ನಟ ಶಾರುಖ್ ಖಾನ್ ಅವರನ್ನು ನೋಡಲು ಜನರು ಮುಗಿಬೀಳುತ್ತಾರೆ ಎಂಬುದು ಹೊಸದೇನೂ ಇಲ್ಲ. ಈಗ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ನೋಡಲು ಕೂಡ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಆರ್ಯನ್ ಖಾನ್ ಇನ್ನೂ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿಲ್ಲ. ಅದಕ್ಕೂ ಮುನ್ನವೇ ಅವರಿಗೆ ಅಭಿಮಾನಿಗಳ ಬಳಗ ಸೃಷ್ಟಿ ಆಗಿದೆ. ಅವರು ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಹೊಸ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದರೆ ಶಾರುಖ್ ಖಾನ್ ಪುತ್ರನ ಬಗ್ಗೆ ಜನರಿಗೆ ಎಷ್ಟು ಕ್ರೇಜ್ ಎಂಬುದು ತಿಳಿಯುತ್ತದೆ.
ಆರ್ಯನ್ ಖಾನ್ ಅವರು ಇತ್ತೀಚೆಗೆ ಮುಂಬೈನಲ್ಲಿ ಪಾರ್ಟಿಯೊಂದನ್ನು ಅಟೆಂಡ್ ಮಾಡಿದರು. ಪಾರ್ಟಿ ನಡೆಯುವ ಸ್ಥಳಕ್ಕೆ ಬಂದ ಅವರು ಕಾರಿನಿಂದ ಕಳೆಗೆ ಇಳಿಯುತ್ತಿದ್ದಂತೆಯೇ ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಮುತ್ತಿಕೊಂಡರು. ಫೋಟೋ ತೆಗೆಯುವ ಉತ್ಸಾಹದಲ್ಲಿ ಫೋಟೋಗ್ರಾಫರ್ ಒಬ್ಬನಂತೂ ಕೆಳಗೆ ಬಿದ್ದೇಬಿಟ್ಟ!
ಇದನ್ನೂ ಓದಿ: ಆರ್ಯನ್ ಖಾನ್ ಬಟ್ಟೆ ವ್ಯಾಪಾರದಲ್ಲಿ ಶಾರುಖ್ ಕೂಡ ಚೌಕಾಸಿ ಮಾಡಲಾಗುತ್ತಿಲ್ಲ; ಅಬ್ಬಬ್ಬಾ ದುಬಾರಿ ಬೆಲೆ
ಕೆಳಗೆ ಬಿದ್ದ ಫೋಟೋಗ್ರಾಫರ್ ಮೇಲೆ ಏಳಲು ಆರ್ಯನ್ ಖಾನ್ ಸಹಾಯ ಮಾಡಿದರು. ಬಳಿಕ ಅವರು ಮುಂದೆ ಸಾಗಿದರು. ಅಕ್ಕಪಕ್ಕದಲ್ಲಿ ಇದ್ದ ಜನರು ಆರ್ಯನ್ ಖಾನ್ನ ನೋಡಲು, ಕೈ ಕುಲುಕಲು, ಮಾತನಾಡಿಸಲು ಸಖತ್ ಉತ್ಸಾಹ ತೋರಿಸಿದರು. ಎಲ್ಲರ ಕಡೆಗೆ ಕೈ ಬೀಸಿದ ಆರ್ಯನ್ ಖಾನ್ ಅವರು ಪಾರ್ಟಿ ನಡೆಯುತ್ತಿದ್ದ ಜಾಗದ ಒಳಗೆ ತೆರಳಿದರು. ವೈರಲ್ ಆಗಿರುವ ಈ ವಿಡಿಯೋ ನೋಡಿ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Aryan Khan clicked in Mumbai. This boy has everything going right for him to become a huge movie star!!!
What do you say??? pic.twitter.com/7hEV3Tb3xL
— Faridoon Shahryar (@iFaridoon) July 7, 2024
ಇದೇ ಪಾರ್ಟಿಗೆ ಆರ್ಯನ್ ಖಾನ್ ಅವರ ಗರ್ಲ್ಫ್ರೆಂಡ್ ಲರಿಸ್ಸಾ ಬೊನೆಸಿ ಕೂಡ ಬಂದಿದ್ದರು. ಅವರಿಬ್ಬರು ಈ ಮೊದಲು ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ತಮ್ಮ ರಿಲೇಷನ್ಶಿಪ್ ಬಗ್ಗೆ ಅವರು ಬಹಿರಂಗವಾಗಿ ಮಾತನಾಡಿಲ್ಲ. ಆರ್ಯನ್ ಖಾನ್ ಅವರು ತಂದೆ ರೀತಿ ನಟನೆಯನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ಅವರು ನಿರ್ದೇಶನದ ಕಡೆಗೆ ಆಸಕ್ತಿ ತೋರಿಸಿದ್ದಾರೆ. ಅವರು ಆ್ಯಕ್ಷನ್-ಕಟ್ ಹೇಳಿರುವ ‘ಸ್ಟಾರ್ಡಮ್’ ವೆಬ್ ಸರಣಿ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಇದರ ಚಿತ್ರೀಕರಣ ಅಂತ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.