
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Pariniti Chopra) ಮತ್ತು ರಾಜಕಾರಣಿ ರಾಘವ್ ಚಡ್ಡಾ ತಮ್ಮ ಮಗುವಿನ ಆಗಮನದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಪರಿಣಿತಿ ಪ್ರೆಗ್ನೆಂಟ್ ಎಂಬ ವಿಚಾರ ಇದರಲ್ಲಿ ಇತ್ತು. ಈಗ ಪರಿಣಿತಿ ತಾಯಿಯಾಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರಾಘವ್ ಚಡ್ಡಾ ಸಾಮಾಜಿಕ ಮಾಧ್ಯಮದಲ್ಲಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಭಾನುವಾರ (ಅಕ್ಟೋಬರ್ 19) ಬೆಳಿಗ್ಗೆ ಪರಿಣಿತಿ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಬಂದಿತ್ತು. ಇದು ಅಭಿಮಾನಿಗಳಿಗೆ ಅವರ ಆರೋಗ್ಯದ ಬಗ್ಗೆ ಚಿಂತೆ ಮೂಡಿಸಿತು. ಈಗ, ಅಂತಿಮವಾಗಿ, ಅವರ ಮನೆಗೆ ಗಂಡು ಮಗುವಿನ ಆಗಮನ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
‘ಕೊನೆಗೂ, ನಮ್ಮ ಮಗ ಬಂದಿದ್ದಾನೆ. ಈ ಪುಟ್ಟ ಅತಿಥಿ ಬರುವ ಮೊದಲು ಜೀವನ ಹೇಗಿತ್ತು ಎಂದು ನಮಗೆ ನಿಜವಾಗಿಯೂ ನೆನಪಿಲ್ಲ. ನಮ್ಮ ಹೃದಯ ಸಂತೋಷದಿಂದ ತುಂಬಿದೆ. ಮೊದಲು ನಾವು ಒಬ್ಬರಿಗೊಬ್ಬರು ಇದ್ದೆವು ಆದರೆ ಈಗ ನಮಗೆ ಎಲ್ಲವೂ ಇದೆ. ಪ್ರೀತಿ ಮತ್ತು ಕೃತಜ್ಞತೆಯಿಂದ, ಪರಿಣಿತಿ ಮತ್ತು ರಾಘವ್’ ಎಂದು ರಾಘವ್ ಚಡ್ಡಾ ಪೋಸ್ಟ್ ಮಾಡಿದ್ದಾರೆ.
ರಾಘವ್ ಅವರು ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲರೂ ದಂಪತಿಗಳ ಹೊಸ ಪ್ರಯಾಣಕ್ಕೆ ಪ್ರೀತಿ ಮತ್ತು ಆಶೀರ್ವಾದಗಳನ್ನು ಕಳುಹಿಸಿದ್ದಾರೆ.
ಪರಿಣಿತಿ ಮತ್ತು ರಾಘವ್ ಅವರ ವಿವಾಹ ಸಮಾರಂಭವು ಸೆಪ್ಟೆಂಬರ್ 24, 2023ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಿತು. ಈ ವಿವಾಹದಲ್ಲಿ ಬಾಲಿವುಡ್ ಮತ್ತು ರಾಜಕೀಯದ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದಕ್ಕೂ ಮೊದಲು, ಈ ಜೋಡಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ಇದನ್ನೂ ಓದಿ: ತಾಯಿ ಆಗ್ತಿದ್ದಾರೆ ಪರಿಣಿತಿ ಚೋಪ್ರಾ; ಇವರ ವಿವಾಹ ನಡೆದಿದ್ದು ಯಾವಾಗ?
ಪರಿಣಿತಿ ತನ್ನ ಪ್ರೇಮಕಥೆಯ ಬಗ್ಗೆ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದರು. ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇವರು ಭೇಟಿಯಾದರು. ಅದಾದ ನಂತರ, ಇವರ ಮಧ್ಯೆ ಗೆಳೆತನ ಮೂಡಿತು. ಅದು ಪ್ರೀತಿಗೆ ತಿರುಗಿತು. ಆ ಬಳಿಕ ಇವರು ಮದುವೆಯಾಗಲು ನಿರ್ಧರಿಸಿದರು. ವಿಶೇಷ ಎಂದರೆ, ಇವರಿಬ್ಬರೂ ಲಂಡನ್‌ನಲ್ಲಿ ಒಂದೇ ಕಾಲೇಜ್ನಲ್ಲಿ ಶಿಕ್ಷಣ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.