‘ಡಂಕಿ’ ಚಿತ್ರದಲ್ಲಿನ ಮುಖ್ಯ ವಿಷಯವಾದ ‘ಡಾಂಕಿ ಜರ್ನಿ’ ಎಂದರೆ ಏನು? ಯಾಕೆ ಇದು ಅಪಾಯಕಾರಿ?

ಡಾಂಕಿ ಜರ್ನಿ ಮಾಡುವುದು ಸುಲಭವಲ್ಲ. ಅದು ಬಲು ಕಷ್ಟಕರವಾದ ಮಾರ್ಗ. ಪೊಲೀಸರ ಕೈಗೆ ಸಿಕ್ಕಿಕೊಂಡರೆ ದೇವರೇ ಗತಿ. ಭಯಂಕರವಾದ ಕಾಡು ದಾಟಬೇಕು. ಅಪಾಯದ ಕಣಿವೆಗಳಲ್ಲಿ ನಡೆಯಬೇಕು. ಊಟ, ನಿದ್ದೆ ಇಲ್ಲದೇ ಕದ್ದು ಮುಚ್ಚಿ ಪ್ರಯಾಣ ಮಾಡಬೇಕು. ಈ ಸಮಯದಲ್ಲಿ ದರೋಡೆಕೋರರು ಎದುರಾಗಬಹುದು.

‘ಡಂಕಿ’ ಚಿತ್ರದಲ್ಲಿನ ಮುಖ್ಯ ವಿಷಯವಾದ ‘ಡಾಂಕಿ ಜರ್ನಿ’ ಎಂದರೆ ಏನು? ಯಾಕೆ ಇದು ಅಪಾಯಕಾರಿ?
ಡಂಕಿ ಸಿನಿಮಾ ಪೋಸ್ಟರ್​
Follow us
|

Updated on: Dec 20, 2023 | 4:49 PM

ನಿರ್ದೇಶಕ ರಾಜ್​ಕುಮಾರ್​ ಹಿರಾನಿ (Rajkumar Hirani) ಅವರು ಸಿನಿಮಾ ಮಾಡಿದರೆ ಅದರಲ್ಲಿ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಗಂಭೀರವಾದ ವಿಚಾರವನ್ನು ಅವರು ಬಹಳ ಕಾಮಿಡಿ ಮೂಲಕ ಜನರಿಗೆ ತಲುಪಿಸುತ್ತಾರೆ. ಎಮೋಷನ್​ಗಳನ್ನು ತುಂಬ ಚೆನ್ನಾಗಿ ಕಟ್ಟಿಕೊಡುತ್ತಾರೆ. ಹಾಗಾಗಿ ಅವರು ಬಾಲಿವುಡ್​ನಲ್ಲಿ ಮಾಡಿದ ಎಲ್ಲ ಸಿನಿಮಾಗಳು ಕೂಡ ಸೂಪರ್​ ಹಿಟ್​ ಆಗಿವೆ. ಈಗ ಅವರು ಶಾರುಖ್​ ಖಾನ್​ ಜೊತೆ ಕೈ ಜೋಡಿಸಿ ಡಂಕಿ’ ಸಿನಿಮಾ (Dunki Movie) ಮಾಡಿದ್ದಾರೆ. ಇದರಲ್ಲಿ ಕೂಡ ಒಂದು ವಿಶೇಷವಾದ ಕಥಾವಸ್ತುವನ್ನು ಜನರಿಗೆ ಪರಿಚಯಿಸಲಿದ್ದಾರೆ. ಈ ಸಿನಿಮಾದಲ್ಲಿ ಡಾಂಕಿ ಜರ್ನಿ (Donkey Journey) ಅಥವಾ ಡಾಂಕಿ ರೂಟ್​ ಎಂಬುದು ಪ್ರಮುಖ ವಿಷಯವಾಗಿರಲಿದೆ. ಆ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

‘ಮುನ್ನಾಭಾಯ್​ ಎಂಬಿಬಿಎಸ್​’ ಸಿನಿಮಾದಲ್ಲಿ ವೈದ್ಯಕೀಯ ಲೋಕದ ಕೆಲವು ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ರಾಜ್​ಕುಮಾರ್​ ಹಿರಾನಿ ಸಿನಿಮಾ ಮಾಡಿದ್ದರು. ‘3 ಈಡಿಯಟ್ಸ್​’ ಚಿತ್ರದಲ್ಲಿ ಶಿಕ್ಷಣ ವ್ಯವಸ್ಥೆಯ ಲೋಪದ ಬಗ್ಗೆ ಬೆಳಕು ಚೆಲ್ಲಿದ್ದರು. ‘ಪಿಕೆ’ ಸಿನಿಮಾದಲ್ಲಿ ಧರ್ಮಗಳ ಜಗಳಕ್ಕೆ ಅಂತ್ಯಹಾಡುವ ಪ್ರಯತ್ನ ಮಾಡಲಾಗಿತ್ತು. ಈಗ ‘ಡಂಕಿ’ ಸಿನಿಮಾದಲ್ಲಿ ಅವರು ಅಕ್ರಮ ಗಡಿ ದಾಟುವಿಕೆಯ ಬಗ್ಗೆ ಹೇಳಲಿದ್ದಾರೆ. ಹಾಗಾಗಿ ಈ ಸಿನಿಮಾ ವಿಶೇಷ ಎನಿಸಿಕೊಳ್ಳುತ್ತಿದೆ.

ಇದನ್ನೂ ಓದಿ: Salaar Vs Dunki: ಅಡ್ವಾನ್ಸ್​ ಬುಕಿಂಗ್​ನಲ್ಲಿ ‘ಸಲಾರ್​’ ಚಿತ್ರವನ್ನು ಹಿಂದಿಕ್ಕಿದ ‘ಡಂಕಿ’

ಡಿಸೆಂಬರ್​ 21ರಂದು ‘ಡಂಕಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ವಿಕ್ಕಿ ಕೌಶಲ್​, ಬೋಮನ್​ ಇರಾನಿ, ತಾಪ್ಸಿ ಪನ್ನು ಮುಂತಾದವರು ನಟಿಸಿದ್ದಾರೆ. ಭಾರತವನ್ನು ಬಿಟ್ಟು ಲಂಡನ್​ಗೆ ಹೋಗಿ ಸೆಟ್ಲ್​ ಆಗಬೇಕು ಎಂದು ಕನಸು ಕಾಣುವ ಯುವಕರ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ‘ಡಾಂಕಿ ಜರ್ನಿ’ ಕುರಿತಾಗಿಯೇ ಈ ಸಿನಿಮಾ ಇದೆ ಎಂದು ಈಗಾಗಲೇ ಶಾರುಖ್​ ಖಾನ್​ ಅವರು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ದೇಶದ ಗಡಿ ದಾಟುವುದನ್ನು ಡಾಂಕಿ ಜರ್ನಿ ಎನ್ನುತ್ತಾರೆ. ಪಂಜಾಬಿ ಉಚ್ಛಾರದಲ್ಲಿ ಇದನ್ನು ‘ಡಂಕಿ’ ಎನ್ನುತ್ತಾರೆ. ಆ ಕಾರಣದಿಂದಲೇ ಸಿನಿಮಾಗೆ ‘ಡಂಕಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2023ರಲ್ಲಿ ಶಾರುಖ್​ ಖಾನ್​ ಅವರು ಎರಡು ಮಾಸ್​ ಸಿನಿಮಾಗಳನ್ನು (ಜವಾನ್​, ಪಠಾಣ್) ಮಾಡಿ ಗೆದ್ದಿದ್ದಾರೆ. ಈಗ ಡಂಕಿ ಸಿನಿಮಾ ಕ್ಲಾಸ್​ ಆಗಿ ಬರುತ್ತಿದೆ. ಅದರ ಕಥಾವಸ್ತು ಇಂಟರೆಸ್ಟಿಂಗ್​ ಆಗಿದೆ.

ಬೇರೆ ದೇಶಕ್ಕೆ ಹೋಗಿ ಉತ್ತಮವಾದ ಬದುಕು ಕಟ್ಟಿಕೊಳ್ಳಬೇಕು. ಚೆನ್ನಾಗಿ ಸಂಪಾದನೆ ಮಾಡುವಂತಹ ಉದ್ಯೋಗ ಮಾಡಬೇಕು ಎಂಬ ಕಾರಣಕ್ಕೆ ಕೆಲವರು ವಿದೇಶದ ಕನಸು ಕಾಣುತ್ತಾರೆ. ಆದರೆ ಬೇರೆ ದೇಶಕ್ಕೆ ಹೋಗಿ ನೆಲೆಸಲು ಅಷ್ಟು ಸುಲಭಕ್ಕೆ ಅವಕಾಶ ಸಿಗುವುದಿಲ್ಲ. ಆಗ ‘ಡಾಂಕಿ ಜರ್ನಿ’ ರೀತಿಯ ಅಡ್ಡದಾರಿಗಳನ್ನು ಹುಡುಕುತ್ತಾರೆ. ಇಂಥ ಕೆಲಸಕ್ಕಾಗಿ ಏಜೆಂಟ್​ಗಳೂ ಇದ್ದಾರೆ.

ಇದನ್ನೂ ಓದಿ: ‘ಜವಾನ್​’, ‘ಪಠಾಣ್​’ ರೀತಿಯೇ ‘ಡಂಕಿ’ ಕೂಡ ಹಿಟ್​ ಆಗುತ್ತೆ ಎಂಬುದಕ್ಕೆ ಇಲ್ಲಿವೆ ಕಾರಣಗಳು..

ಡಾಂಕಿ ಜರ್ನಿ ಮಾಡುವುದು ಸುಲಭವಲ್ಲ. ಅದು ಬಲು ಕಷ್ಟಕರವಾದ ಮಾರ್ಗ. ಪೊಲೀಸರ ಕೈಗೆ ಸಿಕ್ಕಿಕೊಂಡರೆ ದೇವರೇ ಗತಿ. ಭಯಂಕರವಾದ ಕಾಡು ದಾಟಬೇಕು. ಅಪಾಯದ ಕಣಿವೆಗಳಲ್ಲಿ ನಡೆಯಬೇಕು. ಊಟ, ನಿದ್ದೆ ಇಲ್ಲದೇ ಕದ್ದು ಮುಚ್ಚಿ ಪ್ರಯಾಣ ಮಾಡಬೇಕು. ಈ ಸಮಯದಲ್ಲಿ ದರೋಡೆಕೋರರು ಎದುರಾಗಬಹುದು. ಅತ್ಯಾಚಾರ ನಡೆಯಬಹುದು. ಈ ಯಾವ ಕ್ರೈಮ್​ಗಳೂ ಕೂಡ ವರದಿ ಆಗುವುದಿಲ್ಲ. ಸಾವು ಕೂಡ ಸಂಭವಿಸಬಹುದು. ಏಜೆಂಟ್​ಗಳಿಗೆ ಸರಿಯಾದ ಸಮಯಕ್ಕೆ ಹಣ ಪಾವತಿ ಆಗದಿದ್ದರೆ ಜೀವಕ್ಕೆ ಅಪಾಯ ಎದುರಾಗಬಹುದು. ಇಷ್ಟೆಲ್ಲ ರಿಸ್ಕ್​ ತೆಗೆದುಕೊಂಡು ಯುವಕರು ಯಾಕೆ ಡಾಂಕಿ ಜರ್ನಿ ಮಾಡುತ್ತಾರೆ ಎಂಬುದನ್ನು ತಿಳಿಯಬೇಕಿದ್ದರೆ ‘ಡಂಕಿ’ ಸಿನಿಮಾ ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ