ಇವಾಂಕಾ ಟ್ರಂಪ್​ಗೆ ಅಮಿತಾಭ್​ ಬಚ್ಚನ್​ನ ಪರಿಚಯಿಸಿದ ಮುಕೇಶ್ ಅಂಬಾನಿ

ಅಮಿತಾಭ್ ಬಚ್ಚನ್ ಅವರು ಉದ್ಯಮಿ ಮುಕೇಶ್ ಅಂಬಾನಿಯ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾಗೆ ಅಮಿತಾಭ್ ಬಚ್ಚನ್ ಅವರನ್ನು ಪರಿಚಯಿಸಿದ್ದಾರೆ ಮುಕೇಶ್. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇವಾಂಕಾ ಟ್ರಂಪ್​ಗೆ ಅಮಿತಾಭ್​ ಬಚ್ಚನ್​ನ ಪರಿಚಯಿಸಿದ ಮುಕೇಶ್ ಅಂಬಾನಿ
ಅಮಿತಾಭ್

Updated on: Mar 04, 2024 | 7:37 AM

ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಜಾಮ್​ನಗರದಲ್ಲಿ ನಡೆದಿವೆ. ಈ ಕಾರ್ಯಕ್ರಮಕ್ಕೆ ದೇಶ ವಿದೇಶದಿಂದ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಸಂಪೂರ್ಣ ಬಾಲಿವುಡ್ ಕಾರ್ಯಕ್ರಮದಲ್ಲಿ ಭಾಗಿ ಆಗಿದೆ. ಭಾನುವಾರದ (ಮಾರ್ಚ್ 4) ಕಾರ್ಯಕ್ರಮಕ್ಕೆ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಜಯಾ ಬಚ್ಚನ್, ಶ್ವೇತಾ ಬಚ್ಚನ್ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇವರು ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ.

ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಉದ್ಯಮಿ ಮುಕೇಶ್ ಅಂಬಾನಿಯ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮಿತಾಭ್ ಬಚ್ಚನ್ ಅವರನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾಗೆ ಪರಿಚಯಿಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಮೆರಿಕದ ಗಾಯಕ ಏಕಾನ್ ಅವರು ಜಾಮ್​ನಗರ್​ಗೆ ತೆರಳಿದ್ದಾರೆ. ಅವರು ಕೂಡ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ವರುಣ್ ಧವನ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ವಿಚ್ಛೇದನ ವಿಚಾರ

ಅಭಿಷೇಕ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಈ ವಿಚಾರ ಸುಳ್ಳು ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಅನಂತ್ ಅಂಬಾನಿ ಮದುವೆ ಪೂರ್ವ ಕಾರ್ಯಕ್ರಮಕ್ಕೆ ಇವರು ಒಟ್ಟಾಗಿ ಆಗಮಿಸಿದ್ದಾರೆ. ಈ ಮೂಲಕ ಹುಟ್ಟಿಕೊಂಡಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಈ ಮೊದಲು ಪ್ರೋ ಕಬ್ಬಡಿ ಕಾರ್ಯಕ್ರಮದಲ್ಲೂ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:  ಶೀಘ್ರವೇ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ? ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಹಲವು ಕಾಲ ಪ್ರೀತಿಸಿ ಮದುವೆ ಆದರು. ಆ ಬಳಿಕ ಅವರು ಹಾಯಾಗಿ ಸಂಸಾರ ನಡೆಸಿದ್ದಾರೆ. ಇವರಿಗೆ ಆರಾಧ್ಯಾ ಹೆಸರಿನ ಮಗಳು ಇದ್ದಾಳೆ. ಅವಳು ಸದ್ಯ ಶಿಕ್ಷಣದ ಬಗ್ಗೆ ಗಮನ ನೀಡುತ್ತಿದ್ದಾಳೆ. ಶೀಘ್ರವೇ ಅವಳು ಚಿತ್ರರಂಗಕ್ಕೆ ಬಂದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ