‘ಅನಿಮಲ್’ ಚಿತ್ರದಲ್ಲಿ ಗೃಹಿಣಿ ಪಾತ್ರ ಮಾಡುತ್ತಿದ್ದಾರೆ ರಶ್ಮಿಕಾ ಮಂದಣ್ಣ; ಗಮನ ಸೆಳೆದ ಪೋಸ್ಟರ್
ರಶ್ಮಿಕಾ ಮಂದಣ್ಣ ಅವರು ಗ್ಲಾಮರ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಅನಿಮಲ್’ ಸಿನಿಮಾದಲ್ಲಿ ಗೃಹಿಣಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಂದು (ಸೆಪ್ಟೆಂಬರ್ 23) ರಿಲೀಸ್ ಆಗಿರುವ ಪೋಸ್ಟರ್ ಅದೇ ರೀತಿಯಲ್ಲಿದೆ.
ರಶ್ಮಿಕಾ ಮಂದಣ್ಣ (Rashmika Mandanna) ಅವರು ಹೊಸ ಹೊಸ ರೀತಿಯ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಅನಿಮಲ್’ ಸಿನಿಮಾ (Animal Movie) ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆ ಹೆಚ್ಚಿದೆ. ಈಗ ರಶ್ಮಿಕಾ ಮಂದಣ್ಣ ಅವರು ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿರಲಿದೆ ಎಂಬುದನ್ನು ಪರಿಚಯಿಸುವ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ.
ರಶ್ಮಿಕಾ ಮಂದಣ್ಣ ಅವರು ಗ್ಲಾಮರ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಅನಿಮಲ್’ ಸಿನಿಮಾದಲ್ಲಿ ಗೃಹಿಣಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಂದು (ಸೆಪ್ಟೆಂಬರ್ 23) ರಿಲೀಸ್ ಆಗಿರುವ ಪೋಸ್ಟರ್ ಅದೇ ರೀತಿಯಲ್ಲಿದೆ. ರಶ್ಮಿಕಾ ಪಾತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ಡಿಸೆಂಬರ್ 1ರಂದು ರಿಲೀಸ್ ಆಗಲಿದೆ.
ರಶ್ಮಿಕಾ ಮಂದಣ್ಣ ಅವರು ಸೀರೆ ಧರಿಸಿದ್ದಾರೆ. ಕತ್ತಿನಲ್ಲಿ ತಾಳಿ ಇದೆ. ಅವರ ಪಾತ್ರದ ಹೆಸರು ಗೀತಾಂಜಲಿ. ‘ನಿಮ್ಮ ಗೀತಾಂಜಲಿ’ ಎಂದು ಪೋಸ್ಟರ್ಗೆ ರಶ್ಮಿಕಾ ಕ್ಯಾಪ್ಶನ್ ನೀಡಿದ್ದಾರೆ. ‘ನೀವು ರಶ್ಮಿಕಾ ರೀತಿ ಕಾಣುತ್ತಿಲ್ಲ. ನೀವು ಈಗ ಗೃಹಿಣಿ. ಒಳ್ಳೆಯ ಮೇಕೋವರ್’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಈ ಪಾತ್ರ ತೆರೆಮೇಲೆ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
Your Geetanjali. ❤️#Animal #AnimalTeaserOn28thSept#AnimalTheFilm #AnimalOn1stDec@AnimalTheFilm @AnilKapoor #RanbirKapoor @thedeol @tripti_dimri23 @imvangasandeep #BhushanKumar @VangaPranay @MuradKhetani #KrishanKumar @anilandbhanu @VangaPictures @Cine1Studios @TSeries… pic.twitter.com/AGhexxDIHn
— Rashmika Mandanna (@iamRashmika) September 23, 2023
ಇದನ್ನೂ ಓದಿ: ರಣಬೀರ್ ಪತ್ನಿ ಪಾತ್ರದಲ್ಲಿ ರಶ್ಮಿಕಾ? ‘ಅರ್ಜುನ್ ರೆಡ್ಡಿ’ ನಿರ್ದೇಶಕನ ಹೊಸ ಚಿತ್ರದ ಬಗ್ಗೆ ಅಚ್ಚರಿಯ ಮಾಹಿತಿ ಬಹಿರಂಗ
ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ‘ಅರ್ಜುನ್ ರೆಡ್ಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದನ್ನು ಅವರಿಗೆ ಹಿಂದಿಗೆ ‘ಕಬೀರ್ ಸಿಂಗ್’ ಹೆಸರಲ್ಲಿ ರಿಮೇಕ್ ಮಾಡಿದರು. ಈ ಚಿತ್ರದಲ್ಲಿ ಮಹಿಳಾ ಪಾತ್ರಕ್ಕೆ ಹೆಚ್ಚು ಆದ್ಯತೆ ಇತ್ತು. ‘ಅನಿಮಲ್’ ಸಿನಿಮಾದಲ್ಲೂ ಹಾಗೆಯೇ ಇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ಅನಿಲ್ ಕಪೂರ್ ಅವರ ಪಾತ್ರ ಪರಿಚಯಿಸುವ ಪೋಸ್ಟರ್ ಗಮನ ಸೆಳೆದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ