ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರು ಆಗಾಗ ಜನರ ಗಮನ ಸೆಳೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಾರೆ. ಬಾಲಿವುಡ್ನಲ್ಲಿ ನೆಪೋಟಿಸಂ ಪೋಷಿಸುವ ವ್ಯಕ್ತಿ ಎಂಬ ಕಾರಣಕ್ಕೆ ಕರಣ್ ಜೋಹರ್ ಅವರನ್ನು ಕಂಡರೆ ಬಹುತೇಕರಿಗೆ ಅಸಮಾಧಾನ ಇದೆ. ಈಗ ಕರಣ್ ಜೋಹರ್ ಅವರ ಹೊಸ ಫೋಟೋ ವೈರಲ್ ಆಗಿದೆ. ಆ ಫೋಟೋದಲ್ಲಿ ಅವರು ಸಖತ್ ತೆಳ್ಳಗೆ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಏನಾದರೂ ಕಾಯಿಲೆ ಇರಬಹುದೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಹಾಸ್ಯ ಕಲಾವಿವ ಹರ್ಷ್ ಗುಜ್ರಾಲ್ ಜೊತೆ ಕರಣ್ ಜೋಹರ್ ಅವರು ಫೋಸ್ ನೀಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಅನುಮಾನ ಮೂಡುವಂತಿದೆ. ಏನೋ ಅನಾರೋಗ್ಯ ಕಾಡುತ್ತಿರುವುದುದರಿಂದ ಕರಣ್ ಜೋಹರ್ ಇಷ್ಟೊಂದು ಸ್ಲಿಮ್ ಆಗಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ದೇಹದ ತೂಕ ಕಡಿಮೆ ಆಗುತ್ತಿರುವುದಕ್ಕೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
Karan Johar looks sick, like highly anorexic and I am seriously concerned. All the negativity and jealousy has ruined his health evidently. His quest to make Alia the No. 1 Indian star has brought him nothing but haters and negativity.
Btw who is this guy? Kjo’s date? pic.twitter.com/oJmHkMtOOF
— 🐦 (@Iwasamwill) October 5, 2024
‘ಕರಣ್ ಜೋಹರ್ ಅವರಿಗೆ ಅನಾರೋಗ್ಯ ಆದಂತಿದೆ. ನನಗೆ ಅವರ ಬಗ್ಗೆ ಕಳವಳ ಉಂಟಾಗಿದೆ. ನೆಗೆಟಿವ್ ವಿಚಾರಗಳು ಮತ್ತು ಹೊಟ್ಟೆಕಿಚ್ಚು ಅವರ ಆರೋಗ್ಯವನ್ನು ಹಾಳು ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆಲಿಯಾ ಭಟ್ ಅವರನ್ನು ನಂಬರ್ 1 ಸ್ಟಾರ್ ಮಾಡಬೇಕು ಎಂಬ ಪ್ರಯತ್ನದಿಂದ ಕರಣ್ ಜೋಹರ್ ಅವರಿಗೆ ಸಿಕ್ಕಿದ್ದು ಕೇವಲ ದ್ವೇಷ ಮತ್ತು ನೆಗೆಟಿವಿಟಿ’ ಎಂದು ಒಂದು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್
ವೈರಲ್ ಆಗಿರುವ ಫೋಟೋ ನೋಡಿ ಜನರು ಅನೇಕ ರೀತಿಯಲ್ಲಿ ಊಹೆ ಮಾಡಿಕೊಂಡಿದ್ದಾರೆ. ಕರಣ್ ಜೋಹರ್ ನಶೆಯಲ್ಲಿ ಇರಬಹುದು. ಆ ಕಾರಣದಿಂದಲೇ ಅವರು ದಿನದಿಂದ ದಿನಕ್ಕೆ ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ ಎಂಬ ಕಮೆಂಟ್ ಕೂಡ ಬಂದಿದೆ. ನಿರ್ಮಾಪಕನಾಗಿ, ನಿರ್ದೇಶಕನಾಗಿ ಮಾತ್ರವಲ್ಲದೇ ನಿರೂಪಕನಾಗಿಯೂ ಕರಣ್ ಜೋಹರ್ ಅವರು ಫೇಮಸ್ ಆಗಿದ್ದಾರೆ. ‘ಕಾಫಿ ವಿತ್ ಕರಣ್’ ಕಾರ್ಯಕ್ರಮಕ್ಕೆ ಸಖತ್ ಜನಪ್ರಿಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.