ಹೃತಿಕ್ ರೋಷನ್ ಮನೆಯವರ ಜೊತೆ ಸೇರಿ ಗಣೇಶ ಚತುರ್ಥಿ ಆಚರಿಸಿದ ಪ್ರೇಯಸಿ ಸಬಾ ಆಜಾದ್
ಸಬಾ ಆಜಾದ್ ಅವರು 2022ರಿಂದ ಈಚೆಗೆ ಹೃತಿಕ್ ರೋಷನ್ ಜೊತೆ ಡೇಟಿಂಗ್ ಮಾಡಲು ಆರಂಭಿಸಿದರು. ಆ ಬಳಿಕ ಅವರು ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಹೃತಿಕ್ ಕುಟುಂಬದವರ ಜೊತೆ ಸಬಾ ತುಂಬ ಕ್ಲೋಸ್ ಆಗಿದ್ದಾರೆ. ಅವರ ಫ್ಯಾಮಿಲಿ ಜೊತೆ ಸೇರಿ ಗಣೇಶ ಚತುರ್ಥಿ ಆಚರಿಸಿರುವುದೇ ಇದಕ್ಕೆ ಸಾಕ್ಷಿ. ಆ ಸಂದರ್ಭದ ಫೋಟೋ ವೈರಲ್ ಆಗಿದೆ.
ನಟ ಹೃತಿಕ್ ರೋಷನ್ (Hrithik Roshan) ಮತ್ತು ನಟಿ ಸಬಾ ಆಜಾದ್ ಅವರು ರಿಲೇಷನ್ಶಿಪ್ನಲ್ಲಿ ಇರುವುದು ಈಗ ಗುಟ್ಟಾಗಿ ಉಳಿದಿಲ್ಲ. ಸುಸಾನೆ ಖಾನ್ಗೆ ವಿಚ್ಛೇದನ ನೀಡಿದ ಬಳಿಕ ಹೃತಿಕ್ ಅವರು ಬೇರೆ ಮದುವೆ ಆಗಿಲ್ಲ. ಬಾಲಿವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿರುವ ನಟಿ ಸಬಾ ಆಜಾದ್ ಮೇಲೆ ಹೃತಿಕ್ ರೋಷನ್ ಅವರಿಗೆ ಲವ್ ಆಗಿದೆ. ಮೊದಲೆಲ್ಲ ಈ ವಿಚಾರ ಗುಟ್ಟಾಗಿತ್ತು. ನಂತರ ಎಲ್ಲವೂ ಬಯಲಾಯಿತು. ಈಗ ಹೃತಿಕ್ ರೋಷನ್ ಅವರ ಕುಟುಂಬದಲ್ಲಿ ಸಬಾ ಆಜಾದ್ (Saba Azad) ಸ್ಥಾನ ಪಡೆದಂತಿದೆ. ಹೃತಿಕ್ ಫ್ಯಾಮಿಲಿಯ ಬಹುತೇಕ ಎಲ್ಲ ಸಮಾರಂಭಗಳಲ್ಲಿ ಸಬಾ ಕಾಣಿಸಿಕೊಳ್ಳುತ್ತಿದ್ದಾರೆ. ಹೃತಿಕ್ ರೋಷನ್ ಅವರ ಮನೆಯಲ್ಲಿ ಗಣೇಶ ಹಬ್ಬವನ್ನು (Ganesh Chaturthi) ಸಂಭ್ರಮದಿಂದ ಆಚರಿಸಲಾಗಿದೆ. ಇದರಲ್ಲಿ ಸಜಾ ಆಜಾದ್ ಕೂಡ ಭಾಗಿ ಆಗಿದ್ದಾರೆ. ಆ ಸಂದರ್ಭದ ಫೋಟೋಗಳು ವೈರಲ್ ಆಗಿವೆ.
2008ರಿಂದಲೂ ಸಜಾ ಆಜಾದ್ ಅವರು ಚಿತ್ರರಂಗದಲ್ಲಿ ಇದ್ದಾರೆ. ಆದರೆ ಹೆಚ್ಚು ಸಿನಿಮಾಗಳನ್ನು ಅವರು ಮಾಡಿಲ್ಲ. ಕೆಲವು ವೆಬ್ ಸಿರೀಸ್ ಮತ್ತು ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. 2022ರಿಂದ ಈಚೆಗೆ ಹೃತಿಕ್ ರೋಷನ್ ಜೊತೆ ಅವರು ಡೇಟಿಂಗ್ ಮಾಡಲು ಆರಂಭಿಸಿದರು. ಆ ಬಳಿಕ ಅವರು ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಹೃತಿಕ್ ರೋಷನ್ ಅವರ ಕುಟುಂಬದ ಸದಸ್ಯರ ಬರ್ತ್ಡೇ ಸಮಾರಂಭದಲ್ಲೂ ಕಾಣಿಸಿಕೊಳ್ಳುವ ಮೂಲಕ ಸಜಾ ಅವರು ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಈಗ ಹೃತಿಕ್ ಮನೆಯಲ್ಲಿ ಎಲ್ಲರ ಜೊತೆ ಸೇರಿ ಅವರು ಗಣೇಶೋತ್ಸವ ಆಚರಿಸಿದ್ದಾರೆ.
View this post on Instagram
ಬಾಲಿವುಡ್ ಮಂದಿಗೆ ಗಣೇಶೋತ್ಸವ ಎಂದರೆ ಸಖತ್ ಉತ್ಸಾಹ. ಹೃತಿಕ್ ರೋಷನ್ ಕೂಡ ತಮ್ಮ ಮನೆಯಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಗಣೇಶ ವಿಸರ್ಜನೆ ವೇಳೆ ಕ್ಲಿಕ್ಕಿಸಿದ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ತಂದೆ ರಾಕೇಶ್ ರೋಷನ್ ಕೂಡ ಹಬ್ಬದಲ್ಲಿ ಭಾಗಿ ಆಗಿದ್ದರು. ಅವರೆಲ್ಲರ ಜೊತೆ ಸೇರಿ ಸಜಾ ಆಜಾದ್ ಅವರು ಖುಷಿ ಖುಷಿಯಿಂದ ಹಬ್ಬ ಆಚರಿಸಿದ್ದಾರೆ. ಹೃತಿಕ್ ಕುಟುಂಬದ ಜೊತೆ ಇಷ್ಟೆಲ್ಲ ಕ್ಲೋಸ್ ಆಗಿರುವ ಸಬಾ ಅವರು ಆದಷ್ಟು ಬೇಗ ಆ ಮನೆಗೆ ಸೊಸೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇದನ್ನೂ ಓದಿ: Hrithik Roshan: ‘ಫೈಟರ್’ ಚಿತ್ರದಲ್ಲಿ ಹೃತಿಕ್ ರೋಷನ್ಗೆ 85 ಕೋಟಿ ರೂ. ಸಂಭಾವನೆ; ದೀಪಿಕಾ ಪಡುಕೋಣೆ ಸಂಬಳ ಎಷ್ಟು?
ಬಿ-ಟೌನ್ನಲ್ಲಿ ನಡೆದ ಕೆಲವು ಪಾರ್ಟಿಗಳಿಗೆ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಅವರು ಜೋಡಿಯಾಗಿ ತೆರಳಿದ್ದಾರೆ. ಕರಣ್ ಜೋಹರ್ ಬರ್ತ್ಡೇ ಪಾರ್ಟಿಯಲ್ಲಿ ಸಬಾ ಅವರನ್ನು ತಮ್ಮ ಗರ್ಲ್ಫ್ರೆಂಡ್ ಎಂದು ಹೃತಿಕ್ ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದರು ಎಂಬ ಸುದ್ದಿ ಪ್ರಕಟ ಆಗಿತ್ತು. ಸಿನಿಮಾ ವಿಚಾರಕ್ಕೆ ಬರೋದಾದರೆ, ಹೃತಿಕ್ ರೋಷನ್ ಅವರು ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಕೈಯಲ್ಲಿ ‘ಫೈಟರ್’ ಮತ್ತು ‘ವಾರ್ 2’ ಸಿನಿಮಾಗಳು ಇವೆ. ಈ ಎರಡೂ ಸಿನಿಮಾಗಳ ಮೇಲೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.