‘ಡಂಕಿ’ ಸಿನಿಮಾದಲ್ಲಿ ಏನಿದೆ ಹೊಸ ವಿಷಯ?
Dunki: ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 21 ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಹೊಸ ವಿಷಯಗಳೇನಿದೆ?
ಶಾರುಖ್ ಖಾನ್ (Shah Rukh Khan) ನಟನೆಯ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಡಿಸೆಂಬರ್ 21ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರ ಕೇವಲ ಹಿಂದಿಯಲ್ಲಿ ಮಾತ್ರ ಬಿಡುಗಡೆ ಆಗುತ್ತಿದೆ. ಆದಾಗ್ಯೂ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಜೋರಾಗಿಯೇ ಇದೆ. ‘ಡಂಕಿ’ ಸಿನಿಮಾ ನೋಡಲು ಹಲವು ಕಾರಣಗಳು ಇವೆ. ಅದು ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಮಾಸ್ ಬಳಿಕ ಕ್ಲಾಸ್
ಶಾರುಖ್ ಖಾನ್ ಅವರು 2018ರಲ್ಲಿ ರಿಲೀಸ್ ಆದ ‘ಜೀರೋ’ ಸಿನಿಮಾ ಬಳಿಕ ನಾಲ್ಕು ವರ್ಷ ಬ್ರೇಕ್ ಪಡೆದರು. ಈ ವರ್ಷದ ಆರಂಭದಲ್ಲಿ ಅವರ ನಟನೆಯ ‘ಪಠಾಣ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ‘ಜವಾನ್’ ಸಿನಿಮಾ ತೆರೆಗೆ ಬಂತು. ಈ ಚಿತ್ರ ಕೂಡ ಯಶಸ್ಸು ಕಂಡಿತು. ಎರಡೂ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿದೆ. ಎರಡೂ ಚಿತ್ರಗಳು ಮಾಸ್ ಶೈಲಿಯಲ್ಲಿ ಮೂಡಿ ಬಂದಿವೆ. ಈಗ ‘ಡಂಕಿ’ ಕ್ಲಾಸ್ ರೀತಿಯಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದ ಮೂಲಕ ಮೂರನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಶಾರುಖ್.
ನಟನೆ
ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಮೊದಲಾದವರು ‘ಡಂಕಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ರಮವಾಗಿ ಬೇರೆ ದೇಶಕ್ಕೆ ಹೋಗುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಎಲ್ಲಾ ಕಲಾವಿದರು ಉತ್ತಮ ನಟನೆಯನ್ನು ತೋರಿದ್ದಾರೆ ಅನ್ನೋದಕ್ಕೆ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ.. ಶಾರುಖ್ ಖಾನ್ ಅವರು ಬೇರೆಯದೇ ಅವತಾರ ತಾಳಿದ್ದಾರೆ. ಈ ಕಾರಣದಿಂದ ಸಿನಿಮಾನ ಮಿಸ್ ಮಾಡಿಕೊಳ್ಳುವಂತಿಲ್ಲ.
ರಾಜ್ಕುಮಾರ್ ಹಿರಾನಿ
ರಾಜ್ಕುಮಾರ್ ಹಿರಾನಿ ಸಿನಿಮಾಗಳಲ್ಲಿ ಆ್ಯಕ್ಷನ್ ಇರೋದಿಲ್ಲ. ಸಹಜ ವಿಚಾರವನ್ನು ಅವರು ಹೊಸ ರೀತಿಯಲ್ಲಿ ಜನರ ಎದುರು ತೆರೆದಿಡುತ್ತಾರೆ. ‘ಮುನ್ನಾ ಭಾಯ್ ಎಂಬಿಬಿಎಸ್’, ‘ಪಿಕೆ’, ‘ಸಂಜು’ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆ. ಈ ಕಾರಣಕ್ಕೆ ‘ಡಂಕಿ’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಸೃಷ್ಟಿ ಆಗಿದೆ. ಅವರಿಗೆ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿಯೂ ಇದೆ.
ಮೊದಲ ಬಾರಿ
ಶಾರುಖ್ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಬ್ಬರೂ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಕಾರಣದಿಂದ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರ ಅಡ್ವಾನ್ಸ್ ಬುಕಿಂಗ್ನಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದೆ.
ಸಿನಿಮಾದ ಕಥೆ..
‘ಡಂಕಿ’ ಚಿತ್ರದ ಕಥೆ ಭಿನ್ನವಾಗಿದೆ. ಶಾರುಖ್ ಖಾನ್, ತಾಪ್ಸಿ ಮೊದಲಾದವರು ಲಂಡನ್ಗೆ ತೆರಳುವ ಕನಸು ಹೊಂದಿರುತ್ತಾರೆ. ಲಂಡನ್ ತೆರಳಲು ವೀಸಾ ಪಡೆಯಲು ಹರಸಾಹಸ ಪಡುತ್ತಾರೆ. ಆದರೆ, ವೀಸಾ ಸಿಗುವುದಿಲ್ಲ. ಈ ಕಾರಣಕ್ಕೆ ತೆರಳಲು ಮುಂದಾಗುತ್ತಾರೆ. ಈ ಚಿತ್ರದಲ್ಲಿ ಹಾಸ್ಯ, ರೊಮ್ಯಾನ್ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ