ನಟಿ ಮೃಣಾಲ್ ಠಾಕೂರ್ (Mrunal Thakur) ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ. ಬಾಲಿವುಡ್ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರು ಸೂಪರ್ ಸ್ಟಾರ್ ಆಗಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಅವರ ಜೀವನ ಶೈಲಿ ಬದಲಾಗುತ್ತಿದೆ. ಈಗ ಅವರು ಮುಂಬೈನ ದುಬಾರಿ ಏರಿಯಾಗಳಲ್ಲಿ ಆಸ್ತಿ ಖರೀದಿ (Mrunal Thakur Property) ಮಾಡುತ್ತಿದ್ದಾರೆ. ಬಹುಕೋಟಿ ರೂಪಾಯಿ ಮೊತ್ತದ ಫ್ಲ್ಯಾಟ್ ಕೊಂಡುಕೊಳ್ಳುವ ಮೂಲಕ ಮೃಣಾಲ್ ಠಾಕೂರ್ ಸುದ್ದಿ ಆಗಿದ್ದಾರೆ. ಅಚ್ಚರಿ ಏನೆಂದರೆ, ಈಗ ಅವರು ಖರೀದಿ ಮಾಡಿರುವುದು ಕಂಗನಾ ರಣಾವತ್ (Kangana Ranaut) ಕುಟುಂಬಕ್ಕೆ ಸೇರಿದ ಪ್ರಾಪರ್ಟಿ! ಈ ಸುದ್ದಿ ಕೇಳಿದ ಮೃಣಾಲ್ ಠಾಕೂರ್ ಅಭಿಮಾನಿಗಳು ‘ವಾವ್.. ಇದಪ್ಪ ಬೆಳವಣಿಗೆ ಅಂದ್ರೆ’ ಎಂದು ಹೊಗಳುತ್ತಿದ್ದಾರೆ.
ಮುಂಬೈನ ಅಂದೇರಿಯಲ್ಲಿ ಕಂಗನಾ ರಣಾವತ್ ಅವರ ತಂದೆ ಅಮರ್ದೀಪ್ ರಣಾವತ್ ಒಡೆತನದಲ್ಲಿ ಇದ್ದ ಎರಡು ಫ್ಲಾಟ್ಗಳನ್ನು ಮೃಣಾಲ್ ಠಾಕೂರ್ ಖರೀದಿ ಮಾಡಿದ್ದಾರೆ. ಇದರ ಬೆಲೆ ಅಂದಾಜು 10 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮೃಣಾಲ್ ಠಾಕೂರ್ ಅವರು ಶೀಘ್ರದಲ್ಲೇ ಈ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಲಿದ್ದಾರೆ. ಸದ್ಯಕ್ಕೆ ಇಂಟೀರಿಯರ್ ಡಿಸೈನ್ ಕೆಲಸಗಳು ನಡೆಯುತ್ತಿವೆ ಎಂದು ವರದಿ ಆಗಿದೆ.
ಇದನ್ನೂ ಓದಿ: ಸೀತಾ ಮಹಾಲಕ್ಷ್ಮಿಯ ನೆನಪಿನಲ್ಲಿ ರಾಮ್; ಹೇಗಿದೆ ಮೃಣಾಲ್ ಠಾಕೂರ್-ದುಲ್ಕರ್ ಸಲ್ಮಾನ್ ನಡುವಿನ ಬಾಂಧವ್ಯ?
ಮೃಣಾಲ್ ಠಾಕೂರ್ ಅವರು ಬಣ್ಣದ ಬದುಕು ಆರಂಭಿಸಿದ್ದು ಹಿಂದಿ ಕಿರುತೆರೆಯಿಂದ. ಬಳಿಕ ಅವರಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಸಿಕ್ಕಿತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಮಾಡಿದ ಅವರಿಗೆ ದಕ್ಷಿಣ ಭಾರತದಿಂದಲೂ ಆಫರ್ ಸಿಗಲಾರಂಭಿಸಿತು. ಈಗ ಮೃಣಾಲ್ ಠಾಕೂರ್ ಅವರ ಕೈ ತುಂಬ ಸಿನಿಮಾಗಳಿವೆ. ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುವ ಮಟ್ಟಕ್ಕೆ ಅವರು ಬೆಳೆದಿದ್ದಾರೆ.
ಇದನ್ನೂ ಓದಿ: ‘ಸೀತಾ ರಾಮಂ’ ಸುಂದರಿ ಮೃಣಾಲ್ ಠಾಕೂರ್ ಜೊತೆ ಬಾದ್ಷಾ ಪ್ರೀತಿ-ಪ್ರೇಮ? ಸಿಕ್ತು ಸ್ಪಷ್ಟನೆ
ಹಿಂದಿಯಲ್ಲಿ ‘ಸೂಪರ್ 30’, ‘ಬಾಟ್ಲಾ ಹೌಸ್’, ‘ತೂಫಾನ್’, ‘ಜರ್ಸಿ’, ‘ಲಸ್ಟ್ ಸ್ಟೋರೀಸ್ 2’ ಮುಂತಾದ ಸಿನಿಮಾಗಳಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ತೆಲುಗಿನಲ್ಲಿ ಅವರು ನಟಿಸಿದ ಮೊದಲ ಸಿನಿಮಾ ‘ಸೀತಾ ರಾಮಂ’ ಸೂಪರ್ ಹಿಟ್ ಆಯಿತು. ಆ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಮಾಡಿದ ಸೀತಾ ಮಹಾಲಕ್ಷ್ಮೀ ಅಲಿಯಾಸ್ ಪ್ರಿನ್ಸೆಸ್ ನೂರ್ ಜಹಾನ್ ಪಾತ್ರ ಜನಮೆಚ್ಚುಗೆ ಪಡೆಯಿತು. 2023ರಲ್ಲಿ ತೆರೆಕಂಡ ‘ಹಾಯ್ ನಾನ್ನ’ ಚಿತ್ರ ಕೂಡ ಹಿಟ್ ಆಯಿತು. ಈಗ ಅವರು ವಿಜಯ್ ದೇವರಕೊಂಡ ಜೊತೆ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚಾಗುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಸದ್ಯಕ್ಕೆ ಅವರನ್ನು ಒಂದು ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.