‘ನನಗೆ ನಾನೇ ಬಾಸ್’; ಬಿಗ್ ಬಾಸ್ ಎಂಟ್ರಿ ವಿಚಾರದ ಬಗ್ಗೆ ನಟಿಯ ಸ್ಪಷ್ಟನೆ
ಈ ಸ್ಟಾರ್ ನಟಿ ಬಿಗ್ ಬಾಸ್ಗೆ ಬರುತ್ತಾರೆ ಎನ್ನುವ ಸುದ್ದಿ ಹುಟ್ಟಲೂ ಒಂದು ಕಾರಣ ಇದೆ. ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಪ್ರೋಮೋ ಒಂದು ವೈರಲ್ ಆಯಿತು. ಈ ಪ್ರೋಮೋದಲ್ಲಿ ಬಿಗ್ ಬಾಸ್ಗೆ ಬರೋ ಸ್ಪರ್ಧಿಗಳ ಮುಖವನ್ನು ಬ್ಲರ್ ಮಾಡಿ ತೋರಿಸಲಾಗಿತ್ತು. ಇದರಲ್ಲಿ ಒಂದು ಫೋಟೋ ಹರಿಪ್ರಿಯಾ ಅವರ ಹೋಲಿಕೆ ಆಗಿತ್ತು.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಕ್ಕೆ ಉಳಿದಿರೋದು ಇನ್ನು ಎರಡು ದಿನ ಮಾತ್ರ. ಈ ಬಾರಿ ಬಿಗ್ ಬಾಸ್ಗೆ ಯಾರೆಲ್ಲ ಬರುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಇದಕ್ಕೆ ಸಂಬಂಧಿಸಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೇ ಕೆಲವು ಸೆಲೆಬ್ರಿಟಿಗಳು ಬಿಗ್ ಬಾಸ್ ಎಂಟ್ರಿ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಯಾರು? ಅವರು ಕೊಟ್ಟ ಸ್ಪಷ್ಟನೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ಬಾರಿ ಹರಿಪ್ರಿಯಾ ಇರುತ್ತಾರೆ ಎಂದು ಈ ಮೊದಲು ವರದಿ ಆಗಿತ್ತು. ಈ ಸುದ್ದಿ ಹುಟ್ಟಲೂ ಒಂದು ಕಾರಣ ಇದೆ. ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಪ್ರೋಮೋ ಒಂದು ವೈರಲ್ ಆಯಿತು. ಈ ಪ್ರೋಮೋದಲ್ಲಿ ಬಿಗ್ ಬಾಸ್ಗೆ ಬರೋ ಸ್ಪರ್ಧಿಗಳ ಮುಖವನ್ನು ಬ್ಲರ್ ಮಾಡಿ ತೋರಿಸಲಾಗಿತ್ತು. ಇದರಲ್ಲಿ ಒಂದು ಫೋಟೋ ಹರಿಪ್ರಿಯಾ ಅವರ ಹೋಲಿಕೆ ಆಗಿತ್ತು.
ಈ ಬಾರಿ ಹರಿಪ್ರಿಯಾ ಬಿಗ್ ಬಾಸ್ಗೆ ಬರುತ್ತಾರೆ ಎಂದು ಚರ್ಚೆ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಅವರು ಸ್ಪಷ್ಟನೆ ನೀಡಿದ್ದಾರೆ. ‘ಇಲ್ಲಪ್ಪಾ ಇಲ್ಲ. ನನಗೆ ನಾನೇ ಬಾಸು. ನಾನು ನಮ್ಮ ಮನೆ ಬಿಟ್ಟು ಯಾವ ಮನೆಗೂ ಹೋಗ್ತಿಲ್ಲ’ ಎಂದು ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ನನ್ನ ಸಿನಿಮಾಗೂ ಇಷ್ಟು ನರ್ವಸ್ ಆಗಿಲ್ಲ’; ರಿಷಬ್ ಎದುರು ಹೇಳಿಕೊಂಡ ಹರಿಪ್ರಿಯಾ
ಹರಿಪ್ರಿಯಾ ಅವರು ಹಲವು ಸಿನಿಮಾ ಆಫರ್ಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಬೆಲ್ ಬಾಟಂ 2’, ‘ಹ್ಯಾಪಿ ಎಂಡಿಂಗ್’, ‘ಲಗಾಮ್’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಾ ಇದ್ದಾರೆ. ಅವರ ನಟನೆಯ ಯಾವುದೇ ಸಿನಿಮಾ ಈ ವರ್ಷ ರಿಲೀಸ್ ಆಗಿಲ್ಲ. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆ ಕಳೆದ ವರ್ಷ ನಡೆದಿದೆ. ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ಕಾರಣಕ್ಕೂ ಅವರು ಬಿಗ್ ಬಾಸ್ಗೆ ಬರೋದು ಅನುಮಾನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.