ನೂರು ಕೋಟಿ ರೂಪಾಯಿ ಪ್ರಾಜೆಕ್ಟ್ ಕೈಬಿಟ್ಟು ಕೆನ್ನೆಗೆ ಹೊಡೆದುಕೊಂಡ ನಟ ಗೋವಿಂದ
ಗೋವಿಂದ ಅವರು ಪತ್ನಿ ಸುನಿತಾ ಹಾಗೂ ಮಗ ಯಶ್ವಧನ್ ಜೊತೆ ಹಬ್ಬ ಆಚರಿಸಿದ್ದಾರೆ. ಶಿಲ್ಪಾ ಶೆಟ್ಟಿ ಮನೆಯೆ ಗಣೇಶ ಚತುರ್ಥಿ ಆಚರಣೆಯಲ್ಲೂ ಇವರು ಭಾಗಿ ಆಗಿದ್ದಾರೆ. ಅಭಿಮಾನಿಗಳಿಗೆ ಅವರು ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದ್ದಾರೆ.
ನಟ ಗೋವಿಂದ (Govinda) ಅವರು ಚಿತ್ರರಂಗದಿಂದ ದೂರು ಇದ್ದಾರೆ. ನಟನೆಯ ಬಗ್ಗೆ ಅವರಿಗೆ ಆಸಕ್ತಿ ಕಡಿಮೆ ಆದಂತಿದೆ. ಒಂದು ಕಾಲದಲ್ಲಿ ಬೇಡಿಕೆಯ ಹೀರೋ ಆಗಿ ಮೆರೆದ ಅವರು ಈಗ ಸೈಡ್ಲೈನ್ ಆಗಿದ್ದಾರೆ. ಅನೇಕರು ಗೋವಿಂದ ಅವರಿಗೆ ಸಿನಿಮಾ ಆಫರ್ಗಳೇ ಬರುತ್ತಿಲ್ಲ ಎಂದು ಭಾವಿಸಿದ್ದರು. ಆದರೆ, ಅಸಲಿ ವಿಚಾರ ಬೇರೆಯೇ ಇದೆ. ಈ ಬಗ್ಗೆ ಗೋವಿಂದ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಆದರೆ, ಯಾವುದೂ ಇಷ್ಟವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಅದನ್ನು ರಿಜೆಕ್ಟ್ ಮಾಡುತ್ತಿದ್ದಾರೆ.
‘ನಾನು ಸಿನಿಮಾಗಳನ್ನು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ನನಗೆ ಸಿನಿಮಾ ಆಫರ್ಗಳು ಬರುತ್ತಿಲ್ಲ ಎಂದು ಮಾತನಾಡಿಕೊಳ್ಳುವವರಿಗೆ ಇದನ್ನು ಹೇಳ ಬಯಸುತ್ತೇನೆ. ನನಗೆ ಗಣೇಶನ ಕೃಪಾಕಟಾಕ್ಷ ಇದೆ. ನಾನು ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಪ್ರಾಜೆಕ್ಟ್ಗಳನ್ನು ರಿಜೆಕ್ಟ್ ಮಾಡಿದ್ದೇನೆ’ ಎಂದಿದ್ದಾರೆ ಗೋವಿಂದ.
‘ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂದು ಕನ್ನಡಿ ಎದುರು ನಿಂತು ನನ್ನ ಕೆನ್ನೆಗೆ ನಾನೇ ಹೊಡೆದುಕೊಂಡಿದ್ದೇನೆ. ಅವರು ನನಗೆ ಕೋಟಿ ಕೋಟಿ ರೂಪಾಯಿ ಕೊಡೋಕೆ ರೆಡಿ ಇದ್ದಾರೆ. ಆದರೆ, ಯಾವುದೋ ಒಂದು ಪಾತ್ರವನ್ನು ಒಪ್ಪಿಕೊಂಡು ಮಾಡೋಕೆ ನನಗೆ ಇಷ್ಟವಿಲ್ಲ. ನಾನು ಈ ಮೊದಲು ಮಾಡಿದ ರೀತಿಯ ಪಾತ್ರಗಳನ್ನು ಮಾಡಬೇಕಿದೆ’ ಎಂದು ಗೋವಿಂದ ಹೇಳಿದ್ದಾರೆ.
ಗೋವಿಂದ ಅವರು ಪತ್ನಿ ಸುನಿತಾ ಹಾಗೂ ಮಗ ಯಶ್ವಧನ್ ಜೊತೆ ಹಬ್ಬ ಆಚರಿಸಿದ್ದಾರೆ. ಶಿಲ್ಪಾ ಶೆಟ್ಟಿ ಮನೆಯೆ ಗಣೇಶ ಚತುರ್ಥಿ ಆಚರಣೆಯಲ್ಲೂ ಇವರು ಭಾಗಿ ಆಗಿದ್ದಾರೆ. ಅಭಿಮಾನಿಗಳಿಗೆ ಅವರು ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಸಮಂತಾ; ಆಫರ್ ಕೊಟ್ಟೋರು ಯಾರು?
ಗೋವಿಂದ ಅವರು 170ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1986ರಲ್ಲಿ. ‘ಹೀರೋ ನಂಬರ್ 1’, ‘ದುಲ್ಹೆ ರಾಜ’, ‘ಶೋಲಾ ಔರ್ ಶಬ್ನಮ್’, ‘ಪಾರ್ಟ್ನರ್’ ಮೊದಲಾದ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2019ರಲ್ಲಿ ತೆರೆಗೆ ಬಂದ ‘ರಂಗೀಲಾ ರಾಜ’ ಅವರು ಕೊನೆಯದಾಗಿ ನಟಿಸಿದ ಸಿನಿಮಾ. ಅವರು ಆದಷ್ಟು ಬೇಗ ನಟನೆಗೆ ಮರಳಲಿ ಎಂಬುದು ಅಭಿಮಾನಿಗಳ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ