ಬಾಲಿವುಡ್ ಡಾನ್ಸರ್, ನಟಿ ನೋರಾ ಫತೇಹಿ ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಅವರು ಕಾಣಿಸಿಕೊಂಡ ಹಾಡುಗಳು ಪಡ್ಡೆಹುಡುಗರ ನಿದ್ದೆಗೆಡಿಸುವುದಲ್ಲದೇ, ಚಿತ್ರಕ್ಕೆ ಬಹುದೊಡ್ಡ ಮೈಲೇಜ್ ನೀಡುತ್ತವೆ. ಇದೀಗ ಜಾನ್ ಅಬ್ರಹಾಂ ನಟನೆಯ ‘ಸತ್ಯಮೇವ ಜಯತೆ 2’ ಚಿತ್ರದ ‘ಕುಸು ಕುಸು’ ಹಾಡು ಬಿಡುಗಡೆಯಾಗಿದ್ದು, ಅದರಲ್ಲಿ ನೋರಾ ಸೊಂಟ ಬಳುಕಿಸುತ್ತಾ, ಬೆಲ್ಲಿ ಡಾನ್ಸ್ ಮಾಡಿದ್ದಾರೆ. ಇದು ಸಖತ್ ಹಿಟ್ ಆಗಿದ್ದು, ಬಿಡುಗಡೆಗೊಂಡ ಐದು ದಿನಗಳೊಳಗೆ 50 ಮಿಲಿಯನ್ ವೀಕ್ಷಣೆ ಕಂಡಿದೆ. ಇದೀಗ ಹಾಡು ಮತ್ತೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದು, ನೆಟ್ಟಿಗರು ಸಖತ್ ತಮಾಷೆಯ ಮೀಮ್ಗಳನ್ನು ಹರಿಬಿಡುತ್ತಾರೆ. ಇದಕ್ಕೆ ಕಾರಣ, ‘ಕುಸು ಕುಸು’ ಎಂದರೆ ತಮಿಳು ಭಾಷೆಯಲ್ಲಿ ಅಪಾನವಾಯು ಎಂದರ್ಥ. ಇದೇ ಕಾರಣಕ್ಕೆ, ನೋರಾ ಕಾಣಿಸಿಕೊಂಡಿರುವ ‘ಕುಸು ಕುಸು’ ಸಖತ್ ಸುದ್ದಿಯಾಗುತ್ತಿದ್ದು, ಬಗೆಬಗೆಯ ಮೀಮ್ಗಳಿಗೆ ಆಹಾರವಾಗಿದೆ. ಅಂತಹ ಹಲವು ಮೀಮ್ಗಳು ಇಲ್ಲಿವೆ.
Oh. My. God!
CC: Tamil Nadu. pic.twitter.com/KeOLOB4OS7— Karthik ?? (@beastoftraal) November 9, 2021
Haha ?#KusuKusu means fart in Tamil ? https://t.co/dXWrJcont4
— hariprasad (@Hari2tweets) November 9, 2021
????? OMG! Can’t stop laughing! Would make for a great Gelusil ad. What say? @LifeWorkMatters @Codanda @shirtysharath @Swathirishi
— Ranjini Ramachandran (@ranjini_2) November 9, 2021
Will there be any lyrics in the song?? Or only sound??
— LN (@Chaukanna_Anna) November 9, 2021
Kusukusu, coming out on November 10th: don’t even ask where from ? ?
— Anuj (@violinmirage) November 9, 2021
@TSeries always consult Tamilnadu first. Always ??
— sharada ramanathan (@sharadaramanat1) November 9, 2021
ಟ್ವಿಟರ್ ಬಳಕೆದಾರರು ಬಹಳ ಮಜವಾಗಿ ಪ್ರತಿಕ್ರಿಯಿಸುತ್ತಿದ್ದು, ಟಿ ಸೀರೀಸ್ ಮೊದಲು ತಮಿಳುನಾಡು ಅವರನ್ನು ಒಮ್ಮೆ ಸಂಪರ್ಕಿಸಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಹಲವರು, ‘ಕುಸು ಕುಸು ನವೆಂಬರ್ 10ರಿಂದ ಬಿಡುಗಡೆಯಾಗಿದೆ. ಎಲ್ಲಿ ಎಂದು ಕೇಳಬೇಡಿ ಎಂದು ತಮಾಷೆ ಮಾಡಿದ್ಧಾರೆ. ಮತ್ತೊಬ್ಬರು ‘ಹಾಡಿನಲ್ಲಿ ಸಾಹಿತ್ಯವಿದೆಯೇ ಅಥವಾ ಶಬ್ಧ ಮಾತ್ರವೇ?’ ಎಂದು ನಕ್ಕಿದ್ಧಾರೆ. ಒಟ್ಟಿನಲ್ಲಿ ಹಾಡನ್ನು ಜನರು ಸಖತ್ ಎಂಜಾಯ್ ಮಾಡಿದ್ದು, ಅವುಗಳೊಂದಿಗೆ ಮೀಮ್ಗಳನ್ನು ನೋಡಿ ನಕ್ಕು ಹಗುರಾಗಿದ್ದಾರೆ.
ಒಂದು ಭಾಷೆಯ ಪದಗಳು ಮತ್ತೊಂದು ಭಾಷೆಯಲ್ಲಿ ಬೇರೆಯದೇ ಅರ್ಥ ಹೊಂದಿರುವುದು ಮಾಮೂಲು. ಕೆಲವೊಮ್ಮೆ ಒಂದು ಭಾಷೆಯಲ್ಲಿ ಗಹನವಾದ ಅರ್ಥ ನೀಡುವ ಪದ, ಮತ್ತೊಂದು ಭಾಷೆಯಲ್ಲಿ ಹಾಸ್ಯವನ್ನೂ ಹೊಮ್ಮಿಸಬಹುದು. ಸದ್ಯ ನೋರಾ ಕಾಣಿಸಿಕೊಂಡಿರುವ ಈ ಹಾಡು, ಜನರನ್ನು ಹುಚ್ಚೆಬ್ಬಿಸುವಂತೆ ಕುಣಿಸಲೆಂದೇ ರಚಿತವಾಗಿದೆ. ಆದರೆ ಅದರದೊಂದು ಪದ ಮಾತ್ರ ಭಿನ್ನ ಅರ್ಥ ಹೊಮ್ಮಿಸಿ, ತಮಾಷೆಗೆ ಕಾರಣವಾಗಿದೆ.
ಸದ್ಯ ಟ್ರೆಂಡ್ ಆಗಿರುವ ‘ಕುಸು ಕುಸು’ ಹಾಡು ಇಲ್ಲಿದೆ:
‘ಕುಸು ಕುಸು’ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದು ತಾನಿಷ್ಕ್ ಬಗ್ಚಿ. ಅದಕ್ಕೆ ಧ್ವನಿಯಾಗಿರುವವರು ಜರಾ ಎಸ್ ಖಾನ್ ಹಾಗೂ ದೇವ್ ನೇಗಿ.
ಇದನ್ನೂ ಓದಿ:
Nora Fatehi: ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ನೋರಾ ಫತೇಹಿ
Puneeth Rajkumar: ಪುನೀತ್ ಭಾಗವಹಿಸಿದ್ದ ಕೊನೆಯ ಪಾರ್ಟಿಯ ಕುರಿತು ಗುರುಕಿರಣ್ ಹೇಳಿದ್ದೇನು?