ಶ್ರದ್ಧಾ ಕಪೂರ್ ಬಳಿ ಇದೆ ಬರೋಬ್ಬರಿ 10 ಕೋಟಿ ರೂ ಮೌಲ್ಯದ ಶೂ ಕಲೆಕ್ಷನ್: ಒಟ್ಟು ಆಸ್ತಿ ಎಷ್ಟು?
Shraddha Kapoor: ನಟಿ ಶ್ರದ್ಧಾ ಕಪೂರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ, ದುಬಾರಿ ನಟಿಯಾದ ಶ್ರದ್ಧಾ ಬಳಿ 10 ಕೋಟಿ ಮೌಲ್ಯದ ಶೂ-ಚಪ್ಪಲಿಗಳೇ ಇವೆಯಂತೆ. ಅಂದಹಾಗೆ ನಟಿಯ ಒಟ್ಟು ಆಸ್ತಿ ಮೌಲ್ಯ ಎಷ್ಟು?
ಶ್ರದ್ಧಾ ಕಪೂರ್ (Shradha Kapoor) ಅವರಿಗೆ ಇಂದು (ಮಾರ್ಚ್ 3) ಹುಟ್ಟುಹಬ್ಬದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಹಾಕಿ ವಿಶ್ ತಿಳಿಸುತ್ತಿದ್ದಾರೆ. ಶ್ರದ್ಧಾ ಕಪೂರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 2011ರಲ್ಲಿ ರಿಲೀಸ್ ಆದ ‘ಲವ್ ಕಾ ದಿ ಎಂಡ್’ ಸಿನಿಮಾ ಮೂಲಕ ಅವರು ವೃತ್ತಿ ಬದುಕು ಆರಂಭಿಸಿದರು. ‘ಆಶಿಕಿ 2’ ಚಿತ್ರ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ನೀಡಿತು. ಅವರ ಬಳಿ ಲ್ಯಾಂಬೋರ್ಗಿನಿಯಂಥ ಕಾರಿದೆ. ಅವರ ಒಟ್ಟೂ ಆಸ್ತಿ ಬಗ್ಗೆ ಇಲ್ಲಿದೆ ವಿವರ.
2014ರಲ್ಲಿ ರಿಲೀಸ್ ಆದ ‘ಹೈದರ್’ (2014), ‘ಏಕ್ ವಿಲನ್’ (2014), ‘ಎಬಿಸಿಡಿ 2’ (2015), ‘ಬಾಘಿ’ (2016) ಅಂತಹ ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ನಟನೆಯ ಹಾಹರ್ ಕಾಮಿಡಿ ಸಿನಿಮಾ ‘ಸ್ತ್ರೀ’ (2018) ಸೂಪರ್ ಹಿಟ್ ಆಯಿತು. ಅವರ ಪಾತ್ರಕ್ಕೆ ಸಾಕಷ್ಟು ತೂಕ ಇದೆ. 2019ರಲ್ಲಿ ರಿಲೀಸ್ ಆದ ‘ಸಾಹೋ’ ಹಾಗೂ ‘ಚಿಚೋರೆ’ ಸಿನಿಮಾಗಳ ಅವರ ಆಸ್ತಿ ಮೊತ್ತವನ್ನು ಹೆಚ್ಚಿಸಿದೆ. ರಣಬೀರ್ ಕಪೂರ್ ನಟನೆಯ ‘ತು ಜೂಟಿ ಮೇ ಮಕ್ಕರ್’ ಸಿನಿಮಾ ಭರ್ಜರಿ ಕಮಾಯಿ ಮಾಡಿತು. ಈ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು ಅವರು.
ಇದನ್ನೂ ಓದಿ:4 ಕೋಟಿ ರೂಪಾಯಿಯ ಲ್ಯಾಂಬೊರ್ಗೀನಿ ಖರೀದಿಸಿದ ಶ್ರದ್ಧಾ ಕಪೂರ್; ಇದರ ವಿಶೇಷತೆಗಳೇನು?
ಶ್ರದ್ಧಾ ಅವರು ಆ್ಯಕ್ಟಿಂಗ್ನಲ್ಲಿ ಮೂಲಕ ಗಮನ ಸೆಳೆದಿದ್ದಾರೆ. 2019ರ ಫೋರ್ಬ್ಸ್ ಟಾಪ್ 100 ಸೆಲೆಬ್ರಿಟಿ ಲಿಸ್ಟ್ನಲ್ಲಿ ಅವರು ಹೆಸರು ಕೂಡ ಇತ್ತು. ಅವರಿಗೆ 26ನೇ ಸ್ಥಾನ ಸಿಕ್ಕಿತ್ತು. ಆ ವರ್ಷ ಅವರು ಬರೋಬ್ಬರಿ ಎಂಟು ಕೋಟಿ ರೂಪಾಯಿ ಸೇವ್ ಮಾಡಿಕೊಂಡಿದ್ದರು. ಶ್ರದ್ಧಾ ಕಪೂರ್ ಅವರ ಆಸ್ತಿ 123 ಕೋಟಿ ರೂಪಾಯಿ ಇದೆ. ಅವರು ಪ್ರತಿ ಚಿತ್ರಕ್ಕೆ 3-5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರು ಪ್ರತಿ ವರ್ಷ 8 ಕೋಟಿ ರೂಪಾಯಿ ದುಡಿಯುತ್ತಾರೆ. ಪ್ರತಿ ತಿಂಗಳು ಸರಾಸರಿ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ವೀಟ್, ಲಿಪ್ಟನ್, ದಿ ಬಾಡಿ ಶಾಪ್ ಸೇರಿ ಹಲವು ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ.
ಶ್ರದ್ಧಾಗೆ ಕಾರ್ ಬಗ್ಗೆ ಕ್ರೇಜ್ ಇದೆ. ಅವರ ಬಳಿ ಆಡಿ ಕ್ಯೂ7, ಮರ್ಸೀಡಿಸ್ ಬೆಂಜ್ ಜಿಎಲ್ಇ, ಬಿಎಂಡಬ್ಲ್ಯೂ 7 ಸೀರಿಸ್ ಕಾರು ಇದೆ. ಇತ್ತೀಚೆಗೆ ಅವರು ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿದ್ದರು. ಅವರು ಜುಹುದಲ್ಲಿ ಮನೆ ಹೊಂದಿದ್ದಾರೆ. ಇದು ಅವರು ಫ್ಯಾಮಿಲಿ 1987ರಲ್ಲಿ ಖರೀದಿಸಿದ ಮನೆ. ಇದರ ಬೆಲೆ 60 ಕೋಟಿ ರೂಪಾಯಿ. ಇದು ಸಮುದ್ರ ಕಡೆ ಮನೆ ಮಾಡಿದೆ. ಮಡ್ ಐಸ್ಲ್ಯಾಂಡ್ನಲ್ಲಿ 20 ಕೋಟಿ ಬೆಲೆ ಬಾಳುವ ಬಂಗಲೆ ಹೊಂದಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ.
ಶ್ರದ್ಧಾ ಕಪೂರ್ ಅವರು ಟ್ರಿಪ್ ಮಾಡೋಕೆ, ಶ್ಯೂ ಖರೀದಿ ಮಾಡೋಕೆ, ಬ್ಯಾಗ್ ಖರೀದಿ ಮಾಡಲು ಹೆಚ್ಚು ಹಣ ವ್ಯಯಿಸುತತ್ತಾರೆ. ಅವರ ಬಳಿ 10 ಕೋಟಿ ರೂಪಾಯಿ ಬೆಲೆ ಬಾಳುವ ಶ್ಯೂಗಳೇ ಇದೆ. ಅವರ ಬಳಿ ಹಲವು ಕಂಪನಿಯ ಹ್ಯಾಂಡ್ ಬ್ಯಾಗ್ ಇದು ಇದರ ಬೆಲೆ ಕೂಡ ಕೋಟಿ ಮೀರುತ್ತದೆ. ಶ್ರದ್ಧಾ ಕಪೂರ್ ಅವರ ನಟನೆಯ ‘ತು ಜೂಟಿ ಮೇ ಮಕ್ಕರ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈಗ ಅವರು ‘ಸ್ತ್ರೀ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇದು ‘ಸ್ತ್ರೀ’ ಸಿನಿಮಾದ ಮುಂದುವರಿದ ಭಾಗ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Sun, 3 March 24