ಮ್ಯಾಗಜೀನ್ ಒಂದರ ಮುಖಪುಟದಲ್ಲಿ ಕಾಕತಾಳೀಯವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಸೈಫ್- ಕರೀನಾ ಪೋಷಕರು; ಚಿತ್ರ ನೋಡಿ

| Updated By: shivaprasad.hs

Updated on: Sep 14, 2021 | 11:32 AM

Saif Ali Khan and Kareena Kapoor: ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಪೋಷಕರು 1970ರ ಕಾಲಘಟ್ಟದಲ್ಲಿ ಮುಂಚೂಣಿಯಲ್ಲಿದ್ದವರು. ಮ್ಯಾಗಜೀನ್ ಒಂದರ ಮುಖಪುಟದಲ್ಲಿ ನಾಲ್ವರೂ ಕಾಕತಾಳೀಯವಾಗಿ ಒಟ್ಟಿಗೆ ಕಾಣಿಸಿಕೊಂಡಿರುವ ಚಿತ್ರ ಈಗ ವೈರಲ್ ಆಗಿದೆ.

ಮ್ಯಾಗಜೀನ್ ಒಂದರ ಮುಖಪುಟದಲ್ಲಿ ಕಾಕತಾಳೀಯವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಸೈಫ್- ಕರೀನಾ ಪೋಷಕರು; ಚಿತ್ರ ನೋಡಿ
ಮನ್ಸೂರ್ ಅಲಿ ಖಾನ್, ಶರ್ಮಿಳಾ ಹಾಗೂ ರಣಧೀರ್ ಕಪೂರ್, ಬಬಿತಾ
Follow us on

ಪ್ರಸ್ತುತ ಬಾಲಿವುಡ್​ನಲ್ಲಿ ತಾರಾ ಜೋಡಿಯೆಂದು ಪ್ರಸಿದ್ಧರಾದವರಲ್ಲಿ ಕರೀನಾ ಕಪೂರ್(Kareena Kapoor) ಹಾಗೂ ಸೈಫ್ ಅಲಿ ಖಾನ್(Saif Ali Khan) ಜೋಡಿಯೂ ಒಂದು. ಅವರ ಪೋಷಕರು ಕೂಡ 1970ರ ಕಾಲಘಟ್ಟದಲ್ಲಿ ಬಾಲಿವುಡ್​ನಲ್ಲಿ ಮಿಂಚಿದವರು. ಕರೀನಾ ಪೋಷಕರಾದ ರಣಧೀರ್ ಕಪೂರ್ ಹಾಗೂ ಬಬಿತಾ ಕಪೂರ್, ಸೈಫ್ ಪೋಷಕರಾದ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟಾಗೋರ್ ಒಂದೇ ಮ್ಯಾಗಜೀನ್ ಕವರ್​ನಲ್ಲಿ ಕಾಕತಾಳೀಯವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ಅಚ್ಚರಿಯ ಸಂಗತಿ ಈಗ ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ ಸಂಬಂಧಿಕರಾಗಿರುವ ಪಟೌಡಿ ಹಾಗೂ ಕಪೂರ್ ಕುಟುಂಬ, ಆಗ ಅಚ್ಚರಿಯ ರೀತಿಯಲ್ಲಿ ಮ್ಯಾಗಜೀನ್​ ಒಂದರ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು. 

ಕರೀನಾ ಪೋಷಕರಾದ ರಣಧೀರ್ ಹಾಗೂ ಬಬಿತಾ 1970ರ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಖ್ಯಾತ ಕ್ರಿಕೆಟ್ ತಾರೆಯಾಗಿ ಚಿರಪರಿಚಿತರಾಗಿದ್ದರು. ಅವರ ಪತ್ನಿ ಶರ್ಮಿಳಾ ಟಾಗೋರ್ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಆ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಮ್ಯಾಗಜೀನ್ ಒಂದು ಮುಖಪುಟದಲ್ಲಿ ಪ್ರಕಟಿಸಿತ್ತು. ಇದೀಗ ಆ ಫೊಟೊವನ್ನು ನೋಡಿ ಅಭಿಮಾನಿಗಳು ಹಳೆಯ ನೆನಪುಗಳಿಗೆ ಜಾರಿದ್ದಾರೆ.

ಮ್ಯಾಗಜೀನ್​ನ ಮುಖಪುಟ ಇಲ್ಲಿದೆ:

ವೈರಲ್ ಆಗಿರುವ ಮ್ಯಾಗಜೀನ್ ಮುಖಪುಟ

ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಶರ್ಮಿಲಾ 1969ರಲ್ಲಿ ವಿವಾಹವಾಗಿದ್ದರು. ಮನ್ಸೂರ್ 2011ರಲ್ಲಿ ನಿಧನರಾಗಿದ್ದಾರೆ. ರಣಧೀರ್ ಕಪೂರ್ ಹಾಗೂ ಬಬಿತಾ 1971ರಲ್ಲಿ ವಿವಾಹವಾಗಿದ್ದರು. ಪಟೌಡಿ ಕುಟುಂಬ ಹಾಗೂ ಕಪೂರ್ ಕುಟುಂಬದ ಕುಡಿಗಳಾದ ಸೈಫ್- ಕರೀನಾ, 2012ರಲ್ಲಿ ವಿವಾಹವಾಗಿದ್ದರು. ದಂಪತಿಗೆ ತೈಮೂರ್ ಹಾಗೂ ಜೇಹ್ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ಮೊದಲು ಸೈಫ್​ಗೆ ಅಮೃತಾ ಸಿಂಗ್​ರೊಂದಿಗೆ ವಿವಾಹವಾಗಿತ್ತು.

ಇದನ್ನೂ ಓದಿ:

ಮಾರ್ವೆಲ್ ಸರಣಿಯ ಹೊಸ ಚಿತ್ರಕ್ಕೂ, ಅಜಯ್​ ದೇವಗನ್​ರ ‘ಜಿಗರ್’ ಚಿತ್ರಕ್ಕೂ ಸಾಮ್ಯತೆ ಕಂಡುಹಿಡಿದ ಅಭಿಮಾನಿಗಳು

ರಶ್ಮಿಕಾ ಮಂದಣ್ಣಗೆ ಪೈಪೋಟಿ ನೀಡಲು ಬಂದಿರುವ ಕನ್ನಡತಿ ಕೃತಿ ಶೆಟ್ಟಿಗೆ ಪರಭಾಷೆಯಲ್ಲಿ ಫುಲ್​ ಡಿಮ್ಯಾಂಡ್​​

(Picture of Saif Ali Khan and Kareena Kapoor parents covered in a magazine cover in that time goes viral)