AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಹಾಟ್ ದೃಶ್ಯಗಳಿಗೆ ಸಿಬಿಎಫ್​​ಸಿ ಕತ್ತರಿ, ‘ಥಮಾ’ಕ್ಕೆ ಯು/ಎ

Rashmika Mandanna: ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ‘ಥಮ’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ರಶ್ಮಿಕಾ ಮಂದಣ್ಣ ಬಲು ಹಾಟ್ ಆಗಿ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಸಿಬಿಎಫ್​​ಸಿಯು ರಶ್ಮಿಕಾರ ಕೆಲ ಹಾಟ್ ದೃಶ್ಯಗಳಿಗೆ ಕತ್ತರಿ ಹಾಕಿದೆ. ರಶ್ಮಿಕಾ ದೃಶ್ಯಗಳಿಗೆ ಮಾತ್ರವಲ್ಲದೆ ಇನ್ನೂ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿಸಿದೆ.

ರಶ್ಮಿಕಾ ಹಾಟ್ ದೃಶ್ಯಗಳಿಗೆ ಸಿಬಿಎಫ್​​ಸಿ ಕತ್ತರಿ, ‘ಥಮಾ’ಕ್ಕೆ ಯು/ಎ
Rashmika Mandanna
ಮಂಜುನಾಥ ಸಿ.
|

Updated on: Oct 19, 2025 | 2:53 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾಲಿವುಡ್​​ನ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ರಣ್​​ಬೀರ್ ಕಪೂರ್, ಸಲ್ಮಾನ್ ಖಾನ್, ಕಾರ್ತಿಕ್ ಆರ್ಯನ್ ಅಂಥಹಾ ಸ್ಟಾರ್​​ಗಳ ಜೊತೆಗೆ ನಟಿಸಿದ್ದಾರೆ. ದಕ್ಷಿಣದಲ್ಲಿ ‘ಪಕ್ಕದ ಮನೆ ಹುಡುಗಿ’ ರೀತಿಯ ಪಾತ್ರಗಳಿಂದ ಗಮನ ಸೆಳೆದಿದ್ದ ರಶ್ಮಿಕಾ ಇದೀಗ ಬಾಲಿವುಡ್​​ಗೆ ಹೋಗಿ ಹಾಟ್ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷ ಗ್ಲಾಮರಸ್ ಪಾತ್ರಗಳಿಂದ ದೂರವಿದ್ದ ರಶ್ಮಿಕಾ ಇದೀಗ ಬಾಲಿವುಡ್​​ನ ಬೇಡಿಕೆಗೆ ತಕ್ಕಂತೆ ಮೈ ಚಳಿ ಬಿಟ್ಟಿದ್ದಾರೆ. ರಶ್ಮಿಕಾ ‘ಗ್ಲಾಮರಸ್’ ಆಗಿ ಕಾಣಿಸಿಕೊಂಡಿರುವ ‘ಥಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗೆ ಸಿಬಿಎಫ್​​ಸಿ ಪ್ರಮಾಣ ಪತ್ರ ಪಡೆದುಕೊಂಡಿದೆ. ಸಿಬಿಎಫ್​​ಸಿಯು ರಶ್ಮಿಕಾರ ಹಾಟ್ ಅವತಾರಕ್ಕೆ ಕತ್ತರಿ ಹಾಕಿದ್ದಾರೆ.

‘ಥಮ’ ಸಿನಿಮಾನಲ್ಲಿ ದೆವ್ವದ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು, ಬಲು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಐಟಂ ಹಾಡೊಂದಕ್ಕೆ ಬಲು ಮಾದಕವಾಗಿ ಹೆಜ್ಜೆ ಸಹ ಹಾಕಿದ್ದಾರೆ. ಅಲ್ಲದೆ ನಾಯಕ ಆಯುಷ್ಮಾನ್ ಖುರಾನಾ ಜೊತೆಗೆ ಶೃಂಗಾರ ದೃಶ್ಯಗಳಲ್ಲಿ ನಟಿಸಿದ್ದಾರೆ. ಕೆಲವು ಕಿಸ್ಸಿಂಗ್ ದೃಶ್ಯಗಳಲ್ಲಿಯೂ ಸಹ ಭಾಗಿ ಆಗಿದ್ದಾರೆ. ಆದರೆ ರಶ್ಮಿಕಾರ ಹಾಟ್​​ನೆಸ್​​ಗೆ ಸಿಬಿಎಫ್​​ಸಿ ಬ್ರೇಕ್ ಹಾಕಿದ್ದು, ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದೆ.

ಸಿಬಿಎಫ್​​ಸಿ ಅವರು ರಶ್ಮಿಕಾ ಹಾಗೂ ಆಯುಷ್ಮಾನ್ ಅವರ ಕಿಸ್ಸಿಂಗ್ ದೃಶ್ಯದ ಅವಧಿಯನ್ನು ಕಡಿಮೆ ಮಾಡಿದ್ದಾರೆ. ಕಿಸ್ಸಿಂಗ್ ದೃಶ್ಯದ ಐದು ಸೆಕೆಂಡ್​​ಗೆ ಕತ್ತರಿ ಹಾಕಿದ್ದಾರೆ ಅಲ್ಲದೆ, ಕೆಲ ತೀರಾ ಗ್ಲಾಮರಸ್ ಆದ ದೃಶ್ಯಗಳಿಗೂ ಸಹ ಕತ್ತರಿ ಹಾಕುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ:ಸಿಹಿ ತಿನಿಸು ಕಂಡು ಮುಖ ಹಿಂಡಿದ ರಶ್ಮಿಕಾ ಮಂದಣ್ಣ

ಇವು ಮಾತ್ರವೇ ಅಲ್ಲದೆ ಸಿನಿಮಾನಲ್ಲಿ ‘ಆಜಾದಿ’ ಎಂಬ ಪದಕ್ಕೂ ಸಹ ಸಿಬಿಎಫ್​​ಸಿ ಕತ್ತರಿ ಹಾಕಿದೆ. ‘ಆಜಾದಿ ದೂಂಗಾ’ (ಸ್ವಾತಂತ್ರ್ಯ ಕೊಡಿಸುತ್ತೇನೆ) ಎಂಬ ಡೈಲಾಗ್ ಅನ್ನು ತೆಗೆಯುವಂತೆ ಸೂಚಿಸಿದ್ದು ಅದರ ಬದಲಿಗೆ ಚಿತ್ರತಂಡವು ‘ಅಯ್ಯಾಷಿ ಕರಾತಾ ಹೂ’ (ಮಜಾ ಮಾಡಿಸುತ್ತೇನೆ) ಎಂಬ ಸಂಭಾಷಣೆ ಸೇರಿಸಿದೆ. ಇದು ಮಾತ್ರವೇ ಅಲ್ಲದೆ ‘ಅಲೆಕ್ಸಾಂಡರ್’ ಪದವನ್ನು ತೆಗೆದು ಹಾಕಿದೆ. ಅದರ ಬದಲಿಗೆ ಚಿತ್ರತಂಡ ‘ಸಿಖಂಧರ್’ ಪದವನ್ನು ಸೇರಿಸಿದೆ. ಸಿನಿಮಾದಲ್ಲಿದ್ದ ‘ಅಶ್ವತ್ಥಾಮ’ ಸಂಭಾಷಣೆಯನ್ನು ಸಹ ಮ್ಯೂಟ್ ಮಾಡಲಾಗಿದೆ. ಇದೊಂದು ಹಾರರ್ ಸಿನಿಮಾ ಆಗಿದ್ದು ಸಿನಿಮಾನಲ್ಲಿದ್ದ ರಕ್ತ ಕುಡಿಯುವ ಶಬ್ದವನ್ನು ಸಹ ಮ್ಯೂಟ್ ಮಾಡಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಪ್ರಮಾಣ ಪತ್ರ ನೀಡಲಾಗಿದೆ.

‘ಥಮ’ ರಶ್ಮಿಕಾರ ಮೊದಲ ಹಾರರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕ. ನವಾಜುದ್ಧೀನ್ ಸಿದ್ಧಿಖಿ ವಿಲನ್. ಸಿನಿಮಾ ಅನ್ನು ಮ್ಯಾಡ್​​ಲಾಕ್ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ನಿರ್ದೇಶನ ಮಾಡಿರುವುದು ಆದಿತ್ಯ ಸರ್ಪೋಟ್ಧಾರ್. ಸಿನಿಮಾ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್