AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಜು ಕಲಿಯಲು ಕೀಟಗಳನ್ನು ತಿಂದಿದ್ದ ನಟ; ಅಚ್ಚರಿ ವಿಚಾರ ತಿಳಿಸಿದ ಪಂಕಜ್​ ತ್ರಿಪಾಠಿ

ಶಾಲಾ ದಿನಗಳಲ್ಲಿ ಈಜು ಕಲಿಯಬೇಕು ಎಂಬುದು ಪಂಕಜ್​ ತ್ರಿಪಾಠಿ ಅವರ ಗುರಿ ಆಗಿತ್ತು. ಅದಕ್ಕಾಗಿ ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಗೆಳೆಯರು ನೀಡಿದ ಸಲಹೆಯನ್ನು ಸ್ವೀಕರಿಸಿ ಅವರು ಕೀಟಗಳನ್ನು ನೀರಿನಲ್ಲಿ ಹಾಕಿಕೊಂಡು ಕುಡಿದಿದ್ದರು. ಆ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ.

ಈಜು ಕಲಿಯಲು ಕೀಟಗಳನ್ನು ತಿಂದಿದ್ದ ನಟ; ಅಚ್ಚರಿ ವಿಚಾರ ತಿಳಿಸಿದ ಪಂಕಜ್​ ತ್ರಿಪಾಠಿ
ಪಂಕಜ್​ ತ್ರಿಪಾಠಿ
Follow us
ಮದನ್​ ಕುಮಾರ್​
|

Updated on: Jan 09, 2024 | 4:24 PM

ಬಾಲಿವುಡ್​ನಲ್ಲಿ ನಟ ಪಂಕಜ್​ ತ್ರಿಪಾಠಿ (Pankaj Tripathi) ಅವರು ಸಖತ್​ ಜನಪ್ರಿಯತೆ ಗಳಿಸಿದ್ದಾರೆ. ಅವರಿಗೆ ತುಂಬ ಡಿಮ್ಯಾಂಡ್​ ಇದೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಇಂಡಿಯಾ ಟಿವಿ’ ನಡೆಸಿದ ಸಂದರ್ಶನದಲ್ಲಿ ಪಂಕಜ್​ ತ್ರಿಪಾಠಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯವನ್ನು ಹಳ್ಳಿಯಲ್ಲಿ ಕಳೆದ ಅವರಿಗೆ ಕೆಲವು ವಿಶೇಷ ಅನುಭವಗಳು ಆಗಿದ್ದವು. ಅಚ್ಚರಿ ಏನೆಂದರೆ, ಈಜು ( Swimming) ಕಲಿಯಬೇಕು ಎಂದು ಪಂಕಜ್​ ತ್ರಿಪಾಠಿ ಅವರು ಕೀಟಗಳನ್ನು (Insects) ತಿಂದಿದ್ದರು! ಆ ಘಟನೆಯನ್ನು ಅವರು ಈಗ ಮೆಲುಕು ಹಾಕಿದ್ದಾರೆ.

ಶಾಲಾ ದಿನಗಳಲ್ಲಿ ಈಜು ಕಲಿಯಬೇಕು ಎಂಬುದು ಪಂಕಜ್​ ತ್ರಿಪಾಠಿ ಅವರ ಗುರಿ ಆಗಿತ್ತು. ಅದಕ್ಕಾಗಿ ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರು. ಒಮ್ಮೆ ಗೆಳೆಯರು ನೀಡಿದ ಸಲಹೆಯನ್ನು ಸ್ವೀಕರಿಸಿ ಅವರು ಕೀಟಗಳನ್ನು ನೀರಿನಲ್ಲಿ ಹಾಕಿಕೊಂಡು ಕುಡಿದಿದ್ದರು. ‘ನಮ್ಮ ಮನೆಯ ಹಿಂಬದಿಯಲ್ಲಿ ನದಿ ಇತ್ತು. ಆ ನದಿಯ ನೀರಿನ ಮೇಲೆ ಚಿಕ್ಕ ಕಪ್ಪು ಕೀಟಗಳು ಇರುತ್ತಿದ್ದವು. ಆ ಊರಿನ ಮಕ್ಕಳು ಭಾರಿ ತುಂಟರಾಗಿದ್ದರು. ಆ ಕೀಟಗಳನ್ನು ತಿಂದರೆ ಈಜು ಕಲಿಯಬಹುದು ಅಂತ ಅವರು ಸಲಹೆ ನೀಡಿದರು’ ಎಂದಿದ್ದಾರೆ ಪಂಜಕ್​ ತ್ರಿಪಾಠಿ.

ಇದನ್ನೂ ಓದಿ: Pankaj Tripathi: ಸೌತ್​ ಸಿನಿಮಾ ಒಪ್ಪಿಕೊಳ್ಳದೇ ಇರಲು ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ಪಂಕಜ್​ ತ್ರಿಪಾಠಿ

‘ನಾನು 10-12 ಕೀಟಗಳನ್ನು ಹಿಡಿದು, ನೀರಿನಲ್ಲಿ ಹಾಕಿಕೊಂಡು ಕುಡಿದೆ. ಪುಣ್ಯಕ್ಕೆ ನನ್ನ ಹೊಟ್ಟೆ ಹಾಳಾಗಲಿಲ್ಲ’ ಎಂದು ಆ ದಿನಗಳನ್ನು ಪಂಕಜ್​ ತ್ರಿಪಾಠಿ ನೆನಪಿಸಿಕೊಂಡಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್​ ವಿಚಾರ ಏನೆಂದರೆ, ಪಂಕಜ್ ಅವರ ಸರ್​ನೇಮ್​ ತ್ರಿಪಾಠಿ ಆಗಿರಲಿಲ್ಲ. ತಿವಾರಿ ಎಂಬುದು ಅವರ ಸರ್​ನೇಮ್​ ಆಗಿತ್ತು. ಅದನ್ನು ಬದಲಾಯಿಸಿಕೊಂಡಿದ್ದು ಯಾಕೆ ಎಂಬುದನ್ನು ಕೂಡ ಅವರೀಗ ವಿವರಿಸಿದ್ದಾರೆ.

‘ನನ್ನ ರೀತಿ ತಿವಾರಿ ಎಂದು ಹೆಸರು ಇಟ್ಟುಕೊಂಡಿದ್ದವರೆಲ್ಲ ಪೂಜಾರಿ ಆಗಿದ್ದರು ಅಥವಾ ರೈತರಾಗಿದ್ದರು. ನನಗೆ ಆ ವೃತ್ತಿ ಮಾಡಲು ಇಷ್ಟ ಇರಲಿಲ್ಲ. ನನ್ನ ಅಂಕಲ್​ ಸರ್​ನೇಮ್​ ತ್ರಿಪಾಠಿ ಆಗಿತ್ತು. ಅವರು ಸರ್ಕಾರಿ ನೌಕರ ಆಗಿದ್ದರು. ಅದೇ ಹೆಸರಿನ ಇನ್ನೊಬ್ಬರು ಹಿಂದಿ ಪ್ರೊಫೆಸರ್​ ಆಗಿದ್ದರು. ಹಾಗಾಗಿ ನಾನು ಕೂಡ ತ್ರಿಪಾಠಿ ಅಂತ ಸರ್​ನೇಮ್​ ಬದಲಿಸಿಕೊಂಡೆ’ ಎಂದು ಪಂಕಜ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಆಪರೇಷನ್ ಸಿಂದೂರದ ಬಗ್ಗೆ ಪಾಕಿಸ್ತಾನಿಗನ ನೇರ ಮಾತು ಕೇಳಿ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ