
‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು ಮತ್ತು ಅವರು ಈ ಚಿತ್ರದ ಸೀಕ್ವೆಲ್ನಲ್ಲಿ ಇರೋದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅವರು ಮಾತ್ರ ಅಲ್ಲ ಈ ಚಿತ್ರದ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಕೂಡ ಈ ವಿಷಯವನ್ನು ಖಚಿಪಡಿಸಿತ್ತು.ಈಗ ಸೀಕ್ವೆಲ್ಗೆ ಪ್ರಿಯಾಂಕಾ ಚೋಪ್ರಾ ಅವರನ್ನ ಪರಿಣಿಸುವ ಬಗ್ಗೆ ತಂಡದವರು ಆಲೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಟಾಲಿವುಡ್ ನಗರಿಯಲ್ಲಿ ಈ ರೀತಿಯ ಸುದ್ದಿ ಹರಿದಾಡುತ್ತಾ ಇದೆ.
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಕಥೆ ಪೂರ್ಣಗೊಡಿಲ್ಲ. ಈ ಚಿತ್ರದ ಕೊನೆಯಲ್ಲಿ ದೀಪಿಕಾ ಪಾತ್ರ ಕಿಡ್ನ್ಯಾಪ್ ಆಗುತ್ತದೆ. ಹೀಗಾಗಿ, ಪಾರ್ಟ್ 2 ಮಾಡಲೇಬೇಕಾದ ಅನಿವಾರ್ಯತೆ ತಂಡಕ್ಕೆ ಇದೆ. ಈ ಚಿತ್ರದ ನಿರ್ದೇಕ ನಾಗ್ ಅಶ್ವಿನ್ ಅವರು ಸಿನಿಮಾಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗ ಹೊಸ ಚಿತ್ರಕ್ಕೆ ನಾಯಕಿ ಆಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಪರಿಗಣಿಸಲಾಗುತ್ತಿದೆಯಂತೆ.
ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಸ್ನ ಮದುವೆ ಆದ ಬಳಿಕ ವಿದಶಕ್ಕೆ ಹಾರಿದರು. ಹಾಲಿವುಡ್ ಚಿತ್ರಗಳ್ನು ಮಾಡುತ್ತಿದ್ದರು. ಆದರೆ, ಈಗ ಅವರು ಮತ್ತೆ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ. ದೊಡ್ಡ ಸಂಭಾವನೆ ಕೊಟ್ಟಿದ್ದಕ್ಕೆ ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಿಯಾಂಕಾ ನಾಯಕಿ ಆಗಿ ಮಿಂಚಲಿದ್ದು, ಮಹೇಶ್ ಬಾಬು ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:‘ವಾರಣಾಸಿ’ ಸಿನಿಮಾ ಇವೆಂಟ್ನಲ್ಲಿ ಸಖತ್ ಆಗಿ ಮಿಂಚಿದ ಪ್ರಿಯಾಂಕಾ ಚೋಪ್ರಾ
ಈಗ ಪ್ರಿಯಾಂಕಾ ಅವರನ್ನು ಸಂಪರ್ಕಿಸಲು ತಂಡದವರು ರೆಡಿ ಆಗಿದ್ದಾರೆ. ಅವರು ಒಪ್ಪಿಗೆ ಕೊಟ್ಟರ ತಂಡ ಕೂಡ ಖುಷಿ ಪಡಲಿದೆ. ‘ಕಲ್ಕಿ 2898 ಎಡಿ’ ಸೀಕ್ವೆಲ್ ಬಹುತೇಕ ಶೂಟ್ ಸ್ಟುಡಿಯೋದಲ್ಲಿ ನಡೆಯಲಿದೆ. ಈ ವಿಷಯವನ್ನು ಪ್ರಿಯಾಂಕಾಗೆ ಮನದಟ್ಟು ಮಾಡಿಸಲು ತಂಡ ನಿರ್ಧರಿಸಿದೆ. ಈ ಸಿನಿಮಾ ಶೂಟ್ಗೆ ಅವರು ಹೈದರಾಬಾದ್ಗೆ ಬರಬೇಕಾಗುತ್ತದೆ.
ದೀಪಿಕಾ ಪಡುಕೋಣೆ ಅವರು ಮೊದಲು ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಿಂದ ಹೊರ ಹೋದರು. ಆ ಬಳಿಕ ‘ಕಲ್ಕಿ 2898 ಎಡಿ’ ಸೀಕ್ವೆಲ್ನನಿಂದ ಹೊರಕ್ಕೆ ಬಂದರು. ಇದಕ್ಕೆಲ್ಲ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆದಿದೆ. ದೀಪಿಕಾ ಅವರು ಕೇವಲ 8 ಗಂಟೆ ಮಾತ್ರ ಶೂಟ್ ಮಾಡೋದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ, ಬಂದ ಲಾಭದಲ್ಲಿ ಅರು ಪಾಲು ಕೇಳಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣದಿಂದ ಅವರನ್ನು ಹೊರಕ್ಕೆ ಇಡಲಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ನಟಿಸಿದರೆ ಉತ್ತಮ ಎಂಬುದು ಅಭಿಮಾನಿಗಳ ಅಭಿಪ್ರಾಯ ಕೂಡ ಹೌದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Wed, 3 December 25