‘ದಿ ವ್ಯಾಕ್ಸಿನ್​ ವಾರ್​’ ಚಿತ್ರ ಕೊವಿಡ್​ ಬಗ್ಗೆ ಅಲ್ಲ; ಹಾಗಾದ್ರೆ ಇದ್ರಲ್ಲಿ ಏನಿದೆ? ಉತ್ತರಿಸಿದ ವಿವೇಕ್​ ಅಗ್ನಿಹೋತ್ರಿ

ವ್ಯಾಕ್ಸಿನ್​ ಎಂದ ತಕ್ಷಣ ಕೊರೊನಾ ವೈರಸ್​ ನೆನಪಾಗುತ್ತದೆ. ಆದರೆ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಇರುವುದು ಕೊರೊನಾ ಬಗ್ಗೆ ಅಲ್ಲ ಎಂದಿದ್ದಾರೆ ಚಿತ್ರದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ. ಸೆಪ್ಟೆಂಬರ್​ 28ರಂದು ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆ ಆಗಲಿದೆ. ಅನೇಕ ನಗರಗಳಿಗೆ ತೆರಳಿ ಪ್ರಮೋಷನ್​ ಮಾಡಲಾಗುತ್ತಿದೆ.

‘ದಿ ವ್ಯಾಕ್ಸಿನ್​ ವಾರ್​’ ಚಿತ್ರ ಕೊವಿಡ್​ ಬಗ್ಗೆ ಅಲ್ಲ; ಹಾಗಾದ್ರೆ ಇದ್ರಲ್ಲಿ ಏನಿದೆ? ಉತ್ತರಿಸಿದ ವಿವೇಕ್​ ಅಗ್ನಿಹೋತ್ರಿ
ವಿವೇಕ್​ ಅಗ್ನಿಹೋತ್ರಿ
Follow us
ಮದನ್​ ಕುಮಾರ್​
|

Updated on: Sep 21, 2023 | 2:50 PM

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು. ನಂತರ ಅವರು ಕೈಗೆತ್ತಿಕೊಂಡ ಚಿತ್ರವೇ ‘ದಿ ವ್ಯಾಕ್ಸಿನ್​ ವಾರ್​’. ಈ ಸಿನಿಮಾದಲ್ಲಿ ಸಪ್ತಮಿ ಗೌಡ, ನಾನಾ ಪಾಟೇಕರ್​, ಪಲ್ಲವಿ ಜೋಶಿ, ಅನುಪಮ್​ ಖೇರ್​ ಮುಂತಾದವರು ನಟಿಸಿದ್ದಾರೆ. ಸೆಪ್ಟೆಂಬರ್​ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ವ್ಯಾಕ್ಸಿನ್​ ಎಂದ ತಕ್ಷಣ ಕೊರೊನಾ ವೈರಸ್​ ನೆನಪಾಗುತ್ತದೆ. ಆದರೆ ‘ದಿ ವ್ಯಾಕ್ಸಿನ್​ ವಾರ್​’ (The Vaccine War) ಸಿನಿಮಾ ಇರುವುದು ಕೊರೊನಾ ಬಗ್ಗೆ ಅಲ್ಲ ಎಂದಿದ್ದಾರೆ ವಿವೇಕ್​ ಅಗ್ನಿಹೋತ್ರಿ. ಕೊವಿಡ್​ (Covid 19) ವೈರಸ್​ಗೆ ಲಸಿಕೆ ಕಂಡುಹಿಡಿದ ವಿಜ್ಞಾನಿಗಳ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಇದು ಬಹಳ ಮುಖ್ಯವಾದ ಸಿನಿಮಾ. 2 ವರ್ಷಗಳ ಹಿಂದೆ ನಾವು ಬದುಕಿ ಉಳಿಯುತ್ತೇವೋ ಇಲ್ಲವೋ ಎಂಬ ಭಯದಲ್ಲಿ ಇದ್ದೆವು. ಇಂದು ಎದುರುಬದರು ಕುಳಿತು ಮಾತನಾಡುತ್ತಿದ್ದೇವೆ. ಇದು ಹೇಗೆ ಸಾಧ್ಯವಾಯ್ತು? ನಮ್ಮನ್ನು ಬದುಕಿಸಿದವರು ಯಾರು? ಜೀವ ಉಳಿಸಿದವರನ್ನು ನಾವು ದೇವರು ಅಂತೀವಿ. ವಿಜ್ಞಾನಿಗಳು ವ್ಯಾಕ್ಸಿನ್​ ಕಂಡುಹಿಡಿದು ನಮ್ಮ ಜೀವ ಉಳಿಸಿದರು. ಆ ಸೂಪರ್​ ಹೀರೋಗಳ ಕುರಿತು ಈ ಸಿನಿಮಾ ಮಾಡಲಾಗಿದೆ. ಪಾಸಿಟಿವ್​ ಆದಂತಹ, ಸ್ಫೂರ್ತಿ ನೀಡುವಂತಹ ಭಾವನಾತ್ಮಕವಾದ ಕಥೆ ಇದರಲ್ಲಿ ಇದೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ. ಹಾಗಿದ್ದರೂ ಕೂಡ ಇದು ಕೊವಿಡ್​ ಕುರಿತಾದ ಚಿತ್ರ ಅಲ್ಲ ಎಂಬುದು ಅವರ ಮಾತು.

ಇದನ್ನೂ ಓದಿ: ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ‘ದಿ ವ್ಯಾಕ್ಸಿನ್​ ವಾರ್​’ ಇಲ್ಲ; ಅಚ್ಚರಿ ವಿಷಯ ತಿಳಿಸಿದ ವಿವೇಕ್​ ಅಗ್ನಿಹೋತ್ರಿ

‘ಇದು ಕೊವಿಡ್​ ಸಂದರ್ಭದ ಕಥೆಯೇ ಹೊರತು ನೇರವಾಗಿ ಕೊವಿಡ್​ಗೆ ಸಂಬಂಧಿಸಿದ ಕಥೆ ಅಲ್ಲ. ನಮ್ಮ ದೇಶ ವ್ಯಾಕ್ಸಿನ್​ ಕಂಡು ಹಿಡಿದಿದ್ದು ಒಂದು ದೊಡ್ಡ ಸಾಧನೆ. 40ರಿಂದ 50 ಕೋಟಿ ಜನರು ಭಾರತದಲ್ಲಿ ಸಾಯುತ್ತಾರೆ ಎಂದು ಅನೇಕರು ಹೇಳಿದ್ದರು. ವ್ಯಾಕ್ಸಿನ್​ ಕಂಡುಹಿಡಿಯಲು ಸಾಧ್ಯವಾಗದೇ ಭಾರತ ಸೋತು ಹೋಗಲಿ ಎಂದು ದೊಡ್ಡ ಗ್ಯಾಂಗ್​ ಕಾಯುತ್ತಿತ್ತು. ಹೆಚ್ಚಿನ ಜನರು ಸಾಯಲಿ ಎಂದು ಕೂಡ ಕೆಲವರು ಬಯಸಿದ್ದರು. ವ್ಯಾಕ್ಸಿನ್​ಗೆ ಭಾರತ ದೊಡ್ಡ ಮಾರುಕಟ್ಟೆ ಆಗಲಿ ಎಂಬುದು ಅವರ ಉದ್ದೇಶ ಆಗಿತ್ತು. ವಿದೇಶಿ ವ್ಯಾಕ್ಸಿನ್​ ತಯಾರಕರು ಭಾರತದ ಕೆಲವರ ಜೊತೆ ಪಿತೂರಿ ಮಾಡಿ ನಮ್ಮ ದೇಶದಲ್ಲಿ ವ್ಯಾಕ್ಸಿನ್​ ಮಾರುವ ಪ್ಲ್ಯಾನ್​ ಮಾಡಿದ್ದರು. ಈ ಸಿನಿಮಾದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಹೇಳಲಾಗುತ್ತದೆ. ಸಾಕಷ್ಟು ಅಧ್ಯಯನ ಮಾಡಿ ನಾವು ಈ ಸಿನಿಮಾ ಮಾಡಿದ್ದೇವೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

ಇದನ್ನೂ ಓದಿ: ‘ದ್ವೇಷದ ಭಾಷಣಕ್ಕೂ ಅವಕಾಶ ನೀಡಬೇಕು’: ಬಹಿರಂಗವಾಗಿ ಹೇಳಿದ ವಿವೇಕ್​ ಅಗ್ನಿಹೋತ್ರಿ

‘ಭಾರತದ ಟಾಪ್​ ಸಂಶೋಧನಾ ಸಂಸ್ಥೆಗಳು ನಮ್ಮ ಜೊತೆ ಭಾಗಿ ಆಗಿವೆ. ಇದು ಭಾರತದ ಮೊದಲ ಬಯೋ ಸೈನ್ಸ್ ಸಿನಿಮಾ. ಸಿನಿಮಾ ಬಗ್ಗೆ ಶೇ.100 ನಂಬಿಕೆ ಇರುವ ಕಲಾವಿದರ ಜೊತೆ ನಾನು ಕೆಲಸ ಮಾಡಿದ್ದೇನೆ. ನಮ್ಮ ಸಿನಿಮಾದ ನಟರು ಪಾತ್ರಕ್ಕೆ ಜೀವ ತುಂಬುತ್ತಾರೆ. ವಿವಾದಕ್ಕೆ ಹೆದರಬಾರದು. ಸಮಸ್ಯೆ ಇದ್ದಾಗ ಪ್ರಶ್ನೆ ಎತ್ತಬೇಕು. ನಮ್ಮ ಸಿನಿಮಾಗಳಿಂದ ಚರ್ಚೆ ಶುರುವಾಗಬೇಕು ಎಂಬುದು ನನ್ನ ಉದ್ದೇಶ. ಅದಕ್ಕಾಗಿ ನಾನು ವಿವಾದಕ್ಕೆ ಹೆದರುವುದಿಲ್ಲ. ಈ ಬಾರಿ ನಾನು ಕಷ್ಟದ ಮತ್ತು ರಿಸ್ಕಿ ವಿಷಯ ಆಯ್ಕೆ ಮಾಡುಕೊಂಡಿದ್ದೇನೆ. ಸಿನಿಮಾ ಎಂದರೆ ಹಾಡು, ಡ್ಯಾನ್ಸ್​ ಅಷ್ಟೇ ಅಲ್ಲ’ ಎಂದಿದ್ದಾರೆ ವಿವೇಕ್​ ಅಗ್ನಿಹೋತ್ರಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ