‘ಬೇಕಂತಲೇ ನಾನು ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ನೋಡಿಲ್ಲ’ ಎಂದ ಬಾಲಿವುಡ್​ನ ಖ್ಯಾತ ನಿರ್ದೇಶಕ

‘ನಾನು ಈ ಚಿತ್ರಗಳಿಂದ ದೂರ ಇರಲು ನಿರ್ಧರಿಸಿದೆ. ಯಾಕೆಂದರೆ, ಇವು ಸೂಕ್ಷ್ಮವಾದ ವಿಚಾರಗಳು. ಅದರಲ್ಲಿ ತುಂಬ ನೆಗೆಟಿವಿಟಿ ಇದೆ ಎಂದಾದರೆ ಅದರಿಂದ ನಾನು ದೂರ ಇರುತ್ತೇನೆ. ನನಗೆ ನನ್ನ ಮನಸ್ಸಿನ ನೆಮ್ಮದಿ ಮುಖ್ಯ. ಹಾಗಾಗಿ ನಾನು ಈ ಸಿನಿಮಾಗಳನ್ನು ನೋಡಲಿಲ್ಲ’ ಎಂದು ಬಾಲಿವುಡ್​ನ ನಿರ್ದೇಶಕ ವಿಶಾಲ್​ ಭಾರದ್ವಾಜ್​ ಹೇಳಿದ್ದಾರೆ.

‘ಬೇಕಂತಲೇ ನಾನು ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ನೋಡಿಲ್ಲ’ ಎಂದ ಬಾಲಿವುಡ್​ನ ಖ್ಯಾತ ನಿರ್ದೇಶಕ
ದಿ ಕಾಶ್ಮೀರ್​ ಫೈಲ್ಸ್​, ದಿ ಕೇರಳ ಸ್ಟೋರಿ
Follow us
|

Updated on: Sep 24, 2023 | 7:30 AM

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾ 2022ರಲ್ಲಿ ಬಿಡುಗಡೆಯಾಗಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಅದೇ ರೀತಿ, 2023ರಲ್ಲಿ ಸುದೀಪ್ತೋ ಸೇನ್​ ನಿರ್ದೇಶಿಸಿದ ‘ದಿ ಕೇರಳ ಸ್ಟೋರಿ’ ಚಿತ್ರ ಕೂಡ ಸಖತ್​ ಸದ್ದು ಮಾಡಿತು. ಈ ಎರಡೂ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಬೇರೆ ಬೇರೆ ಅಭಿಪ್ರಾಯ ಇದೆ. ಕೆಲವರು ಈ ಸಿನಿಮಾಗಳನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಇನ್ನೊಂದು ವರ್ಗದ ಜನರು ಈ ಚಿತ್ರಗಳು ಕಟುವಾಗಿ ಟೀಕಿಸಿದ್ದಾರೆ. ಬಾಲಿವುಡ್​ನ ಖ್ಯಾತ ನಿರ್ದೇಶಕ ವಿಶಾಲ್​ ಭಾರದ್ವಾಜ್ (Vishal Bhardwaj)​ ಅವರು ಈಗ ‘ದಿ ಕಾಶ್ಮೀರ್ ಫೈಲ್ಸ್​’ ಮತ್ತು ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಅಚ್ಚರಿ ಏನೆಂದರೆ, ಬೇಕಂತಲೇ ಅವರು ಈ ಚಿತ್ರಗಳನ್ನು ವೀಕ್ಷಿಸಿಲ್ಲ! ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

1995ರಿಂದಲೂ ವಿಶಾಲ್​ ಭಾರದ್ವಾಜ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಿರ್ದೇಶಕ, ಸಂಗೀತ ಸಂಯೋಜನೆ ಮುಂತಾದ ವಿಭಾಗಗಳಲ್ಲಿ ಅವರಿಗೆ ಅಪಾರ ಅನುಭವ ಇದೆ. ಹಲವು ಗಮನಾರ್ಹ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್​’ ಹಾಗೂ ‘ದಿ ಕೇರಳ ಸ್ಟೋರಿ’ ಚಿತ್ರಗಳ ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ‘ದಿ ವ್ಯಾಕ್ಸಿನ್​ ವಾರ್​’ ಚಿತ್ರ ಕೊವಿಡ್​ ಬಗ್ಗೆ ಅಲ್ಲ; ಹಾಗಾದ್ರೆ ಇದ್ರಲ್ಲಿ ಏನಿದೆ? ಉತ್ತರಿಸಿದ ವಿವೇಕ್​ ಅಗ್ನಿಹೋತ್ರಿ

‘ನಾನು ಬೇಕಂತಲೇ ದಿ ಕಾಶ್ಮೀರ್ ಫೈಲ್ಸ್​ ಮತ್ತು ದಿ ಕೇರಳ ಸ್ಟೋರಿ ಸಿನಿಮಾಗಳನ್ನು ನೋಡಿಲ್ಲ. ಈ ಚಿತ್ರಗಳ ಬಗ್ಗೆ ನಾನು ಅನೇಕ ಸುದ್ದಿಗಳನ್ನು ಕೇಳುತ್ತಿದ್ದೆ. ಅದರಿಂದ ಪ್ರಭಾವಕ್ಕೆ ಒಳಗಾಗಲು ನನಗೆ ಇಷ್ಟ ಇರಲಿಲ್ಲ. ಅವು ಪ್ರೊಪಗಾಂಡ ಸಿನಿಮಾಗಳು ಎಂದು ನನ್ನ ಸ್ನೇಹಿತರು ಮತ್ತು ಆಪ್ತರು ಹೇಳುತ್ತಿದ್ದರು. ಹಾಗಾಗಿ ನಾನು ಈ ಚಿತ್ರಗಳಿಂದ ದೂರ ಇರಲು ನಿರ್ಧರಿಸಿದೆ. ಯಾಕೆಂದರೆ, ಇವು ಸೂಕ್ಷ್ಮವಾದ ವಿಚಾರಗಳು. ಅದರಲ್ಲಿ ತುಂಬ ನೆಗೆಟಿವಿಟಿ ಇದೆ ಎಂದಾದರೆ ಅದರಿಂದ ನಾನು ದೂರ ಇರುತ್ತೇನೆ. ನನಗೆ ನನ್ನ ನೆಮ್ಮದಿ ಮುಖ್ಯ. ಹಾಗಾಗಿ ನಾನು ಈ ಸಿನಿಮಾಗಳನ್ನು ನೋಡಲಿಲ್ಲ’ ಎಂದು ವಿಶಾಲ್​ ಭಾರದ್ವಾಜ್​ ಹೇಳಿದ್ದಾರೆ.

ಇದನ್ನೂ ಓದಿ: ವಿಜ್ಞಾನಿಗಳಿಂದಲೂ ಮೆಚ್ಚುಗೆ ಪಡೆದ ‘ದಿ ವ್ಯಾಕ್ಸಿನ್​ ವಾರ್​’; ಖುಷಿ ಹಂಚಿಕೊಂಡ ಪಲ್ಲವಿ ಜೋಶಿ

ವಿಶಾಲ್​ ಭಾರದ್ವಾಜ್​ ಮಾತ್ರವಲ್ಲದೇ ಪ್ರಕಾಶ್​ ರಾಜ್​, ಕಮಲ್​ ಹಾಸನ್​ ಮುಂತಾದ ಸೆಲೆಬ್ರಿಟಿಗಳು ‘ದಿ ಕಾಶ್ಮೀರ್ ಫೈಲ್ಸ್​’, ‘ದಿ ಕೇರಳ ಸ್ಟೋರಿ’ ಚಿತ್ರಗಳನ್ನು ವಿರೋಧಿಸಿದ್ದಾರೆ. ಆ ಟೀಕೆಗಳಿಗೆ ಅನುಪಮ್​ ಖೇರ್​, ವಿವೇಕ್​ ಅಗ್ನಿಹೋತ್ರಿ ಮುಂತಾದವರು ಪ್ರತಿಕ್ರಿಯೆ ನೀಡಿದ್ದುಂಟು. ಈಗ ವಿಶಾಲ್​ ಭಾರದ್ವಾಜ್​ ಅವರ ಮಾತಿಗೆ ಈ ಚಿತ್ರತಂಡದವರು ಯಾವ ರೀತಿ ತಿರುಗೇಟು ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ವಿವೇಕ್​ ಅಗ್ನಿಹೋತ್ರಿ ಅವರು ಈಗ ‘ದಿ ವ್ಯಾಕ್ಸಿನ್ ವಾರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸೆಪ್ಟೆಂಬರ್ 28ರಂದು ಆ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್