AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishab Shetty: ಬಾಲಿವುಡ್ ಸಿನಿಮಾ ​ ಸೋಲುತ್ತಿರಲು ಕಾರಣ ಏನು? ಎಂದು ಹೇಳಿದ ರಿಷಬ್​ ಶೆಟ್ಟಿ

ರಿಷಬ್​ ಶೆಟ್ಟಿ ಅವರ ಪ್ರಕಾರ ಬಾಲಿವುಡ್​ (bollywood)ಸಿನಿಮಾ ಅತಿಯಾಗಿ ಪಾಶ್ಚಿಮಾತ್ಯ ಪ್ರಭಾವದಿಂದ ಕೂಡಿದೆ. ಇದನ್ನು ಬಿಟ್ಟು ಸ್ಥಳೀಯ ಪ್ರದೇಶದ ಜನ ಸಾಮಾನ್ಯರ ಬದುಕಿನ ಬಗ್ಗೆ ತಿಳಿದಿರುವ ಕಥೆಗಳನ್ನ ಜನರ ಬಳಿ ಕೊಂಡೊಯ್ಯಬೇಕು.

Rishab Shetty: ಬಾಲಿವುಡ್ ಸಿನಿಮಾ ​ ಸೋಲುತ್ತಿರಲು ಕಾರಣ ಏನು? ಎಂದು ಹೇಳಿದ ರಿಷಬ್​ ಶೆಟ್ಟಿ
ರಿಷಬ್
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 06, 2022 | 11:33 AM

ರಿಷಬ್​ ಶೆಟ್ಟಿ ಅವರ ಪ್ರಕಾರ ಬಾಲಿವುಡ್(bollywood)ಸಿನಿಮಾ ಅತಿಯಾಗಿ ಪಾಶ್ಚಿಮಾತ್ಯ ಪ್ರಭಾವದಿಂದ ಕೂಡಿದೆ. ಇದನ್ನು ಬಿಟ್ಟು ಸ್ಥಳೀಯ ಪ್ರದೇಶದ ಜನ ಸಾಮಾನ್ಯರ ಬದುಕಿನ ಬಗ್ಗೆ ತಿಳಿದಿರುವ ಕಥೆಗಳನ್ನ ಜನರ ಬಳಿ ಕೊಂಡೊಯ್ಯಬೇಕು ಇದರಿಂದ ಸ್ಥಳೀಯ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯ ಇದನ್ನು ಇಂದಿನ ಬಾಲಿವುಡ್​ ನಿರ್ಮಾಪಕರು ಮರೆತುಬಿಟ್ಟಿದ್ದಾರೆ ಎಂದಿದ್ದಾರೆ.

ಕಾಂತಾರ (kantara) ಒಂದು ಕಾಲ್ಪನಿಕ ಕಥೆಯಾಗಿದ್ದು ಪ್ರಾದೇಶಿಕ ಜನರ ಜೀವನವನ್ನಾಧರಿಸಿದೆ ಇನ್ನು ಈ ಸಿನಿಮಾವನ್ನು 16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಭಾರತೀಯ ಸಿನಿಮಾದಲ್ಲಿ 2022 ರ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದಾಗಿದೆ.

ಕಾಂತಾರ ಸಿನಿಮಾ ಈಗಾಗಲೇ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು ಈಗಾಗಲೇ 325ಕೋಟಿಗೂ ಅಧಿಕ ರೂಪಾಯಿ ಗಳಿಸಿದೆ ಹಿಂದಿಯಲ್ಲಿ 53ಕೋಟಿ ರೂಪಾಯಿ ಗಳಿಸುವುದರೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದೆ. ಜೊತೆಗೆ ಇತರೆ ಭಾಷೆಗಳಲ್ಲಿ ರಿಮೇಕ್​ ಮಾಡುವ ಮಾತುಕತೆಗಳು ಕೇಳಿಬರುತ್ತಿವೆ ಇದರ ಬಗ್ಗೆ ರಿಷಬ್​ ಊಹೆ ಮಾಡಲಾರೆ ಎನ್ನುತ್ತಾರೆ.

ನಾವು ‘ಸಿನಿಮಾವನ್ನು ಪ್ರೇಕ್ಷಕರಿಗಾಗಿ ನಿರ್ಮಿಸುತ್ತೇವೆ ನಮಗಾಗಿ ಅಲ್ಲ. ನಾವು ಅವರ ಭಾವನೆಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಅವರ ಮೌಲ್ಯಗಳು ಮತ್ತು ಜೀವನ ವಿಧಾನಗಳು ಯಾವುವು ಎಂಬುದನ್ನು ನೋಡಬೇಕಾಗಿದೆ. ಈಗ ಹೆಚ್ಚು ವಿದೇಶಿ ವ್ಯಾಮೋಹ ಮತ್ತು ಹಾಲಿವುಡ್ ಪ್ರಭಾವ ಅದೇ ತರಹದ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದನ್ನು ನಿವೇಕೆ ಮಾಡುತ್ತಿರಿ? ಜನರು ಈಗಾಗಲೇ ಅಂತಹ ಸಿನಿಮಾಗಳನ್ನು ನೋಡಿದ್ದಾರೆ ಎಂದು ಹೇಳುತ್ತಾರೆ.

ಕಾಂತಾರ ಸಿನಿಮಾವನ್ನು ನಾನು ನೋಡುವ ದೃಷ್ಟಿ ಕೋನದಿಂದ ನೋಡಿದರೆ ಎಲ್ಲಾ ಸಿನಿಮಾದಲ್ಲೂ ಇರುವ ಹಾಗೆ ಹೀರೋ, ವಿಲನ್​, ರೋಮ್ಯಾನ್ಸ್ ಇದೆ. ಇದರ ಜೊತೆ ನಾನು ನೋಡಿದ ನನ್ನ ಹಳ್ಳಿಯ ಕಥೆಯನ್ನು ಪ್ರಸ್ತುತ ಪಡಿಸಿದ್ದೇನೆ ಬಹುಶಃ ನಿರ್ಮಾಪಕರು ತಮ್ಮ ಪ್ರದೇಶದಲ್ಲಿನ ಸಂಸ್ರ್ಕತಿಯನ್ನ ಕಂಡುಕೊಂಡ ಸಿನಿಮಾ ಮಾಡಿದರೆ ಅದು ಗೆಲ್ಲಬಹುದು ಆದರೂ ಅದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತಿಚೀನ ದಿನಗಳಲ್ಲಿ ಭಾರತೀಯತೆಯೊಂದಿಗೆ ಸಂಪರ್ಕ ಹೊಂದಿದ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ ಗಂಗೂಬಾಯಿ ಕಥಿಯಾವಾಡಿ, ದಿ ಕಾಶ್ಮೀರಿ ಪೈಲ್ಸ್​, ಭೂಲ್​ ಭುಲೈಯಾ-2 ಇವುಗಳು ಹೆಚ್ಚಾಗಿ ಪ್ರಾದೇಶಿಕತೆಯನ್ನು ಸಾರುತ್ತವೆ ಅದನ್ನೇ ಜನರ ಬಳಿಗೆ ಕೊಂಡೊಯ್ಯಬೇಕು ಎಂದು ಸಿನಿಮಾ ನಿರ್ಮಾಪಕರಿಗೆ ಹೇಳಿದ್ದಾರೆ.

ಮತ್ತಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ