ಶಿಲ್ಪಾ ಶೆಟ್ಟಿ ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ರಾಜ್ ಕುಂದ್ರಾ ಜೊತೆಗಿನ ಅವರ ದಾಂಪತ್ಯದ ವಿಚಾರ ಸದಾ ಚರ್ಚೆ ಆಗುತ್ತಲೇ ಇರುತ್ತದೆ. ರಾಜ್ ಕುಂದ್ರಾ ಅವರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿವೆ. ಆದಾಗ್ಯೂ ಶಿಲ್ಪಾ ಅವರನ್ನು ಬಿಟ್ಟುಕೊಟ್ಟಿಲ್ಲ. ಇದಕ್ಕೆ ಕಾರಣ ಹಣ ಎನ್ನಲಾಗಿದೆ. ಇದೇ ರೀತಿಯ ಆರೋಪವನ್ನು ಅನಿಲ್ ಕಪೂರ್ ಅವರು ಕೂಡ ಮಾಡಿದ್ದರು. ಆದರೆ, ಇದನ್ನು ಫನ್ ಆಗಿ ಹೇಳಿದ್ದರು ಅವರು.
ಶಿಲ್ಪಾ ಶೆಟ್ಟಿ ಅವರು ಟಾಕ್ ಶೋ ಒಂದಕ್ಕೆ ಬಂದಿದ್ದರು. ಇದರಲ್ಲಿ ಅನಿಲ್ ಕಪೂರ್ ಕೂಡ ಇದ್ದರು. ಇದನ್ನು ನಡೆಸಿಕೊಟ್ಟಿದ್ದು ಫರಾ ಖಾನ್. ಈ ಮೂವರು ಒಟ್ಟಾಗಿ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಕೆಲವು ಫನಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ಶಿಲ್ಪಾ ಶೆಟ್ಟಿ ಅವರು ಫನ್ನಿಯಾಗಿಯೇ ಉತ್ತರ ನೀಡಿದ್ದರು.
‘ರಾಜ್ ಜೊತೆ ಮದುವೆ ಆಗಲು ನೀವು ಓಕೆ ಎಂದಿದ್ದೀರಲ್ಲ. ಅವರೇನು ಸೀಟಿ ಹೊಡೆದರಾ ಅಥವಾ ತೋಳುಗಳನ್ನು ಚಾಚಿದ್ದರಾ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ್ದ ಅನಿಲ್ ಕಪೂರ್ ‘ಹಣ ಚಾಚಿದ್ದರು’ ಎಂದಿದ್ದಾರೆ. ಇದನ್ನು ನೋಡಿ ನಕ್ಕಿದ್ದ ಶಿಲ್ಪಾ, ‘ಕೈಯನ್ನು ಕೂಡ ಚಾಚಿದ್ದರು’ ಎಂದಿದ್ದರು. ಅಂದರೆ ಹಗ್ ಮಾಡಿದ್ದರು ಎಂಬರ್ಥದಲ್ಲಿ ಅವರು ಹೇಳಿದ್ದರು. ಇದಕ್ಕೂ ಅನಿಲ್ ಕಪೂರ್ ಕೌಂಟರ್ ನೀಡಿದ್ದರು. ಅವರ ಕೈಯಲ್ಲಿ ಹಣ ಇತ್ತಲ್ಲ ಎಂದು ನಕ್ಕಿದ್ದರು.
ಈ ಮೊದಲು ಕಪಿಲ್ ಶರ್ಮಾ ಶೋಗೆ ಶಿಲ್ಪಾ ಹಾಗೂ ರಾಜ್ ಕುಂದ್ರಾ ಆಗಮಿಸಿದ್ದರು. ಈ ವೇಳೆ ಕಪಿಲ್ ಶರ್ಮಾ ಅವರು ರಾಜ್ ಕುಂದ್ರಾ ಅವರ ಮೇಲೆ ಫನ್ ಆಗಿ ಮಾತನಾಡಿದ್ದರು. ‘ಯಾವಾಗಲೂ ನೀವು ಶಿಲ್ಪಾ ಜೊತೆಯೇ ಇರುತ್ತೀರಿ. ವೆಕೇಶನ್ ತೆರಳುತ್ತೀರಿ, ಫುಟ್ಬಾಲ್ ಮ್ಯಾಚ್ಗೆ ತೆರಳುತ್ತೀರಿ. ಯಾವುದೇ ಕೆಲಸ ಇದಲ್ಲದೆ ಹಣ ಹೇಗೆ ಗಳಿಸುತ್ತೀರಿ. ನನಗೂ ಹೇಳಿ’ ಎಂದು ಜೋಕ್ ಮಾಡಿದ್ದರು.
ಇದನ್ನೂ ಓದಿ: ಶಿಲ್ಪಾ ಶೆಟ್ಟಿಗೆ ತುಳು ಭಾಷೆಯ ಮೇಲೆ ಇರೋ ಪ್ರೀತಿ ಎಂಥದ್ದು? ಇಲ್ಲಿದೆ ವಿಡಿಯೋ
ಶಿಲ್ಪಾ ಶೆಟ್ಟಿ ಅವರು ಹಣಕ್ಕಾಗಿ ರಾಜ್ ಕುಂದ್ರಾನ ಮದುವೆ ಆಗಿದ್ದೇನೆ ಎಂಬುದನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ‘ರಾಜ್ ಅವರನ್ನು ಮದುವೆ ಆಗುವುದಕ್ಕೂ ಮೊದಲು ನನ್ನ ಬಳಿ ಹಣ ಇತ್ತು. ಈಗಲೂ ಇದೆ’ ಎಂದು ಅವರು ಈ ಮೊದಲು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:50 am, Wed, 28 August 24