AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಫೋಟೋ ತೆಗೆಯಲು ಬಂದವರ ಮೇಲೆ ಶಾಹಿದ್​ ಕಪೂರ್​ ಗರಂ

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಫೋಟೋ ಮತ್ತು ವಿಡಿಯೋ ಸಲುವಾಗಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಕೆಲವು ನಟ-ನಟಿಯರು ಇದನ್ನು ಎಂಜಾಯ್ ಮಾಡುತ್ತಾರೆ. ಆದರೆ ಕೆಲವರಿಗೆ ಇದರಿಂದ ತೊಂದರೆ ಆಗುತ್ತದೆ. ಶಾಹಿದ್​ ಕಪೂರ್​ ಅವರು ಪಾಪರಾಜಿಗಳ ಮೇಲೆ ಕೂಗಾಡಿದ್ದಾರೆ. ಆ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ತಮ್ಮ ಅನಿಸಿಕೆ ತಿಳಿಸುತ್ತಿದ್ದಾರೆ.

ಪತ್ನಿಯ ಫೋಟೋ ತೆಗೆಯಲು ಬಂದವರ ಮೇಲೆ ಶಾಹಿದ್​ ಕಪೂರ್​ ಗರಂ
ಮೀರಾ ರಜಪೂತ್​, ಶಾಹಿದ್​ ಕಪೂರ್​
ಮದನ್​ ಕುಮಾರ್​
|

Updated on: Apr 23, 2024 | 4:06 PM

Share

ನಟ ಶಾಹಿದ್​ ಕಪೂರ್​ (Shahid Kapoor) ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​. ಪತ್ನಿ ಮತ್ತು ಮಕ್ಕಳ ಜೊತೆ ಅವರು ಹೆಚ್ಚು ಕಾಲ ಕಳೆಯುತ್ತಾರೆ. ಅನೇಕ ಸಂದರ್ಭಗಳಲ್ಲಿ ಅವರು ಮುಂಬೈನ ರೆಸ್ಟೋರೆಂಟ್​ಗೆ ಭೇಟಿ ನೀಡುತ್ತಾರೆ. ಆಗೆಲ್ಲ ಅವರ ಫೋಟೋ ತೆಗೆಯಲು ಪಾಪರಾಜಿಗಳು (Paparazzi) ಮುಗಿ ಬೀಳುತ್ತಾರೆ. ಇದರಿಂದ ಕೆಲವೊಮ್ಮೆ ಶಾಹಿದ್​ ಕಪೂರ್​ ಅವರಿಗೆ ಕಿರಿಕಿರಿ ಆಗುತ್ತದೆ. ಈಗ ಅದೇ ರೀತಿ ಆಗಿದೆ. ಪತ್ನಿ ಮೀರಾ ರಜಪೂತ್ (Mira Rajput)​ ಜೊತೆ ಬಂದ ಶಾಹಿದ್​ ಕಪೂರ್​ ಅವರು ಪಾಪರಾಜಿಗಳ ಮೇಲೆ ಗರಂ ಆಗಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಶಾಹಿದ್​ ಕಪೂರ್ ಮತ್ತು ಮೀರಾ ರಜಪೂತ್​ ಅವರು ರೆಸ್ಟೋರೆಂಟ್​ವೊಂದರಿಂದ ಹೊರಗೆ ಬರುವಾಗ ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಆಗ ಶಾಹಿದ್​ ಕಪೂರ್​ ಅವರಿಗೆ ಸಖತ್​ ಕೋಪ ಬಂದಿದೆ. ಪಾಪರಾಜಿಗಳ ಮೇಲೆ ಅವರು ಕಿಡಿಕಾರಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರು ಶಾಹಿದ್​ ಕಪೂರ್​ ಪರ ಕಮೆಂಟ್​ ಮಾಡಿದ್ದು, ಇನ್ನೂ ಕೆಲವರು ಪಾಪರಾಜಿಗಳಿಗೆ ಸಪೋರ್ಟ್​ ಮಾಡಿದ್ದಾರೆ.

ಪತ್ನಿಯ ಫೋಟೋ ತೆಗೆಯಲು ಬಂದ ಪಾಪರಾಜಿಗಳ ಮೇಲೆ ಶಾಹಿದ್​ ಕಪೂರ್​ ಕೂಗಾಡಿದ್ದಾರೆ. ‘ನೀವು ಇದನ್ನು ನಿಲ್ಲಿಸುತ್ತೀರಾ? ದಯವಿಟ್ಟು ಸರಿಯಾಗಿ ನಡೆದುಕೊಳ್ಳಿ’ ಎಂದು ಶಾಹಿದ್​ ಕಪೂರ್​ ಹೇಳಿದ್ದಾರೆ. ‘ಯಶಸ್ಸು ಸಿಕ್ಕ ಬಳಿಕ ಶಾಹಿದ್​ ಕಪೂರ್​ಗೆ ಆ್ಯಟಿಟ್ಯೂಡ್​ ಬಂದಿದೆ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ‘ನಿಜ ಜೀವನದಲ್ಲೂ ಕಬೀರ್​ ಸಿಂಗ್​ ಪಾತ್ರದ ರೀತಿ ಮಾಡುತ್ತಿದ್ದಾರೆ’ ಎಂದು ಕೂಡ ಕೆಲವರು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಪಾಪರಾಜಿಗಳ ಜೊತೆ ನಿಸಾ ದೇವಗನ್ ನಡೆದುಕೊಂಡಿದ್ದು ಹೇಗೆ? ಮಗಳ ವರ್ತನೆ ಬಗ್ಗೆ ಕಾಜೋಲ್​ ಪ್ರತಿಕ್ರಿಯೆ

ಶಾಹಿದ್​ ಕಪೂರ್​ ಮತ್ತು ಮೀರಾ ರಜಪೂತ್​ ಅವರು 2015ರ ಜುಲೈನಲ್ಲಿ ಮದುವೆ ಆದರು. ಅದಕ್ಕೂ ಮುನ್ನ ಕರೀನಾ ಕಪೂರ್​ ಜೊತೆ ಶಾಹಿದ್​ ಕಪೂರ್​ ಬ್ರೇಕಪ್​ ಮಾಡಿಕೊಂಡಿದ್ದರು. ಈಗ ಶಾಹಿದ್​ ಕಪೂರ್​ ಮತ್ತು ಮೀರಾ ರಜಪೂತ್​ ದಂಪತಿಗೆ ಏಳು ವರ್ಷದ ಮಿಶಾ ಎಂಬ ಪುತ್ರಿ ಹಾಗೂ ನಾಲ್ಕು ವರ್ಷದ ಝೈನ್​ ಎಂಬ ಪುತ್ರ ಇದ್ದಾನೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಈಗ ಶಾಹಿದ್​ ಕಪೂರ್​ ಅವರು ‘ದೇವ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!