‘ಅಂಥದ್ದನ್ನು ನೋಡೇ ಇಲ್ಲವೇನೋ’; ಖಾಸಗಿ ಭಾಗ ಪೋಕಸ್ ಮಾಡುವವರಿಗೆ ನೋರಾ ತಿರುಗೇಟು

|

Updated on: Apr 23, 2024 | 6:55 AM

ಕೆಲವೊಮ್ಮೆ ನೋರಾ ಜಿಮ್ ಮುಗಿಸಿ ಬರುವಾಗ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವಾಗ ಅವರನ್ನು ಕ್ಯಾಪ್ಚರ್ ಮಾಡಿ ವೈರಲ್ ಮಾಡಿದ್ದಿದೆ. ಅವರು ನಡೆದ ಹೋಗುವಾಗ ಖಾಸಗಿ ಭಾಗವನ್ನು ಹೆಚ್ಚು ಫೋಕಸ್ ಮಾಡಿ ವಿಡಿಯೋ ಮಾಡಿ ಹರಿಬಿಡಲಾಗಿತ್ತು. ಈ ವಿಚಾರದಲ್ಲಿ ನೋರಾಗೆ ಬೇಸರ ಇದೆ.

‘ಅಂಥದ್ದನ್ನು ನೋಡೇ ಇಲ್ಲವೇನೋ’; ಖಾಸಗಿ ಭಾಗ ಪೋಕಸ್ ಮಾಡುವವರಿಗೆ ನೋರಾ ತಿರುಗೇಟು
ನೋರಾ
Follow us on

ಪಾಪರಾಜಿಗಳ ಹಾವಳಿ ಹೆಚ್ಚಾಗಿದೆ. ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಬಾಲಿವುಡ್​ನಲ್ಲಿ ಈ ಸಂಸ್ಕೃತಿ ಹೆಚ್ಚು ಪ್ರಚಲಿತದಲ್ಲಿದೆ. ಸೆಲೆಬ್ರಿಟಿಗಳು ಜಿಮ್ ಮುಗಿಸಿ ಬರುವಾಗ, ಶಾಪಿಂಗ್ ಹೋದಾಗ, ಪಾರ್ಲರ್ ಹೋದಾಗ, ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಾಗ ಅವರ ವಿಡಿಯೋ ಮಾಡಿ  ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತದೆ. ಆದರೆ, ಕೆಲವು ಪಾಪರಾಜಿಗಳು ನಟಿಯರ ಖಾಸಗಿ ಭಾಗದ ಮೇಲೆ ಹೆಚ್ಚು ಫೋಕಸ್ ಮಾಡುತ್ತಾರೆ. ಇದನ್ನು ನೋರಾ ಫತೇಹಿ (Nora Fatehi) ಖಂಡಿಸಿದ್ದಾರೆ.

ನಟಿ ನೋರಾ ಫತೇಹಿ ಬಾಲಿವುಡ್​ನಲ್ಲಿ ನಟಿಯಾಗಿ, ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಕೆಲವೊಮ್ಮೆ ಅವರು ಜಿಮ್ ಮುಗಿಸಿ ಬರುವಾಗ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವಾಗ ಅವರನ್ನು ಕ್ಯಾಪ್ಚರ್ ಮಾಡಿ ವೈರಲ್ ಮಾಡಿದ್ದಿದೆ. ಅವರು ನಡೆದ ಹೋಗುವಾಗ ಖಾಸಗಿ ಭಾಗವನ್ನು ಹೆಚ್ಚು ಫೋಕಸ್ ಮಾಡಿ ವಿಡಿಯೋ ಮಾಡಿ ಹರಿಬಿಡಲಾಗಿತ್ತು. ಈ ವಿಚಾರದಲ್ಲಿ ನೋರಾಗೆ ಬೇಸರ ಇದೆ.

‘ಬಹುಶಃ ಅವರು ಅಂಥ ಹಿಂಭಾಗವನ್ನು ನೋಡಿಯೇ ಇಲ್ಲವೇನೋ. ಇದು ನನಗೆ ಮಾತ್ರ ಆಗುತ್ತಿರುವ ಸಮಸ್ಯೆ ಅಲ್ಲ, ಎಲ್ಲಾ ನಟಿಯರಿಗೂ ಅವರು ಹಾಗೆಯೇ ಮಾಡುತ್ತಾರೆ. ಅವರ ಹಿಂಭಾಗವನ್ನೇ ಅವರು ಫೋಕಸ್ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅದು ಅವರಿಗೆ ಅಷ್ಟು ಎಗ್ಸೈಟಿಂಗ್ ಅನಿಸಿಲ್ಲವೇನೋ. ನಟಿಯರ ದೇಹದ ಭಾಗಗಳನ್ನು ವಿಡಿಯೋ ಮಾಡಿ ಅನಾವಶ್ಯಕ ವೈರಲ್ ಮಾಡುತ್ತಾರೆ. ಕೆಲವೊಮ್ಮೆ ಜೂಮ್ ಮಾಡೋಕೆ ಏನೂ ಇರುವುದಿಲ್ಲ, ಆದರೂ ಅವರು ಏನನ್ನು ಫೋಕಸ್ ಮಾಡುತ್ತಾರೆ ಗೊತ್ತಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ ನೋರಾ.

‘ಕೆಲವು ಅನಾವಶ್ಯಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತವೆ. ದೇವರು ನನಗೆ ಉತ್ತಮ ದೇಹ ನೀಡಿದ್ದಾನೆ ಎಂಬುದಕ್ಕೆ ಖುಷಿ ಹಾಗೂ ಹೆಮ್ಮೆ ಇದೆ. ಅದು ನನ್ನ ಆಸ್ತಿ. ಅದರ ಬಗ್ಗೆ ನನಗೆ ನಾಚಿಕೆ ಇಲ್ಲ’ ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ: ಪಾಪರಾಜಿಗಳ ಜೊತೆ ನಿಸಾ ದೇವಗನ್ ನಡೆದುಕೊಂಡಿದ್ದು ಹೇಗೆ? ಮಗಳ ವರ್ತನೆ ಬಗ್ಗೆ ಕಾಜೋಲ್​ ಪ್ರತಿಕ್ರಿಯೆ

ಕೇವಲ ನೋರಾ ಫತೇಹಿ ಮಾತ್ರವಲ್ಲ ಮೃಣಾಲ್ ಠಾಕೂರ್ ಅವರು ಈ ವಿಚಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಈ ರೀತಿ ಅನೇಕ ನಟಿಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.