AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಟಿಯರ ಮಧ್ಯೆ ನಡೆದಿತ್ತು ಭರ್ಜರಿ ಫೈಟ್​; ಇಲ್ಲಿದೆ ವಿವರ..

ಖಾಸಗಿ ವಿಚಾರ ಇಟ್ಟುಕೊಂಡು ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಜಗಳ ಮಾಡಿಕೊಂಡಿದ್ದಾರೆ. ಆ ಸಾಲಿನಲ್ಲಿ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮೊದಲಾದವರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಈ ನಟಿಯರ ಮಧ್ಯೆ ನಡೆದಿತ್ತು ಭರ್ಜರಿ ಫೈಟ್​; ಇಲ್ಲಿದೆ ವಿವರ..
ಈ ನಟಿಯರ ಮಧ್ಯೆ ನಡೆದಿತ್ತು ಭರ್ಜರಿ ಫೈಟ್​; ಇಲ್ಲಿದೆ ವಿವರ..
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 21, 2023 | 8:31 AM

Share

ಬಾಲಿವುಡ್​ನಲ್ಲಿ ಹಲವು ಸೆಲೆಬ್ರಿಟಿಗಳು ಮಿಂಚುತ್ತಿದ್ದಾರೆ. ಹಲವು ಕಾರಣಕ್ಕೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ನಡೆದ ಉದಾಹರಣೆ ಸಾಕಷ್ಟಿದೆ. ಕೆಲವು ಸೆಲೆಬ್ರಿಟಿಗಳು ಓಪನ್ ಆಗಿ ಕಿತ್ತಾಡಿಕೊಂಡಿದ್ದಾರೆ. ಇನ್ನೂ ಕೆಲ ಸೆಲೆಬ್ರಿಟಿಗಳ ಮಧ್ಯೆ ಶೀತಲ ಸಮರ ನಡೆದಿದೆ. ಖಾಸಗಿ ವಿಚಾರ ಇಟ್ಟುಕೊಂಡು ದೊಡ್ಡ ದೊಡ್ಡ ಸೆಲೆಬ್ರಿಟಿಗಳೇ ಜಗಳ ಮಾಡಿಕೊಂಡಿದ್ದಾರೆ. ಆ ಸಾಲಿನಲ್ಲಿ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ (Katrina Kaif) ಮೊದಲಾದವರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್

ದೀಪಿಕಾ ಪಡುಕೋಣೆ  ಹಾಗೂ ಕತ್ರಿನಾ ಕೈಫ್​ ಬಾಲಿವುಡ್​ನ ಬೇಡಿಕೆಯ ನಟಿಯರು. ಇವರ ಮಧ್ಯೆ ಕಿತ್ತಾಟ ನಡೆದಿತ್ತು. ಇದಕ್ಕೆ ರಣಬೀರ್ ಕಪೂರ್ ಕಾರಣ ಆಗಿದ್ದರು ಎನ್ನಲಾಗಿದೆ. ರಣಬೀರ್ ಅವರು ಮೊದಲು ದೀಪಿಕಾ ಜೊತೆ ಸುತ್ತಾಟ ನಡೆಸಿದ್ದರು. ಅವರ ಜೊತೆಗೆ ಬ್ರೇಕಪ್ ಆದ ಬಳಿಕ ಅವರು ಕತ್ರಿನಾ ಜೊತೆ ಸುತ್ತಾಟ ನಡೆಸಿದ್ದರು. ಇದು ದೀಪಿಕಾಗೆ ಇಷ್ಟ ಆಗಿಲ್ಲ. ಕತ್ರಿನಾ ಹಾಗೂ ದೀಪಿಕಾ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. 2018ರಲ್ಲಿ ದೀಪಿಕಾ ಅವರು ಎಲ್ಲವನ್ನೂ ಮರೆತು ಕತ್ರಿನಾ ಅವರನ್ನು ಮದುವೆಗೆ ಆಮಂತ್ರಿಸಿದರು. ಈ ಮೂಲಕ ಇವರ ಮಧ್ಯೆ ಇರುವ ಕಿತ್ತಾಟ ಕೊನೆ ಆಯಿತು.

ಕರೀನಾ ಕಪೂರ್ ಹಾಗೂ ಬಿಪಾಶಾ ಬಸು

ಕರೀನಾ ಕಪೂರ್ ಹಾಗೂ ಬಿಪಾಶಾ ಬಸು ಅವರು ‘ಅಜ್ನಬೀ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಬಿಪಾಶಾ ಅವರು ತಾವು ಇನ್ನುಮುಂದೆ ಕರೀನಾ ಜೊತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ಕರೀನಾ ಅವರನ್ನು ಕಪ್ಪು ಬೆಕ್ಕು ಎಂದು ಬಿಪಾಶಾ ಕರೆದಿದ್ದರು. ಇಬ್ಬರ ಮಧ್ಯೆ ವೈಮನಸ್ಸಿಗೆ ಇದುವೇ ಕಾರಣ ಆಯಿತು.

ಕರೀನಾ ಕಪೂರ್-ಪ್ರಿಯಾಂಕಾ ಚೋಪ್ರಾ

ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ಮಧ್ಯೆ ಶೀತಲ ಸಮರ ಇತ್ತು. ‘ಐತ್ರಾಜ್’ ಸಿನಿಮಾ ಸೆಟ್​ನಲ್ಲಿ ಇವರ ಮಧ್ಯೆ ವೈಮನಸ್ಸು ಮೂಡಿತ್ತು. ಕರೀನಾ ಪಾತ್ರಕ್ಕಿಂತ ಪ್ರಿಯಾಂಕಾ ಮಾಡಿದ್ದ ಪಾತ್ರ ಹೆಚ್ಚು ಮೆಚ್ಚುಗೆ ಪಡೆಯಿತು. ಸಂದರ್ಶನದಲ್ಲಿ ಪ್ರಿಯಾಂಕಾ ವಿರುದ್ಧ ಕರೀನಾ ಮಾತನಾಡುತ್ತಲೇ ಬಂದರು. ಪ್ರಿಯಾಂಕಾ ಅವರ ಮಾತು, ನಟನೆ ಬಗ್ಗೆ ಕರೀನಾ ಟೀಕೆ ಮಾಡಿದ್ದರು. ಕರೀನಾ ಅವರು ಶಾಹಿದ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡ ಬಳಿಕ ಪ್ರಿಯಾಂಕಾ ಅವರು ಶಾಹಿದ್ ಜೊತೆ ಸುತ್ತಾಡಿದ್ದರು ಎನ್ನಲಾಗಿದೆ. ಇದು ಇವರ ವೈಮನಸ್ಸನ್ನು ಹೆಚ್ಚಿಸಿತ್ತು.

ಇದನ್ನೂ ಓದಿ: ‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’; ಐಶ್ವರ್ಯಾ ರೈ ಬಗ್ಗೆ ಟ್ವೀಟ್ ಮಾಡಿದ್ರಾ ಅಮಿತಾಭ್?

ಐಶ್ವರ್ಯಾ ರೈ ಹಾಗೂ ಸೋನಂ ಕಪೂರ್

ಐಶ್ವರ್ಯಾ ರೈ ಹಾಗೂ ಸೋನಂ ಕಪೂರ್ ಮಧ್ಯೆ ಯಾವುದೂ ಸರಿ ಇರಲಿಲ್ಲ. ಐಶ್ವರ್ಯಾ ಅವರು ಪ್ರತಿನಿಧಿಸುತ್ತಿದ್ದ ಬ್ರ್ಯಾಂಡ್​ಗೆ ಸೋನಂ ಪ್ರಚಾರ ರಾಯಭಾರಿ ಆದರು. ಐಶ್ವರ್ಯಾ ಅವರನ್ನು ಸೋನಂ ಆಂಟಿ ಎಂದು ಕರೆದರು. ಇದು ಐಶ್ವರ್ಯಾ ಕೋಪಕ್ಕೆ ಕಾರಣ ಆಯಿತು. ಕಾನ್ ಸಿನಿಮೋತ್ಸವದಲ್ಲಿ ಸೋನಂ ಜೊತೆ ಹೆಜ್ಜೆ ಹಾಕಲು ಐಶ್ವರ್ಯಾ ನಿರಾಕರಿಸಿದ್ದರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ