‘ಅವರು 300 ಕೋಟಿ ರೂಪಾಯಿ ಕೊಡ್ತೀನಿ ಅಂದ್ರು’; ಹಣದಾಸೆಗೆ ಬಗ್ಗಲಿಲ್ಲ ವಿವೇಕ್ ಅಗ್ನಿಹೋತ್ರಿ
2022ರಲ್ಲಿ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 3 ಕೋಟಿ ರೂಪಾಯಿ. ಸಿನಿಮಾದ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ. ಬಾಯಿ ಮಾತಿನ ಪ್ರಚಾರದಿಂದ ಸಿನಿಮಾಗೆ ದೊಡ್ಡ ಲಾಭ ಆಗಿದೆ. ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಆಲೋಚನೆ ವಿವೇಕ್ ಅಗ್ನಿಹೋತ್ರಿಗೂ ಇದ್ದಿರಬಹುದು. ಆದರೆ, ಸಿನಿಮಾನ ಕೊಂಡುಕೊಳ್ಳುವ ಲೆಕ್ಕಾಚಾರದಲ್ಲಿ ಹಣ ಆಫರ್ ಮಾಡಲಾಗಿತ್ತು.
ಒಂದು ಸಿನಿಮಾ ಹಿಟ್ ಆದರೆ, ಅದಕ್ಕೆ ಸೀಕ್ವೆಲ್ ಮಾಡಲು ನಿರ್ಮಾಪಕರು ರೆಡಿ ಆಗಿರುತ್ತಾರೆ. ಇನ್ನು, ಸಣ್ಣ ಬಜೆಟ್ ಚಿತ್ರ, ಹೊಸ ನಿರ್ದೇಶಕರ ಸಿನಿಮಾ ಯಶಸ್ಸು ಕಂಡರೆ ದೊಡ್ಡ ನಿರ್ಮಾಣ ಸಂಸ್ಥೆಗಳು ಬಂದು ಹಣ ನೀಡಿ ಸೀಕ್ವೆಲ್ ಮಾಡುವಂತೆ ಪುಸಲಾಯಿಸುತ್ತಾರೆ. ವಿವೇಕ್ ಅಗ್ನಿಹೋತ್ರಿ ವಿಚಾರದಲ್ಲೂ ಹಾಗೆಯೇ ಆಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files Movie) ಹಿಟ್ ಆದ ಬಳಿಕ ಅನೇಕರು ಬಂದು ಈ ಚಿತ್ರಕ್ಕೆ ಸೀಕ್ವೆಲ್ ಮಾಡುವಂತೆ ಕೋರಿದ್ದರಂತೆ. ಅಷ್ಟೇ ಅಲ್ಲ 300 ಕೋಟಿ ರೂಪಾಯಿ ನೀಡೋಕು ಅವರು ರೆಡಿ ಇದ್ದರು. ಆದರೆ, ಇದಕ್ಕೆ ವಿವೇಕ್ ಅಗ್ನಿಹೋತ್ರಿ (Vivek Agnihotri) ಒಪ್ಪಲಿಲ್ಲ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.
2022ರಲ್ಲಿ ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 3 ಕೋಟಿ ರೂಪಾಯಿ. ಸಿನಿಮಾದ ಒಟ್ಟಾರೆ ಗಳಿಕೆ 250 ಕೋಟಿ ರೂಪಾಯಿ. ಬಾಯಿ ಮಾತಿನ ಪ್ರಚಾರದಿಂದ ಸಿನಿಮಾಗೆ ದೊಡ್ಡ ಲಾಭ ಆಗಿದೆ. ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಆಲೋಚನೆ ವಿವೇಕ್ ಅಗ್ನಿಹೋತ್ರಿಗೂ ಇದ್ದಿರಬಹುದು. ಆದರೆ, ಸಿನಿಮಾನ ಕೊಂಡುಕೊಳ್ಳುವ ಲೆಕ್ಕಾಚಾರದಲ್ಲಿ ಹಣ ಆಫರ್ ಮಾಡಲಾಗಿತ್ತು.
ಗಲಾಟಾ ಪ್ಲಸ್ಗೆ ನೀಡಿದ ಸಂದರ್ಶನದಲ್ಲಿ ವಿವೇಕ್ ಮಾತನಾಡಿದ್ದಾರೆ. ‘ನನಗೆ ಟ್ರ್ಯಾಪ್ನಲ್ಲಿ ಬೀಳೋಕೆ ಇಷ್ಟ ಇರಲಿಲ್ಲ. ಕಾಶ್ಮೀರ್ ಫೈಲ್ಸ್ ಗೆದ್ದ ಬಳಿಕ ಅನೇಕ ಸ್ಟುಡಿಯೋಗಳು 200-300 ಕೋಟಿ ರೂಪಾಯಿ ನೀಡೋಕೆ ರೆಡಿ ಇದ್ದವು. ಪ್ರತಿಯೊಬ್ಬ ಸ್ಟಾರ್ ಕೂಡ ಕರೆ ಮಾಡಿ ದೆಹಲಿ ಫೈಲ್ಸ್ ಅಥವಾ ಕಾಶ್ಮೀರ್ ಫೈಲ್ಸ್ಗೆ ಸೀಕ್ವೆಲ್ ಮಾಡುವ ಇಂಗಿತ ವ್ಯಕ್ತಪಡಿಸಿದರು. ಇವರಲ್ಲಿ ಯಾರಿಗಾದರೂ ಒಳ್ಳೆಯ ಉದ್ದೇಶ ಇದ್ದಿದ್ದರೆ ಸೀಕ್ವೆಲ್ ಮಾಡುತ್ತಿದ್ದೆ’ ಎಂದಿದ್ದಾರೆ ಅವರು.
‘ನಾನು ಹಣ ಮಾಡಬಹುದಿತ್ತು. ಆದರೆ, ನಾನು ಹಾಗೆ ಮಾಡಿಲ್ಲ. ಅದರ ಬದಲು ಸಣ್ಣ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡೆ. ಕಷ್ಟಪಟ್ಟು ಕೆಲಸ ಮಾಡಿದೆ. 50 ದಿನಗಳ ಕಾಲ ಸರಿಯಾಗಿ ನಿದ್ರಿಸಿಲ್ಲ. ನಾನು ಹಾಗೂ ಪಲ್ಲವಿ (ನಟಿ ಹಾಗೂ ವಿವೇಕ್ ಅವರ ಪತ್ನಿ) ನಾವು ಶ್ರಮಿಸುತ್ತಲೇ ಇದ್ದೆವು. ಈ ಸಿನಿಮಾ (ದಿ ವ್ಯಾಕ್ಸಿನ್ ವಾರ್) ಗೆಲ್ಲಲಿಲ್ಲ ಎಂದರೆ ದಿ ಕಾಶ್ಮೀರ್ ಫೈಲ್ಸ್ಗೆ ಮರಳುತ್ತೇವೆ’ ಎಂದು ವಿವೇಕ್ ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ಯಾರೋ ಹಣ ಹಾಕುತ್ತಾರೆ ಎಂದು ಸಿನಿಮಾ ಮಾಡಲು ರೆಡಿ ಇಲ್ಲ. ಒಂದೊಮ್ಮೆ ಹಾಗೆ ಹಣ ಹಾಕುತ್ತಾರೆ ಅದರಿಂದ ಸಿನಿಮಾ ಮಾಡಬಹುದು ನಿಜ. ಆದರೆ, ನಿರ್ಮಾಪಕರು ಹೇಳಿದಂತೆ ಇವರು ಕೇಳಬೇಕಾಗುತ್ತದೆ. ಇದರಿಂದ ಅವರ ಉದ್ದೇಶ ಏನಿರುತ್ತದೆಯೋ ಅದು ಸಫಲ ಆಗುವುದಿಲ್ಲ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಹಾಗೂ ದರ್ಶನ್ ಕುಮಾರ್ ಪ್ರಮುಖ ಪಾತ್ರ ಮಾಡಿದ್ದಾರೆ. 90ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ಈ ಸಿನಿಮಾ ಇದೆ. ಕೆಲವರು ಇದನ್ನು ಪ್ರೊಪೊಗಾಂಡ ಸಿನಿಮಾ ಎಂದು ಕರೆದಿದ್ದರು.
ಇದನ್ನೂ ಓದಿ: ‘ವಿವಾದ ಮಾಡಲೇಬೇಕು ಎಂದಿದ್ದರೆ ಕಾಶ್ಮೀರ್ ಫೈಲ್ಸ್ಗೆ ಸೀಕ್ವೆಲ್ ಮಾಡುತ್ತಿದ್ದೆ’- ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಅನುಪಮ್ ಖೇರ್, ನಾನಾ ಪಾಟೇಕರ್, ಸಪ್ತಮಿ ಗೌಡ, ಪಲ್ಲವಿ ಜೋಶಿ ಮೊದಲಾದವರು ನಟಿಸಿದ್ದಾರೆ. ಕೊವಿಡ್ ಸಂದರ್ಭದಲ್ಲಿ ವಿಜ್ಞಾನಿಗಳು ಕೊವಿಡ್ ಲಸಿಕೆ ಕಂಡು ಹಿಡಿಯಲು ಎಷ್ಟು ಶ್ರಮ ವಹಿಸಿದರು ಎಂಬುದನ್ನು ತೋರಿಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ