ಶಾರುಖ್ ಖಾನ್ (Shah Rukh Khan), ಅಕ್ಷಯ್ ಕುಮಾರ್ ಮೊದಲಾದ ಸ್ಟಾರ್ಸ್ ಜೊತೆ ತೆರೆ ಹಂಚಿಕೊಂಡು ಮಿಂಚಿರುವ ನಟ ಶ್ರೇಯಸ್ ತಲ್ಪಡೆ ಅವರಿಗೆ ಗುರುವಾರ (ಡಿಸೆಂಬರ್ 15) ಸಂಜೆ ಹೃದಯಾಘಾತ ಆಗಿದೆ. ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಶೂಟಿಂಗ್ ಮುಗಿಸಿ ಮನೆಗೆ ಹೊರಡುವ ವೇಳೆ ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ಬಳಿಕ ಹಾರ್ಟ್ ಅಟ್ಯಾಕ್ ಆಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈಗ ಸುಸ್ಥಿತಿಯಲ್ಲಿದ್ದಾರೆ ಎಂದು ಆಪ್ತ ವಲಯದವರು ಹೇಳಿದ್ದಾರೆ.
ಶ್ರೇಯಸ್ ಅವರು ಎಂದಿನಂತೆ ಶೂಟಿಂಗ್ಗೆ ತೆರಳಿದ್ದರು. ಅವರ ಆರೋಗ್ಯದಲ್ಲಿ ಅಂಥ ವ್ಯತ್ಯಾಸ ಏನೂ ಆಗಿರಲಿಲ್ಲ. ಸಂಜೆ ವೇಳೆಗೆ ಏಕಾಏಕಿ ಹಾರ್ಟ್ ಅಟ್ಯಾಕ್ ಆಗಿದೆ. ಆ ಬಳಿಕ ಮುಂಬೈನ ಅಂಧೇರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ ಪ್ರಕಾರ ಅವರು ಈಗ ಚೇತರಿಕೆ ಕಾಣುತ್ತಿದ್ದಾರಂತೆ. ಅವರ ಆರೋಗ್ಯದ ಕುರಿತು ಅಧಿಕೃತ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಶ್ರೇಯಸ್ ತಲ್ಪಡೆ ಚಿತ್ರರಂಗಕ್ಕೆ 2002ರಲ್ಲೇ ಕಾಲಿಟ್ಟರು. ‘ಆಂಖೇ’ ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. 2007ರಲ್ಲಿ ರಿಲೀಸ್ ಆದ ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ಶಾರುಖ್ನ ಗೆಳೆಯನಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ‘ಗೋಲ್ಮಾಲ್ ರಿಟರ್ನ್ಸ್’, ಗೋಲ್ಮಾಲ್ 3’, ‘ಹೌಸ್ಫುಲ್ 2’ ಅಂಥ ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಹೆಚ್ಚುತ್ತಲೇ ಇದೆ ಬಿಗ್ ಬಾಸ್ ಟಿಆರ್ಪಿ; ಸಂಕಷ್ಟದಲ್ಲಿ ‘ಸೀತಾ ರಾಮ’ ಧಾರಾವಾಹಿ
2022ರಲ್ಲಿ ಅವರ ನಟನೆಯ ‘ಕೌನ್ ಪ್ರವೀಣ್ ತಂಬೆ’ ಸಿನಿಮಾ ರಿಲೀಸ್ ಆಯಿತು. ಆದರೆ, ಈ ಚಿತ್ರ ಯಶಸ್ಸು ಕಾಣಲಿಲ್ಲ. ಅವರು ಮರಾಠಿ ಧಾರಾವಾಹಿಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ