AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ

‘ರಾಮಾಯಣ’ ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರ ಅವರು ರಣಬೀರ್ ಕಪೂರ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಅನಿಮಲ್’ ಯಶಸ್ಸಿನ ಬಳಿಕ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇದೆ. ಈಗಾಗಲೇ ಪ್ರಚಾರ ಕಾರ್ಯ ಜೋರಾಗಿ ಶುರುವಾಗಿದೆ.

ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ
Ranbir KapoorImage Credit source: Prime Focus Studios
ಮದನ್​ ಕುಮಾರ್​
|

Updated on: Apr 17, 2026 | 3:40 PM

Share

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಆ ಸಿನಿಮಾದ ಬಿಡುಗಡೆಗೂ ಮೊದಲೇ ಅವರು ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದಾರೆ. ಪ್ರತಿಷ್ಠಿತ ‘ಟೈಮ್’ (TIME) ಮ್ಯಾಗಜಿನ್ ಬಿಡುಗಡೆ ಮಾಡಿರುವ 2026ನೇ ಸಾಲಿನ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ರಣಬೀರ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ರಣಬೀರ್ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ‘ರಾಮಾಯಣ’ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ (Namit Malhotra) ಅವರು ರಣಬೀರ್ ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ರಣಬೀರ್ ಕಪೂರ್ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ನಮಿತ್, ‘ಶ್ರೀರಾಮನ ಪಾತ್ರವನ್ನು ನಿರ್ವಹಿಸಲು ನಿಮಗಿಂತ ಉತ್ತಮ ನಟ ಬೇರೊಬ್ಬರಿಲ್ಲ. ನೀವು ನಿಸ್ಸಂದೇಹವಾಗಿ ನಮ್ಮ ತಲೆಮಾರಿನ ಅತ್ಯುತ್ತಮ ನಟ’ ಎಂದು ಬಣ್ಣಿಸಿದ್ದಾರೆ. ಬೃಹತ್ ಬಜೆಟ್​​ನಲ್ಲಿ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ರಾಮಾಯಣ’ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ರಣಬೀರ್ ಕಪೂರ್ ಅವರು ಶ್ರೀರಾಮನ ಪಾತ್ರ ಮಾಡುತ್ತಿದ್ದು, ರಾವಣನಾಗಿ ‘ರಾಕಿಂಗ್ ಸ್ಟಾರ್’ ಯಶ್ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಿದ್ದಾರೆ. ರವಿ ದುಬೆ ಅವರು ಲಕ್ಷ್ಮಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈಗಾಗಲೇ ಟೀಸರ್ ಮೂಲಕ ‘ರಾಮಾಯಣ’ ಸಿನಿಮಾ ಕೌತುಕ ಮೂಡಿಸಿದೆ. ಎರಡು ಪಾರ್ಟ್​ಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ‘ರಾಮಾಯಣ ಭಾಗ 1’ ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ವಿದೇಶದಲ್ಲಿ ಈ ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ದ್ವಿಪಾತ್ರ: ಶ್ರೀರಾಮನ ಜೊತೆಗೆ ಪರಶುರಾಮನ ದರ್ಶನ

ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡುತ್ತಾರೆ ಎಂದಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದಿನ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಅವರು ಗೋಮಾಂಸ ತಿನ್ನುವುದನ್ನು ಒಪ್ಪಿಕೊಂಡಿದ್ದರು. ಹಾಗಾಗಿ ವಿರೋಧ ಎದುರಾಗಿತ್ತು. ಅಂತಿಮವಾಗಿ ಅವರೇ ಶ್ರೀರಾಮನ ಪಾತ್ರಕ್ಕೆ ಆಯ್ಕೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಒಂದೇ ಕುಟುಂಬ 6 ಜನ ಸಜೀವದಹನ; ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಎಸ್​​ಪಿ
ಒಂದೇ ಕುಟುಂಬ 6 ಜನ ಸಜೀವದಹನ; ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಎಸ್​​ಪಿ
ಬೆಂಗಳೂರಿನಲ್ಲಿ ನಿಲ್ಲದ ಡ್ರ್ಯಾಗ್ ರೇಸ್ ಹಾಗೂ ಸ್ಟಂಟ್‌ಗಳ ಹುಚ್ಚಾಟ!
ಬೆಂಗಳೂರಿನಲ್ಲಿ ನಿಲ್ಲದ ಡ್ರ್ಯಾಗ್ ರೇಸ್ ಹಾಗೂ ಸ್ಟಂಟ್‌ಗಳ ಹುಚ್ಚಾಟ!
ದೇವರು ಕೈಗಳನ್ನು ಕೊಟ್ಟಿಲ್ಲ ಎಂಬ ವಿಷಾದವಿಲ್ಲ
ದೇವರು ಕೈಗಳನ್ನು ಕೊಟ್ಟಿಲ್ಲ ಎಂಬ ವಿಷಾದವಿಲ್ಲ
ಸಿದ್ದರಾಮಯ್ಯ ಗಟ್ಟಿಯಾಗಿ ನಿಲ್ಲಬೇಕು, ಆದರೆ ಅವರು ನಿಲ್ಲುತ್ತಿಲ್ಲ
ಸಿದ್ದರಾಮಯ್ಯ ಗಟ್ಟಿಯಾಗಿ ನಿಲ್ಲಬೇಕು, ಆದರೆ ಅವರು ನಿಲ್ಲುತ್ತಿಲ್ಲ
ಮನೆಯೊಳಗೆ ಅವಿತಿತ್ತು 16 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ! ವಿಡಿಯೋ ಇಲ್ಲಿದೆ
ಮನೆಯೊಳಗೆ ಅವಿತಿತ್ತು 16 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ! ವಿಡಿಯೋ ಇಲ್ಲಿದೆ
6 ಮಂದಿ ಸಜೀವ ದಹನ: ಅಪಘಾತ ಅದೆಷ್ಟು ಭಯಾನಕವಾಗಿದೆ ನೋಡಿ
6 ಮಂದಿ ಸಜೀವ ದಹನ: ಅಪಘಾತ ಅದೆಷ್ಟು ಭಯಾನಕವಾಗಿದೆ ನೋಡಿ
SSLC ಪರೀಕ್ಷೆ: ಹಿಂದಿ ಭಾಷೆಗೆ ಸಿಗುತ್ತಾ ಗ್ರೇಸ್ ಮಾರ್ಕ್ಸ್?
SSLC ಪರೀಕ್ಷೆ: ಹಿಂದಿ ಭಾಷೆಗೆ ಸಿಗುತ್ತಾ ಗ್ರೇಸ್ ಮಾರ್ಕ್ಸ್?
ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಹೇಗೆ ದಾಳಿ ಮಾಡಿದ್ರು ನೋಡಿ?
ಲಷ್ಕರ್ ಸಹ-ಸಂಸ್ಥಾಪಕ ಅಮೀರ್ ಹಮ್ಜಾ ಮೇಲೆ ಹೇಗೆ ದಾಳಿ ಮಾಡಿದ್ರು ನೋಡಿ?
ಸತೀಶ್​​ ಜಾರಕಿಹೊಳಿ ಜೊತೆಗಿನ ಮೀಟಿಂಗ್​​ ರಹಸ್ಯ ಬಿಚ್ಚಿಟ್ಟ ಡಿಕೆಶಿ
ಸತೀಶ್​​ ಜಾರಕಿಹೊಳಿ ಜೊತೆಗಿನ ಮೀಟಿಂಗ್​​ ರಹಸ್ಯ ಬಿಚ್ಚಿಟ್ಟ ಡಿಕೆಶಿ
ಕಾಲಿಗೆ ಬೀಳಲು ಬಂದ್ರೆ ಹೆದರಿ ಹಿಂದಕ್ಕೆ ಓಡಿದ ಸಿಎಂ ಮಮತಾ ಬ್ಯಾನರ್ಜಿ
ಕಾಲಿಗೆ ಬೀಳಲು ಬಂದ್ರೆ ಹೆದರಿ ಹಿಂದಕ್ಕೆ ಓಡಿದ ಸಿಎಂ ಮಮತಾ ಬ್ಯಾನರ್ಜಿ