ಮುಂಬೈನಲ್ಲಿ ಪ್ರಿಯಾಂಕಾ ಚೋಪ್ರಾ ಸುತ್ತಾಟ; ಊಟ ಸವಿದ ನಟಿ ಖುಷಿಯಲ್ಲಿ ಹೇಳಿದ್ದೇನು?

‘ಹಳೆಯ ನೆನಪು ಕಾಡುವ ಮೆರೈನ್​ಡ್ರೈವ್​ನಲ್ಲಿ ಒಂದು ಚಿಕ್ಕ ಸ್ಟಾಪ್. ಮುಂಬೈ ನಾನು ನಿನ್ನನ್ನು ಮಿಸ್ ಮಾಡಿಕೊಂಡೆ’ ಎಂದು ಪ್ರಿಯಾಂಕಾ ಚೋಪ್ರಾ ಬರೆದುಕೊಂಡಿದ್ದಾರೆ.

ಮುಂಬೈನಲ್ಲಿ ಪ್ರಿಯಾಂಕಾ ಚೋಪ್ರಾ ಸುತ್ತಾಟ; ಊಟ ಸವಿದ ನಟಿ ಖುಷಿಯಲ್ಲಿ ಹೇಳಿದ್ದೇನು?
Priyanka Chopra
Edited By:

Updated on: Nov 05, 2022 | 2:59 PM

ಪ್ರಿಯಾಂಕಾ ಚೋಪ್ರಾ (priyanka chopra) ಪ್ರಸ್ತುತ ಭಾರತದಲ್ಲಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಮುಂಬೈಗೆ ಬಂದಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತರು ಹಾಗೂ ಕುಟುಂಬದ ಜೊತೆಗೆ ಹೆಚ್ಚಾಗಿ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಮುಂಬೈನ ತಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಿ ಪೋಟೋ ಕ್ಲಿಕ್ ಮಾಡುತ್ತಿದ್ದಾರೆ.​ ಜೊತೆಗೆ ಭಾರತೀಯ ಭಕ್ಷ್ಯಗಳನ್ನು ಸವಿಯುತ್ತಿರುವ ಪೋಸ್ಟ್​ಗಳನ್ನು ಇನ್​ಸ್ಟಾಗ್ರಾಮ್ ನಲ್ಲಿ ​(instagram) ಹಂಚಿಕೊಂಡಿದ್ದಾರೆ.
ಮಂಗಳವಾರ ಭಾರತಕ್ಕೆ ಬಂದಿಳಿದ ಪ್ರಿಯಾಂಕಾ ತಮ್ಮ ಕೆಲಸಗಳ ಜೊತೆಯಲ್ಲಿ ಮುಂಬೈ ಸುತ್ತಮುತ್ತ ಪ್ರವಾಸಗಳಲ್ಲಿ ನಿರತರಾಗಿದ್ದಾರೆ. ಶುಕ್ರವಾರ (ನವೆಂಬರ್ 4) ಪ್ರಿಯಾಂಕಾ ಚೋಪ್ರಾ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಟೇಬಲ್​ ಮೇಲೆ ಭಾರತೀಯ ಭಕ್ಷ್ಯಗಳನ್ನು ಇಟ್ಟುಕೊಂಡು ‘ಹೋಮ್​ ಫುಡ್​ ಇಸ್​ ದಿ ಬೆಸ್ಟ್’ ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಪೋಸ್​ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ಮೂರು ವರ್ಷಗಳ ನಂತರ ಭಾರತಕ್ಕೆ ಬಂದಿದ್ದಾರೆ. ತಾಯ್ನಾಡನ್ನು ಎಷ್ಟರ ಮಟ್ಟಿಗೆ ಮಿಸ್​ ಮಾಡಿಕೊಂಡಿದ್ದೇನೆ ಎಂಬುದನ್ನು ಅವರು ಇನ್​ಸ್ಟಾಗ್ರಾಮ್ ಪೋಸ್ಟ್​ಗಳ ಮೂಲಕ ಹೇಳಿದ್ದಾರೆ. ಪ್ರಿಯಾಂಕಾ ಬುಧವಾರ ಕಾರ್ಯಕ್ರಮವೊಂದಕ್ಕೆ ತೆರೆಳುತ್ತಿದ್ದರು. ಈ ವೇಳೆ ಮುಂಬೈನ ಮೆರೈನ್​ಡ್ರೈವ್ ಕೆಲಕಾಲ ಕಾರು ನಿಲ್ಲಿಸಿ ಆ ಸ್ಥಳದ ಪೋಟೋ ಮತ್ತು ವಿಡೀಯೋಗಳನ್ನು ಕ್ಲಿಕ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಒಂದು ನಿಮಿಷವಾದರೂ ನಾನು ನಿನ್ನನ್ನು ಮಿಸ್​ ಮಾಡಿಕೊಂಡಿದ್ದೇನೆ ಎಂದು ಬರೆದುಕೊಳ್ಳುವುದರ ಮೂಲಕ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

‘ಹಳೆಯ ನೆನಪು ಕಾಡುವ ಮೆರೈನ್​ಡ್ರೈವ್​ನಲ್ಲಿ ಒಂದು ಚಿಕ್ಕ ಸ್ಟಾಪ್. ಮುಂಬೈ ನಾನು ನಿನ್ನನ್ನು ಮಿಸ್ ಮಾಡಿಕೊಂಡೆ’ ಎಂದು ಪ್ರಿಯಾಂಕಾ ಚೋಪ್ರಾ ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ನಲ್ಲಿ ಕೊನೆಯದಾಗಿ 2019ರಲ್ಲಿ ‘ದಿ ಸ್ಕೈ ಇಸ್​ ಪಿಂಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ ಅವರು ಹಲವು ಹಾಲಿವುಡ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ