ರಾಜ್ ಕುಂದ್ರಾ (Raj Kundra) ಅವರು ಟ್ವಿಟರ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ‘ನಾವು ಬೇರೆ ಆಗಿದ್ದೇವೆ’ ಎಂದು ಇದರಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪತ್ನಿ ಶಿಲ್ಪಾ ಶೆಟ್ಟಿಗೆ ರಾಜ್ ಕುಂದ್ರಾ ವಿಚ್ಛೇದನ ಕೊಟ್ಟರೇ ಎಂಬ ಗುಮಾನಿ ಮೂಡಿದೆ. ಇದು ಮಧ್ಯರಾತ್ರಿ ಮಾಡಿದ ಟ್ವೀಟ್. ಇದು ಮದ್ಯ ಸೇವಿಸಿ ಮಾಡಿದ ಟ್ವೀಟ್ ಎಂದು ಕೆಲವರು ಸುಮ್ಮನಾಗಿದ್ದಾರೆ. ಈ ಬಗ್ಗೆ ಶಿಲ್ಪಾ ಶೆಟ್ಟಿ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ರಾಜ್ ಕುಂದ್ರಾ ಅವರು 2021ರಲ್ಲಿ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರು. ಅವರು ಜೈಲು ಕೂಡ ಸೇರಿದ್ದರು. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅವರು ಜೈಲಿಗೆ ಹೋದಾಗಲೇ ಶಿಲ್ಪಾ ಅವರು ರಾಜ್ ಕುಂದ್ರಾಗೆ ವಿಚ್ಛೇದನ ನಿಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಇದು ನಿಜವಾಗಿಲ್ಲ. ಪತಿ ಮಾಡಿದ ತಪ್ಪನ್ನು ಮನ್ನಿಸಿ ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮಧ್ಯೆ ರಾಜ್ ಕುಂದ್ರಾ ಮಾಡಿರೋ ಟ್ವೀಟ್ ಗಮನ ಸೆಳೆದಿದೆ. ಶಿಲ್ಪಾ ಶೆಟ್ಟಿ ಈ ಬಗ್ಗೆ ಯಾವುದೇ ಪೋಸ್ಟ್ ಹಾಕಿಲ್ಲ.
‘ನಾವು ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ದಯವಿಟ್ಟು ನಮಗೆ ಸಮಯ ನೀಡಿ’ ಎಂದು ಕೋರಿದ್ದಾರೆ ರಾಜ್ ಕುಂದ್ರಾ. ‘ಬೇರೆ ಆಗಿದ್ದೀರಿ ಎಂದರೆ ಏನು ಅರ್ಥ? ವಿಚ್ಛೇದನವೇ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಆಲ್ಕೋಹಾಲ್ ಕುಡಿದು ಮಾಡಿರುವ ಟ್ವೀಟ್ ಎಂದು ಹೇಳಿದ್ದಾರೆ.
We have separated and kindly request you to give us time during this difficult period 🙏💔
— Raj Kundra (@onlyrajkundra) October 19, 2023
ಇದನ್ನೂ ಓದಿ: ವರ್ಷಗಳ ಬಳಿಕ ಕೊನೆಗೂ ಮುಖವಾಡ ತೆಗೆದ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ
ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ 2009ರಲ್ಲಿ ಮದುವೆ ಆದರು. ವಿಯಾನ್ ಹಾಗೂ ಸಮಿಶಾ ಹೆಸರಿನ ಮಕ್ಕಳು ಇವರಿಗೆ ಇದ್ದಾರೆ. ರಾಜ್ ಕುಂದ್ರಾ ಬಯೋಪಿಕ್ ‘ಯುಟಿ 69’ ರಿಲೀಸ್ ಆಗುತ್ತಿದೆ. ಇದರ ಪ್ರಮೋಷನ್ ಗಿಮಿಕ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ