ಅಂಬಾನಿ ಮಗನ ಪ್ರೀ-ವೆಡ್ಡಿಂಗ್ ಊಟದಲ್ಲಿ ಸಿಕ್ತು ಕೂದಲು; ಒರಿ ಮಾಡಿದ ವಿಡಿಯೋ ವೈರಲ್

ಸೋಶಿಯಲ್​ ಮೀಡಿಯಾದಲ್ಲಿ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಅವರಿಗೆ ಸಖತ್​ ಖ್ಯಾತಿ ಇದೆ. ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭದಲ್ಲಿ ಒರಿ ಕೂಡ ಭಾಗಿ ಆಗಿದ್ದರು. ಅಲ್ಲಿ ಭಾರಿ ಉತ್ಸಾಹದಿಂದ ವಡಾ ಪಾವ್​ ತಿನ್ನಲು ಹೋದ ಒರಿ ಗೆಳತಿ ತಾನಿಯಾ ಶ್ರಾಫ್​ಗೆ ಕೂದಲು ಸಿಕ್ಕಿದೆ. ಆ ವಿಡಿಯೋ ವೈರಲ್​ ಆಗಿದ್ದು, ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅಂಬಾನಿ ಮಗನ ಪ್ರೀ-ವೆಡ್ಡಿಂಗ್ ಊಟದಲ್ಲಿ ಸಿಕ್ತು ಕೂದಲು; ಒರಿ ಮಾಡಿದ ವಿಡಿಯೋ ವೈರಲ್
ಒರಿ, ವಡಾ ಪಾವ್​

Updated on: Jul 09, 2024 | 9:05 PM

ಉದ್ಯಮಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಅನಂತ್​ ಅಂಬಾನಿ ಮದುವೆ ಬಗ್ಗೆ ಸಾವಿರಾರು ಬಗೆಯ ಸುದ್ದಿ ಆಗುತ್ತಿದೆ. ಪ್ರೀ-ವೆಡ್ಡಿಂಗ್​ ಸಮಾರಂಭದಿಂದ ಆರಂಭವಾದ ಇವರ ಸಡಗರ ಇಂದಿಗೂ ಮುಂದುವರಿದಿದೆ. ತಿಂಗಳುಗಟ್ಟಲೆ ನಡೆಯುತ್ತಿರುವ ಈ ಸಮಾರಂಭಕ್ಕೆ ಅನೇಕ ಸೆಲೆಬ್ರಿಟಿಗಳು ಅತಿಥಿಗಳಾಗಿ ಬಂದಿದ್ದಾರೆ. ಕೆಲವು ವಾರಗಳ ಹಿಂದೆ ಇಟಲಿಯಲ್ಲಿ ಅದ್ದೂರಿಯಾಗಿ ಪ್ರೀ-ವೆಡ್ಡಿಂಗ್​ ಸಮಾರಂಭ ಮಾಡಲಾಯಿತು. ಆ ವೇಳೆ ನೀಡಿದ ಆಹಾರದಲ್ಲಿ ಕೂದಲು ಸಿಕ್ಕಿದೆ! ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಆಗಿರುವ ಒರಿ ಹಂಚಿಕೊಂಡ ವಿಡಿಯೋದಿಂದ ಈ ವಿಚಾರ ವೈರಲ್​ ಆಗಿದೆ.

ಬಾಲಿವುಡ್ ಸೆಲೆಬ್ರಿಟಿಗಳ ಆಪ್ತ ಎಂದೇ ಫೇಮಸ್​ ಆಗಿರುವ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಅವರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಇದರಲ್ಲಿ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಪ್ರೀ-ವೆಡ್ಡಿಂಗ್​ ಸಮಾರಂಭದ ಕೆಲವು ದೃಶ್ಯಗಳನ್ನು ಒರಿ ಹಂಚಿಕೊಂಡಿದ್ದಾರೆ. ಅತಿಥಿಗಳಿಗೆ ತಯಾರಿಸಿದ್ದ ನೂರಾರು ಬಗೆಯ ಆಹಾರದ ಬಗ್ಗೆ ಅವರೊಂದು ವಿಡಿಯೋ ಮಾಡಿದ್ದಾರೆ.

ಇದನ್ನೂ ಓದಿ: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಅಂಬಾನಿ ಹಾಗೂ ನೀತಾ ದಂಪತಿ; ಇಲ್ಲಿದೆ ವಿಡಿಯೋ

ಒರಿ ಮತ್ತು ಅವರ ಸ್ನೇಹಿತೆ ತಾನಿಯಾ ಶ್ರಾಫ್​ ಅವರು ಹಲವು ಆಹಾರಗಳ ರುಚಿ ಸವಿದಿದ್ದಾರೆ. ಅದರ ನಡುವೆ ಅವರು ವಡಾ ಪಾವ್​ ಕೂಡ ತಿಂದಿದ್ದಾರೆ. ತಿನ್ನುವುದಕ್ಕೂ ಮುನ್ನವೇ ‘ಇದು ಅತ್ಯುತ್ತಮ ವಡಾ ಪಾವ್​’ ಎಂದು ಒರಿ ಬಿಲ್ಡಪ್​ ಕೊಟ್ಟಿದ್ದಾರೆ. ಆದರೆ ತಾನಿಯಾ ಶ್ರಾಫ್​ಗೆ ಆ ವಡಾ ಪಾವ್​ನಲ್ಲಿ ಕೂದಲು ಸಿಕ್ಕಿದೆ. ‘ನನಗೆ ಇನ್ನೊಂದು ಬೇಕಿತ್ತು. ಆದರೆ ಅದರಲ್ಲಿ ಕೂದಲು ಇತ್ತು’ ಎಂದು ಅವರು ಹೇಳಿರುವುದು ಈ ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸಿದೆ. ಇದು ಸಖತ್​ ವೈರಲ್​ ಆಗುತ್ತಿದೆ.

ಒರಿ ಹಂಚಿಕೊಂಡ ವಿಡಿಯೋ:

Orry and Tania's Food Adventure in Portofino 🌯🍝👨🏻‍🍳

ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರು ಜಾಮ್​ನಗರ್​ನಲ್ಲಿ ಪ್ರೀವೆಡ್ಡಿಂಗ್​ ಸಮಾರಂಭವನ್ನು ಆರಂಭಿಸಿದ್ದರು. ಅದರಲ್ಲಿ ಶಾರುಖ್​ ಖಾನ್​, ಅಮಿರ್​ ಖಾನ್​, ಸಲ್ಮಾನ್​ ಖಾನ್​, ರಿಯಾನಾ ಸೇರಿದಂತೆ ಅನೇಕ ಘಟಾನುಘಟಿ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಜುಲೈ 12ರಂದು ಮುಂಬೈನಲ್ಲಿ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ನಡೆಯಲಿದೆ. ಈಗಾಗಲೇ ಜಸ್ಟಿನ್​ ಬೀಬರ್​ ಅವರು ಬಂದು ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us