ಮಲ್ಟಿಪ್ಲೆಕ್ಸ್​ಗಳ ವಿರುದ್ಧ ಸಿಡಿದೆದ್ದ ಹೊಂಬಾಳೆ, ಸರಣಿ ಟ್ವೀಟ್ ಮಾಡಿದ ಪಿವಿಆರ್ ಸಿಇಒ

|

Updated on: Dec 20, 2023 | 9:18 PM

PVR CEO: ‘ಸಲಾರ್’ ಸಿನಿಮಾವನ್ನು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಹೊಂಬಾಳೆ ಘೋಷಿಸಿದ ಬೆನ್ನಲ್ಲೆ ಪಿವಿಆರ್-ಐನಾಕ್ಸ್ ಸಿಇಒ ಸರಣಿ ಟ್ವೀಟ್ ಮಾಡಿದ್ದಾರೆ.

ಮಲ್ಟಿಪ್ಲೆಕ್ಸ್​ಗಳ ವಿರುದ್ಧ ಸಿಡಿದೆದ್ದ ಹೊಂಬಾಳೆ, ಸರಣಿ ಟ್ವೀಟ್ ಮಾಡಿದ ಪಿವಿಆರ್ ಸಿಇಒ
Follow us on

ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ (ಪಿವಿಆರ್, ಐನಾಕ್ಸ್, ಮಿರಾಜ್‍) ಗಳಲ್ಲಿ ತಮ್ಮ ನಿರ್ಮಾಣದ ‘ಸಲಾರ್’ (Salaar) ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲವೆಂದು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಸಂಸ್ಥೆ ಘೋಷಿಸಿದೆ. ಪಿವಿಆರ್-ಐನಾಕ್ಸ್ ಮಲ್ಟಿಪ್ಲೆಕ್ಸ್​ ಚೈನ್, ಈ ಹಿಂದೆ ಒಪ್ಪಿಕೊಂಡಂತೆ ‘ಡಂಕಿ’ ಹಾಗೂ ‘ಸಲಾರ್’ ಸಿನಿಮಾಕ್ಕೆ ಸಮಾನವಾದ ಶೋಗಳನ್ನು ನೀಡುತ್ತಿಲ್ಲವಾದ್ದರಿಂದ ತಾವು ಈ ಕಠಿಣ ನಿರ್ಧಾರ ತಳೆಯುತ್ತಿರುವುದಾಗಿ ಹೊಂಬಾಳೆ ಹೇಳಿದೆ. ಇದರ ಬೆನ್ನಲ್ಲೆ ಪಿವಿಆರ್-ಐನಾಕ್ಸ್​​ನ ಸಿಇಒ ಸರಣಿ ಟ್ವೀಟ್ ಮಾಡಿದ್ದಾರೆ.

‘‘ಸಾಮಾನ್ಯವಾಗಿ, ನಾವು ನಿರ್ಮಾಪಕರಿಗೆ ಸಂಬಂಧಿಸಿದ ವಿಷಯಗಳನ್ನು ನಮ್ಮಲ್ಲೇ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ನಮ್ಮ ದೃಷ್ಟಿಕೋನವನ್ನು ಹೇಳಲೇ ಬೇಕಾಗಿ ಬಂದಿರುವ ಸಮಯವಿದು. ಪಿವಿಆರ್-ಐನಾಕ್ಸ್​ನಿಂದ ಅನ್ಯಾಯ ಮಾಡಿದೆ ಎಂಬ ಕೆಲವು ಅಸಂಬಂಧ್ಧ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ’’ ಎಂದಿದ್ದಾರೆ ಪಿವಿಆರ್​-ಐನಾಕ್ಸ್ ಸಿಇಒ ಕಮಲ್ ಜ್ಞಾನ್​ಚಂದಾನಿ.

ಮುಂದುವರೆದು ಟ್ವೀಟ್ ಮಾಡಿರುವ ಜ್ಞಾನ್​ಚಂದಾನಿ, ‘‘ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವ ನಿರ್ಮಾಪಕರ ಬಗ್ಗೆ ಪವಿಆರ್-ಐನಾಕ್ಸ್​ಗೆ ಇರುವಷ್ಟು ಗೌರವ ಇನ್ಯಾರಿಗೂ ಇಲ್ಲ. ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುವ ಸಮಯದಲ್ಲಿ ವ್ಯಾಪಾರಿಕ ಭಿನ್ನಾಭಿಪ್ರಾಯಗಳು ಮೂಡುವುದು ಬಹಳ ಸಹಜ. ಇದು ಮೊದಲಲ್ಲ, ಕೊನೆಯೂ ಅಲ್ಲ’’ ಎಂದಿದ್ದಾರೆ.

ಇದನ್ನೂ ಓದಿ:BREAKING: ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ ‘ಸಲಾರ್’ ಬಿಡುಗಡೆ ಇಲ್ಲ

‘‘ಎಲ್ಲವೂ ಆದಷ್ಟು ಬೇಗ ಸರಿಯಾಗಲಿದೆ. ನಿಮ್ಮ ಚಿತ್ರ-ವಿಚಿತ್ರ ವಾದಗಳನ್ನು ತುಸು ಬದಿಗೆ ಇಡಿ’’ ಎಂದು ಕಮಲ್ ಜ್ಞಾನ್​ಚಂದಾನಿ ಮನವಿ ಮಾಡಿದ್ದಾರೆ. ‘ಸಲಾರ್’ ಸಿನಿಮಾವನ್ನು ದಕ್ಷಿಣ ಭಾರತದ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಮಾಡದಿರುವ ಘೋಷಣೆ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ‘ಬ್ಯಾನ್​ಪಿವಿಆರ್​ಐನಾಕ್ಸ್’ ಹ್ಯಾಷ್​ಟ್ಯಾಗ್ ಟ್ರೆಂಡ್ ಆಗುತ್ತಿದ್ದು, ಜನರು, ಟಿಕೆಟ್​ಗಳನ್ನು ರದ್ದು ಮಾಡಿಕೊಳ್ಳುತ್ತಿದ್ದಾರೆ. ಇತರೆ ಶೋಗಳ ಮೇಲೂ ಇದರ ಪ್ರಭಾವ ಆಗುತ್ತಿದೆ.

‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 21ಕ್ಕೆ ತೆರೆಗೆ ಬರುತ್ತಿದೆ. ಉತ್ತರ ಭಾರತದಲ್ಲಿ ಬಹುತೇಕ ಶೋಗಳು ‘ಡಂಕಿ’ಗೆ ನೀಡಲಾಗಿದೆ. ಆದರೆ ದಕ್ಷಿಣ ಭಾರತದಲ್ಲಿಯೂ ‘ಸಲಾರ್​’ಗಿಂತಲೂ ‘ಡಂಕಿ’ಗೆ ಹೆಚ್ಚು ಶೋ ನೀಡಿರುವುದು ಹೊಂಬಾಳೆ ಫಿಲ್ಮ್ಸ್​​ನ ಅಸಮಾಧಾನಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ