ಆಲಿಯಾಗೆ ನೀತಾ ಅಂಬಾನಿಯಿಂದ ಅವಮಾನ ಆಗಿದ್ದು ನಿಜವೇ? ಇಲ್ಲಿದೆ ಅಸಲಿ ವಿಡಿಯೋ
ನೀತಾ ಅಂಬಾನಿ ಆಲಿಯಾ ಭಟ್‌ಗೆ ಅವಮಾನ ಮಾಡಿದ್ದಾರೆ ಎಂಬ ವೈರಲ್ ವಿಡಿಯೋ ವಾಸ್ತವಕ್ಕೆ ದೂರ. ಇದು ಎಡಿಟ್ ಮಾಡಿದ ವಿಡಿಯೋ. ಮೂಲ ಸಂಭಾಷಣೆಯಲ್ಲಿ ಆಲಿಯಾ ನೀತಾ ಅವರನ್ನು 'ಭಾಭಿ' ಎಂದು ಕರೆದರೆ, ನೀತಾ ಪ್ರೀತಿಯಿಂದ 'ಹೆಲೋ ಆಲಿಯಾ' ಎಂದಿದ್ದರು. ಈ ವಿಡಿಯೋವನ್ನು ತಮಗೆ ಬೇಕಾದಂತೆ ಕತ್ತರಿಸಿ ಸುಳ್ಳು ಕಥೆ ಸೃಷ್ಟಿಸಲಾಗಿದೆ.

ಅಂಬಾನಿ ಕುಟುಂಬ ಭಾರತದ ಶ್ರೀಮಂತ ಮನೆತನಗಳಲ್ಲಿ ಒಂದು. ಅವರ ಮನೆಯ ಮದುವೆಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಬ್ಯಾಕ್ ಡ್ಯಾನ್ಸರ್ಗಳಾಗಿ ನೃತ್ಯ ಮಾಡುತ್ತಾರೆ. ಇನ್ನು, ಅವರ ಮನೆಯಲ್ಲಿ ಊಟ ಬಡಿಸೋಕೂ ಸೆಲೆಬ್ರಿಟಿಗಳು ರೆಡಿ ಇರುತ್ತಾರೆ. ಇತ್ತೀಚಿಗಿನ ಅವಾರ್ಡ್ ಫಂಕ್ಷನ್ ಅಲ್ಲಿ ನೀತಾ ಅಂಬಾನಿ ಅವರು ಆಲಿಯಾಗೆ ಅವಮಾನ ಮಾಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿತ್ತು. ಆದರೆ, ಇದು ಎಡಿಟ್ ಮಾಡಿದ ವಿಡಿಯೋ ಅನ್ನೋದು ಸ್ಪಷ್ಟವಾಗಿದೆ.
ಆಲಿಯಾ ಭಟ್ ಅವರು ಇತ್ತೀಚೆಗೆ ‘ಸ್ಕ್ರೀನ್ ಅವಾರ್ಡ್’ ಫಂಕ್ಷನ್ ಅನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ನೀತಾ ಅಂಬಾನಿ ಅವರನ್ನು ವೇದಿಕೆಯ ಮೇಲೆ ಕರೆಯಬೇಕಿತ್ತು. ಆ ಸಂದರ್ಭದಲ್ಲಿ ಆಲಿಯಾ ಭಟ್ ಅವರು ಭಾಭಿ (ಅತ್ತಿಗೆ) ವೇದಿಕೆ ಮೇಲೆ ಬನ್ನಿ ಎಂದರು. ಆಗ ನೀತಾ, ‘ಹೆಲ್ಲೋ ಆಲಿಯಾ’ ಎಂದರು. ಆಗ ಆಲಿಯಾ ಭಟ್ ಅವರು ‘ಥ್ಯಾಂಕ್ ಯೂ ನೀತಾ ಮ್ಯಾಮ್’ ಎಂದರು. ನೀತಾ ಅಂಬಾನಿ ಹೆಲ್ಲೋ ಎಂದು ಹೇಳುವ ಧಾಟಿ ಆಲಿಯಾನ ಭಯ ಬೀಳಿಸಿತು ಎಂಬ ರೀತಿಯಲ್ಲಿ ವಿಡಿಯೋ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.
ಇದನ್ನೂ ಓದಿ: ಮತ್ತೆ ತೆಲುಗು ಸಿನಿಮಾನಲ್ಲಿ ನಟಿಸಲಿರುವ ಆಲಿಯಾ ಭಟ್, ನಾಯಕ ಯಾರು?
ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ. ಆಲಿಯಾ ಭಟ್ ಅವರು ಆರಂಭದಲ್ಲಿ ನೀತಾ ಮುಕೇಶ್ ಅಂಬಾನಿ ಎಂದೇ ಕರೆದರು ಮತ್ತು ಅವರು ಯಾರು ಎಂಬುದನ್ನು ವಿವರಿಸಿದರು. ನಂತರ ನೀತಾ ಅವರನ್ನು ವೇದಿಕೆ ಮೇಲೆ ಕರೆಯುವಾಗ, ‘ಬಾಭಿ ವೇದಿಕೆಯ ಮೇಲೆ ಬನ್ನಿ’ ಎಂದರು. ವೇದಿಕೆ ಮೇಲೆ ಬಂದ ನೀತಾ, ‘ಹೆಲ್ಲೋ ಆಲಿಯಾ’ ಎಂದರು. ಇದಕ್ಕೆ ಪ್ರತಿಯಾಗಿ ಆಲಿಯಾ ಮುದ್ದಾಗಿ ನಕ್ಕರು. ಇಲ್ಲಿಗೆ ಇವರ ಸಂಭಾಷಣೆ ಕೊನೆಯಾಗಿದೆ. ನಂತರ ಅವಾರ್ಡ್ ನೀಡುವ ಕೆಲಸ ಆಗಿದೆ. ಕೊನೆಯಲ್ಲಿ ಆಲಿಯಾ ಭಟ್ ಅವರು ‘ಥ್ಯಾಂಕ್ ಯೂ ಸೋ ಮಚ್ ನೀತಾ ಮ್ಯಾಮ್’ ಎಂದಿದ್ದಾರೆ. ಇದೆಲ್ಲವನ್ನೂ ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಆಲಿಯಾಗೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ಮಾಡಲಾಗಿದೆ.
View this post on Instagram
ನೀತಾ ಹಾಗೂ ಆಲಿಯಾ ಮಧ್ಯೆ ಒಳ್ಳೆಯ ಸಂಬಂಧ ಇದೆ. ಆಲಿಯಾ ಹಿರಿಯ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಮಗಳು. ಹೀಗಾಗಿ, ಆಲಿಯಾ ಅವರನ್ನು ನೀತಾ ಅವರು ಸಣ್ಣ ವಯಸ್ಸಿನಿಂದ ನೋಡುತ್ತಾ ಬರುತ್ತಿದ್ದಾರೆ. ಹೀಗಾಗಿ, ಆಲಿಯಾ ಪ್ರೀತಿಯಿಂದ ಭಾಭಿ ಎಂದು ಕರೆದಿದ್ದಕ್ಕೆ ಅವರಿಗೆ ಯಾವುದೇ ವಿರೋಧ ಇಲ್ಲ. ಸದ್ಯ ಎಡಿಟ್ ಮಾಡಲಾದ ವಿಡಿಯೋ ವೈರಲ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:46 am, Tue, 21 April 26




