ಅದ್ದೂರಿಯಾಗಿ ನಡೆದ ಪರಿಣೀತಿ ಚೋಪ್ರಾ ಮದುವೆ; ಪ್ರಮುಖರೇ ಗೈರು

| Updated By: ರಾಜೇಶ್ ದುಗ್ಗುಮನೆ

Updated on: Sep 24, 2023 | 9:29 PM

Parineeti Chopra Wedding: ಸೆಪ್ಟೆಂಬರ್ 22ರಂದು ಸಂಜೆಯೇ ಪರೀಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರು ಉದಯಪುರಕ್ಕೆ ಆಗಮಿಸಿದ್ದರು. ಲೀಲಾ ಪ್ಯಾಲೇಸ್​ ಹೋಟೆಲ್​ನ ಭರ್ಜರಿಯಾಗಿ ಸಿಂಗಾರ ಮಾಡಲಾಗಿತ್ತು. ಮದುವೆ ಸಮಾರಂಭ ಸಾಕಷ್ಟು ಖಾಸಗಿಯಾಗಿ ನಡೆಯಬೇಕು ಎನ್ನುವ ಕಾರಣಕ್ಕೆ ಅತಿಥಿಗಳಿಗೆ ಮೊಬೈಲ್ ಬಳಕೆ ಬ್ಯಾನ್ ಮಾಡಲಾಗಿತ್ತು.

ಅದ್ದೂರಿಯಾಗಿ ನಡೆದ ಪರಿಣೀತಿ ಚೋಪ್ರಾ ಮದುವೆ; ಪ್ರಮುಖರೇ ಗೈರು
ರಾಘವ್-ಪರೀಣಿತಿ
Follow us on

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ (Parineeti Chopra) ಹಾಗೂ ಆಪ್ ನಾಯಕ್ ರಾಘವ್ ಚಡ್ಡಾ ಮದುವೆ ರಾಜಸ್ಥಾನದ ಉದಯಪುರದಲ್ಲಿ ಇಂದು (ಸೆಪ್ಟೆಂಬರ್ 24) ಅದ್ದೂರಿಯಾಗಿ ನಡೆದಿದೆ. ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ಈ ಮದುವೆ ನಡೆದಿದೆ. ಸಂಜೆ ವೇಳೆಗೆ ಇಬ್ಬರೂ ಮದುವೆ ಆಗಿದ್ದಾರೆ. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಆದರೆ, ಕೆಲವರು ಪ್ರಮುಖರು ಮದುವೆಗೆ ಗೈರಾಗಿದ್ದಾರೆ. ಇದು ದಂಪತಿಯ ಬೇಸರಕ್ಕೆ ಕಾರಣ ಆಗಿದೆ.

ಸೆಪ್ಟೆಂಬರ್ 22ರಂದು ಸಂಜೆಯೇ ಪರೀಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರು ಉದಯಪುರಕ್ಕೆ ಆಗಮಿಸಿದ್ದರು. ಲೀಲಾ ಪ್ಯಾಲೇಸ್​ ಹೋಟೆಲ್​ನ ಭರ್ಜರಿಯಾಗಿ ಸಿಂಗಾರ ಮಾಡಲಾಗಿತ್ತು. ಮದುವೆ ಸಮಾರಂಭ ಸಾಕಷ್ಟು ಖಾಸಗಿಯಾಗಿ ನಡೆಯಬೇಕು ಎನ್ನುವ ಕಾರಣಕ್ಕೆ ಅತಿಥಿಗಳಿಗೆ ಮೊಬೈಲ್ ಬಳಕೆ ಬ್ಯಾನ್ ಮಾಡಲಾಗಿತ್ತು. ಹಲವು ಸೆಲೆಬ್ರಿಟಿಗಳು ಈ ವಿವಾಹ ಸಮಾರಂಬದಲ್ಲಿ ಭಾಗಿಯಾಗಿದ್ದಾರೆ.

ಹೇಗಿತ್ತು ಮದುವೆ?

ಲೀಲ್ಯಾ ಪ್ಯಾಲೇಸ್​ನ ಸರೋವರದ ಮಧ್ಯೆ ಮದುವೆ ಮಂಟಪ ಇದೆ. ಬೋಟ್ ಮೂಲಕ ಈ ಜೋಡಿ ಮಂಟಪಕ್ಕೆ ತೆರಳಿತು. ಮಧ್ಯಾಹ್ನ 3:30ರ ಸುಮಾರಿಗೆ ಇಬ್ಬರೂ ಮಾಲೆ ಬದಲಾಯಿಸಿಕೊಂಡರು. 4 ಗಂಟೆಗೆ ಈ ಜೋಡಿ ಸಪ್ತಪದಿ ತುಳಿದರು. ಸೆಲೆಬ್ರಿಟಿ ಮದುವೆ ಎನ್ನುವ ಕಾರಣಕ್ಕೆ ಅರೇಜ್​ಮೆಂಟ್​ಗಳು ಅದ್ದೂರಿಯಾಗಿತ್ತು.

ಮದುವೆಗೆ ಬಂದ ಸೆಲೆಬ್ರಿಗಳು

ಸೆಲೆಬ್ರಿಟಿ ಮದುವೆ ಎನ್ನುವ ಕಾರಣಕ್ಕೆ ಅನೇಕ ಪ್ರಮುಖರು ಇದರಲ್ಲಿ ಭಾಗಿ ಆಗಿದ್ದರು. ಸಾನಿಯಾ ಮಿರ್ಜಾ, ಹರ್ಭಜನ್ ಸಿಂಗ್, ಮನಿಶ್ ಮಲ್ಹೋತ್ರಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗ್ವಂತ್ ಮಾನ್ ಮೊದಲಾದವರು ಮದುವೆಗೆ ಹಾಜರಿ ಹಾಕಿದ್ದರು.

ಇದನ್ನೂ ಓದಿ: ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ಮದುವೆಗೆ ಕ್ಷಣಗಣನೆ; ಮೊಬೈಲ್ ಬಳಕೆ ಬ್ಯಾನ್

ಹಾಜರಿ ಹಾಕದೇ ಇರುವವರು

ಮದುವೆಗೆ ಕೆಲವು ಪ್ರಮುಖರೇ ಹಾಜರಿ ಹಾಕಿಲ್ಲ. ಹೌದು, ಪರಿಣೀತಿ ಚೋಪ್ರಾ ಸಹೋದರಿ ಪ್ರಿಯಾಂಕಾ ಚೋಪ್ರಾ ಅವರು ಹಾಜರಿ ಹಾಕಿಲ್ಲ. ಅವರು ಸೋಶಿಯಲ್ ಮೀಡಿಯಾ ಮೂಲಕ ಅವರು ಸಹೋದರಿಗೆ ವಿಶ್ ಮಾಡಿದ್ದಾರೆ. ಇನ್ನು ಕರಣ್ ಜೋಹರ್ ಕೂಡ ಮದುವೆಗೆ ಬಂದಿಲ್ಲ. ಅವರು ಕುಟುಂಬದಲ್ಲಿ ತೊಂದರೆ ಆಗಿದ್ದರಿಂದ ಬಂದಿಲ್ಲ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ