದ ಶೋಗೆ ಅತಿಥಿಗಳಾಗಿ ‘ದೇವರ’ ಸಿನಿಮಾದ ತಂಡವಾಗಿರುವ ಜೂ ಎನ್​ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾನ್ಹವಿ ಕಪೂರ್ ಹೋಗಿದ್ದರು. ಈ ವೇಳೆ ಖ್ಯಾತ ನಿರ್ದೇಶಕ ರಾಜಮೌಳಿ ಅವರನ್ನು ಅಪಮಾನಿಸಲಾಗಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಸಿನಿಮಾದ ಶೂಟಿಂಗ್​ ಸೆಟ್​ಗೆ ಭೇಟಿ ಕೊಟ್ಟ ಸ್ಟಾರ್​ ನಿರ್ದೇಶಕ ರಾಜಮೌಳಿ

ಶೋನಲ್ಲಿ ಹಾಸ್ಯ ಕಲಾವಿದರು ಜನಪ್ರಿಯ ಸೆಲೆಬ್ರಿಟಿಗಳನ್ನು ಅನುಕರಿಸುತ್ತಾರೆ. ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಶಾರುಖ್, ಸಲ್ಮಾನ್ ಹೀಗೆ ಹಲವು ಕಲಾವಿದರನ್ನು ಸುನಿಲ್ ಗ್ರೋವರ್, ಕೃಷ್ಣ ಇನ್ನಿತರೆ ಕಲಾವಿದರು ಅನುಕರಿಸುತ್ತಾರೆ ಶೋನ ಹೈಲೆಟ್ ಇದು. ಜೂ ಎನ್​ಟಿಆರ್ ಶೋಗೆ ಆಗಮಿಸಿದ್ದಾಗ, ಸುನಿಲ್ ಗ್ರೋವರ್, ರಾಜಮೌಳಿಯನ್ನು ಅನುಕರಿಸಿದ್ದರು. ಅವರಂತೆ ಉಡುಪು, ಹೇರ್​ಸ್ಟೈಲ್, ದಾಡಿ ಮಾಡಿಕೊಂಡು ಬಂದಿದ್ದ ಸುನಿಲ್ ಗ್ರೋವರ್ ರಾಜಮೌಳಿ ಅವರನ್ನು ಅನುಕರಿಸಿದ್ದರು.

ಶೋನಲ್ಲಿ ಅವರು ರಾಜಮೌಳಿ ದಡ್ಡರೆಂಬಂತೆ, ಕೇವಲ ಸಿನಿಮಾಗಳಲ್ಲಿ ವಿಎಫ್​ಎಕ್ಸ್ ಮಾತ್ರವೇ ಮಾಡುತ್ತಾರೆ ಎಂಬಂತೆ ತೋರಿಸಲಾಗಿತ್ತು, ಒಂದು ರೀತಿ ರಾಜಮೌಳಿಯವರನ್ನು ಟೀಕಿಸುವಂತೆ ಕೆಲವು ಸಂಭಾಷಣೆಗಳು ಆ ಶೋನಲ್ಲಿ ಇದ್ದವು. ಜೂ ಎನ್​ಟಿಆರ್ ಸೇರಿದಂತೆ ಇತರೆ ಅತಿಥಿಗಳು ಈ ಹಾಸ್ಯವನ್ನು ಎಂಜಾಯ್ ಮಾಡಿದ್ದರು. ಆದರೆ ಇದು ರಾಜಮೌಳಿಯ ಅಭಿಮಾನಿಗಳಗೆ ಕೆಲವು ತೆಲುಗು ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗಿಲ್ಲ. ಕೆಲವರು ಈ ಬಗ್ಗೆ ತಕರಾರು ಎತ್ತಿದ್ದಾರೆ. ಕೆಲವು ತೆಲುಗು ಮಾಧ್ಯಮಗಳು ಸಹ ಇದನ್ನು ಹೈಲೆಟ್ ಮಾಡಿ, ಕಪಿಲ್ ಶರ್ಮಾ ರಾಜಮೌಳಿಗೆ ಅಪಮಾನ ಮಾಡಿದ್ದಾರೆ ಎಂದಿದೆ. ಆದರೆ ಈ ಬಗ್ಗೆ ಕಪಿಲ್ ಶರ್ಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ