​Mukesh Khanna: ‘ಶಕ್ತಿಮಾನ್​’ ಸಿನಿಮಾ ಬಜೆಟ್​ 300 ಕೋಟಿ ರೂಪಾಯಿ; ಕೆಲಸ ತಡ ಆಗಿದ್ದಕ್ಕೆ ಕಾರಣ ತಿಳಿಸಿದ ಮುಕೇಶ್​ ಖನ್ನಾ

Shaktimaan Movie: ‘ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ತುಂಬಾ ಬೆಳವಣಿಗೆಗಳು ನಡೆಯುತ್ತಿವೆ’ ಎಂದು ಮುಕೇಶ್​ ಖನ್ನಾ ಹೇಳಿದ್ದಾರೆ.

​Mukesh Khanna: ‘ಶಕ್ತಿಮಾನ್​’ ಸಿನಿಮಾ ಬಜೆಟ್​ 300 ಕೋಟಿ ರೂಪಾಯಿ; ಕೆಲಸ ತಡ ಆಗಿದ್ದಕ್ಕೆ ಕಾರಣ ತಿಳಿಸಿದ ಮುಕೇಶ್​ ಖನ್ನಾ
ಮುಕೇಶ್​ ಖನ್ನಾ
Edited By:

Updated on: Jun 06, 2023 | 6:27 AM

ಕಿರುತೆರೆಯಲ್ಲಿ ಪ್ರಸಾರವಾದ ‘ಶಕ್ತಿಮಾನ್​’ ಧಾರಾವಾಹಿಯನ್ನು(​Shaktimaan Serial) ಮರೆಯಲು ಸಾಧ್ಯವಿಲ್ಲ. ಈ ಸೀರಿಯಲ್​ನಲ್ಲಿ ಮುಕೇಶ್​ ಖನ್ನಾ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಇಂಡಿಯನ್​ ಸೂಪರ್​ ಹೀರೋ ಆಗಿ ಅವರು ಮಿಂಚಿದ್ದರು. ಮಕ್ಕಳಿಗಂತೂ ‘ಶಕ್ತಿಮಾನ್​’ ಎಂದರೆ ಅಚ್ಚುಮೆಚ್ಚು. ಆತನ ಸಾಹಸಗಳು ಒಂದೆರಡಲ್ಲ. ಇಷ್ಟೆಲ್ಲ ಛಾಪು ಮೂಡಿಸಿರುವ ಈ ದೇಸಿ ಸೂಪರ್​ ಹೀರೋ ಪಾತ್ರವನ್ನೇ ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ (Shaktimaan Movie) ಸಿದ್ಧವಾಗುತ್ತಿದೆ. ಆ ಕುರಿತು ಬಹಳ ಹಿಂದೆಯೇ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೂ ಕೂಡ ‘ಶಕ್ತಿಮಾನ್​’ ಸಿನಿಮಾ ಸೆಟ್ಟೇರಲು ವಿಳಂಬ ಆಗುತ್ತಿವೆ. ಅದಕ್ಕೆ ಕಾರಣ ಏನು ಎಂಬುದನ್ನು ಮುಕೇಶ್​ ಖನ್ನಾ (​Mukesh Khanna) ತಿಳಿಸಿದ್ದಾರೆ. ಯೂಟ್ಯೂಬ್​ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಇದು ತುಂಬ ದೊಡ್ಡ ಸಿನಿಮಾ ಆಗಲಿದೆ. ಇದರ ಬಜೆಟ್​ 200-300 ಕೋಟಿ ರೂಪಾಯಿ. ‘ಸ್ಪೈಡರ್​ ಮ್ಯಾನ್​’ ಸಿನಿಮಾ ಮಾಡಿದ್ದ ಸೋನಿ ಪಿಕ್ಚರ್ಸ್​ ಸಂಸ್ಥೆಯವರು ‘ಶಕ್ತಿಮಾನ್​’ ಸಿನಿಮಾ ಮಾಡಲಿದ್ದಾರೆ. ಆದರೆ ಸೆಟ್ಟೇರುವುದು ತಡವಾಗುತ್ತಿದೆ. ಮೊದಲು ಕೊರೊನಾ ಬಂತು. ಅದರಿಂದ ವಿಳಂಬ ಆಯಿತು’ ಎಂದು ಮುಕೇಶ್​ ಖನ್ನಾ ಹೇಳಿದ್ದಾರೆ.

ಇದನ್ನೂ ಓದಿ: ‘ಲೈಂಗಿಕ ಸಂಪರ್ಕ ಹೊಂದಬೇಕು ಎಂದು ಬರುವ ಹುಡುಗಿಯರ ನಂಬಬೇಡಿ’; ಹುಡುಗರಿಗೆ ಶಕ್ತಿಮಾನ್ ಕೊಟ್ರು ಟಿಪ್ಸ್

‘ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ತುಂಬಾ ವಿಚಾರಗಳು ನಡೆಯುತ್ತಿವೆ. ಆದರೆ ಆ ಬಗ್ಗೆ ನಾನು ಮಾತನಾಡುವಂತಿಲ್ಲ. ನಾನು ಶಕ್ತಿಮಾನ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನಾ ಎಂಬುದು ದೊಡ್ಡ ಪ್ರಶ್ನೆ. ಬೇರೆ ಯಾರಾದರೂ ಶಕ್ತಿಮಾನ್​ ಪಾತ್ರ ಮಾಡುತ್ತಾರಾ? ಆ ಬಗ್ಗೆ ನಾನು ಬಾಯಿ ಬಿಡುವಂತಿಲ್ಲ. ಇದೊಂದು ಕಮರ್ಷಿಯಲ್​ ಸಿನಿಮಾ. ದುಡ್ಡಿನ ಮಾತುಕತೆ ಸಾಕಷ್ಟು ಇರುತ್ತದೆ. ಈ ಸಿನಿಮಾದಲ್ಲಿ ನಾನು ಇರುತ್ತೇನೆ. ನನ್ನನ್ನು ಬಿಟ್ಟು ಈ ಸಿನಿಮಾ ಮಾಡೋಕೆ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತು’ ಎಂದಿದ್ದಾರೆ ಮುಕೇಶ್​ ಖನ್ನಾ.

ಇದನ್ನೂ ಓದಿ: ಬೆಳ್ಳಿತೆರೆ ಮೇಲೆ ಬರಲಿದೆ ‘ಶಕ್ತಿಮಾನ್​’ ಧಾರಾವಾಹಿ; ಹೀರೋ ಬಗ್ಗೆ ಗುಟ್ಟು ಕಾಯ್ದುಕೊಂಡ ಸೋನಿ ಪಿಕ್ಚರ್ಸ್​

ಈ ಚಿತ್ರದಲ್ಲಿ ಮುಕೇಶ್​ ಖನ್ನಾ ಇರುತ್ತಾರೆ ಎಂಬುದು ಹೌದಾದರೂ ಅವರು ಶಕ್ತಿಮಾನ್​ ವೇಷದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಯಾಕೆಂದರೆ ನಿರ್ಮಾಪಕರ ನಿರ್ಧಾರವೇ ಹಾಗಿದೆ. ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಮುಕೇಶ್​ ಖನ್ನಾ ಹೇಳಿದ್ದಾರೆ. ರಣವೀರ್​ ಸಿಂಗ್​ ಅವರು ಶಕ್ತಿಮಾನ್​ ಆಗಿ ಕಾಣಿಸಿಕೊಳ್ಳಬಹುದು ಎಂಬ ಗಾಸಿಪ್​ ಹರಿದಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:49 pm, Mon, 5 June 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us