‘ಪುಷ್ಪ 2’ ಸಿನಿಮಾದ ಶೂಟಿಂಗ್​ ಸೆಟ್​ಗೆ ಭೇಟಿ ಕೊಟ್ಟ ಸ್ಟಾರ್​ ನಿರ್ದೇಶಕ ರಾಜಮೌಳಿ

‘ಆರ್​ಆರ್​ಆರ್​’ ಬಳಿಕ ಡೈರೆಕ್ಟರ್​ ರಾಜಮೌಳಿ ಅವರು ಹೊಸ ಸಿನಿಮಾದ ಶೂಟಿಂಗ್​ ಇನ್ನೂ ಶುರು ಮಾಡಿಲ್ಲ. ಸದ್ಯಕ್ಕೆ ಕೊಂಚ ಬಿಡುವಿನಲ್ಲಿರುವ ಅವರು ‘ಪುಷ್ಪ 2’ ಸಿನಿಮಾದ ಚಿತ್ರೀಕರಣದ ಸೆಟ್​ಗೆ ಹೋಗಿದ್ದಾರೆ. ತಮ್ಮ ಸಿನಿಮಾದ ಸೆಟ್​ಗೆ ರಾಜಮೌಳಿ ಬಂದಿದ್ದಕ್ಕೆ ನಿರ್ದೇಶಕ ಸುಕುಮಾರ್​ ಅವರು ಸಂಭ್ರಮಿಸಿದ್ದಾರೆ. ಆ ಕ್ಷಣದ ಫೋಟೋ ವೈರಲ್​ ಆಗಿದೆ.

‘ಪುಷ್ಪ 2’ ಸಿನಿಮಾದ ಶೂಟಿಂಗ್​ ಸೆಟ್​ಗೆ ಭೇಟಿ ಕೊಟ್ಟ ಸ್ಟಾರ್​ ನಿರ್ದೇಶಕ ರಾಜಮೌಳಿ
‘ಪುಷ್ಪ 2’ ಸೆಟ್​ನಲ್ಲಿ ರಾಜಮೌಳಿ
Follow us
ಮದನ್​ ಕುಮಾರ್​
|

Updated on: Sep 27, 2024 | 3:07 PM

ನಿರ್ದೇಶಕ ರಾಜಮೌಳಿ ಅವರು ಮುಂದಿನ ಸಿನಿಮಾದ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ. ಟಾಲಿವುಡ್​ ‘ಪ್ರಿನ್ರ್ಸ್​’ ಮಹೇಶ್​ ಬಾಬು ಜೊತೆ ಅವರು ಹೊಸ ಸಿನಿಮಾ ಮಾಡಲಿದ್ದಾರೆ. ಆ ಚಿತ್ರದ ಶೂಟಿಂಗ್​ ಆರಂಭವಾಗಲು ಇನ್ನೂ ಸಮಯ ಇದೆ. ಈ ನಡುವೆ ರಾಜಮೌಳಿ ಅವರು ‘ಪುಷ್ಪ 2’ ಸಿನಿಮಾದ ಶೂಟಿಂಗ್​ ಸೆಟ್​ಗೆ ಭೇಟಿ ನೀಡಿದ್ದಾರೆ. ಆ ಸಂದರ್ಭದ ಫೋಟೋ ವೈರಲ್​ ಆಗಿದೆ. ರಾಜಮೌಳಿ ಅವರನ್ನು ನೋಡಿ ‘ಪುಷ್ಪ 2’ ಸಿನಿಮಾದ ನಿರ್ದೇಶಕ ಸುಕುಮಾರ್​ ಅವರು ಖುಷಿಪಟ್ಟಿದ್ದಾರೆ. ಅಲ್ಲು ಅರ್ಜುನ್​ ಅಭಿಮಾನಿಗಳಿಗೂ ತುಂಬ ಖುಷಿ ಆಗಿದೆ.

ರಾಜಮೌಳಿ ಅವರು ತುಂಬ ಸಿಂಪಲ್ ವ್ಯಕ್ತಿ. ವಿಶ್ವಾದ್ಯಂತ ಖ್ಯಾತಿ ಹೊಂದಿದ್ದರೂ ಕೂಡ ಅವರು ಜಂಭ ತೋರುವವರಲ್ಲ. ಅದಕ್ಕೆ ಈ ಭೇಟಿಯೇ ಲೇಟೆಸ್ಟ್​ ಉದಾಹರಣೆ. ಚಿತ್ರರಂಗದ ಇತರೆ ನಿರ್ದೇಶಕರ ಜೊತೆ ರಾಜಮೌಳಿ ಅವರು ಸ್ನೇಹ ಹೊಂದಿದ್ದಾರೆ. ನಿರ್ದೇಶಕ ಸುಕುಮಾರ್​ ಜೊತೆಗೂ ಅವರಿಗೆ ಒಳ್ಳೆಯ ಬಾಂಧವ್ಯ ಇದೆ. ಈ ಹಿನ್ನೆಲೆಯಲ್ಲಿ ಅವರು ‘ಪುಷ್ಪ 2’ ಚಿತ್ರದ ಸೆಟ್​ಗೆ ಭೇಟಿ ಕೊಟ್ಟಿದ್ದಾರೆ.

View this post on Instagram

A post shared by Sukumar B (@aryasukku)

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದ ಕಲಾವಿದರು ನಟಿಸುತ್ತಿರುವ ‘ಪುಷ್ಪ 2’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆ ನಿರ್ದೇಶಕ ಸುಕುಮಾರ್​ ಅವರು ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಈ ನಡುವೆ ರಾಜಮೌಳಿ ಅವರು ಸಿನಿಮಾದ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಕ್ಕೆ ನಿರ್ದಿಷ್ಟ ಕಾರಣ ಏನಾದರೂ ಇದೆಯಾ ಎಂಬ ಪ್ರಶ್ನೆ ಫ್ಯಾನ್ಸ್​ ತಲೆಯಲ್ಲಿ ಕೊರೆಯುತ್ತಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಅಪಘಾತ; ಕ್ಷಣಿಕ ಜೀವನದ ಬಗ್ಗೆ ಮಾತನಾಡಿದ ‘ಪುಷ್ಪ 2’ ನಟಿ

‘ನಮ್ಮ ಪುಷ್ಪ 2 ಸಿನಿಮಾದ ಸೆಟ್​ಗೆ ನಿರ್ದೇಶಕರ ಬಾಹುಬಲಿ ರಾಜಮೌಳಿ ಬಂದಿದ್ದಾರೆ. ಅವರನ್ನು ಇಲ್ಲಿ ಭೇಟಿ ಮಾಡಿದ್ದು ಮರೆಯಲಾಗದ ಕ್ಷಣ. ಅವರ ಉಪಸ್ಥಿತಿಯಿಂದಾಗಿ ಸೆಟ್​ಗೆ ಇನ್ನಷ್ಟು ಹುಮ್ಮಸ್ಸು ಬಂತು’ ಎಂದು ಸುಕುಮಾರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಸುಕುಮಾರ್​ ಮತ್ತು ರಾಜಮೌಳಿ ಜೊತೆ ಛಾಯಾಗ್ರಾಹಕ ಮಿರೋಸ್ಲಾ ಬ್ರೋಸೆಜ್​ ಕೂಡ ಈ ಫೋಟೋದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.