ಎದೆಯಲ್ಲಿ ಕೊರೆಯುವಷ್ಟು ನೋವು ಇಟ್ಟುಕೊಂಡು ಜನರ ನಗಿಸಿದ್ದ ರಾಜ್​ಪಾಲ್​ ಯಾದವ್

| Updated By: ರಾಜೇಶ್ ದುಗ್ಗುಮನೆ

Updated on: Mar 16, 2024 | 8:58 AM

ರಾಜ್​ಪಾಲ್ ಅವರಿಗೆ ಆಗ 20 ವರ್ಷ. ಅವರಿಗೆ ಮಾಡಲು ಒಂದು ಕೆಲಸ ಇತ್ತು. ಈ ವೇಳೆ ಮನೆಯವರಿಂದ ಮದುವೆ ಆಗಬೇಕು ಎನ್ನುವ ಒತ್ತಾಯ ಬಂತು. ಅವರು ಅರೇಂಜ್ ಮ್ಯಾರೇಜ್ ಆದರು. ಆದರೆ, ರಾಜ್​ಪಾಲ್ ಅವರ ಮೊದಲ ಪತ್ನಿ ನಿಧನ ಹೊಂದಿದರು. ಮಗು ಹುಟ್ಟಿದ ಬೆನ್ನಲ್ಲೇ ಅವರ ಮೊದಲ ಪತ್ನಿ ಕರುಣಾ ಮೃತಪಟ್ಟರು.

ಎದೆಯಲ್ಲಿ ಕೊರೆಯುವಷ್ಟು ನೋವು ಇಟ್ಟುಕೊಂಡು ಜನರ ನಗಿಸಿದ್ದ ರಾಜ್​ಪಾಲ್​ ಯಾದವ್
ರಾಜ್​ಪಾಲ್ ಯಾದವ್
Follow us on

ರಾಜ್​ಪಾಲ್ ಯಾದವ್ (Rajpal Yadav) ಅವರ ಪರಿಚಯ ಬಹುತೇಕರಿಗೆ ಇದೆ. ಅಕ್ಷಯ್ ಕುಮಾರ್ ಅವರ ಸಿನಿಮಾಗಳಲ್ಲಿ ಹಾಸ್ಯ ನಟಾಗಿ ಅವರು ಹೆಚ್ಚುಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ ಡೈಲಾಗ್​ಗಳು ಮೀಮ್​ಗಳಲ್ಲೂ ಹೆಚ್ಚು ಬಳಕೆ ಆಗುತ್ತಿವೆ. ರಾಜ್​ಪಾಲ್ ಅವರು ಎಲ್ಲರನ್ನೂ ಸಾಕಷ್ಟು ನಗಿಸಿದ್ದಾರೆ. ಆದರೆ, ಅವರ ಮನಸ್ಸಲ್ಲಿ ಸಾಕಷ್ಟು ನೋವಿತ್ತು. ಇದನ್ನು ಅವರು ಹೇಳಿಕೊಂಡಿದ್ದು ಕಡಿಮೆ. ಇಂದು (ಮಾರ್ಚ್​ 16) ಅವರಿಗೆ ಬರ್ತ್​ಡೇ. ಈ ವೇಳೆ ಅವರ ಜೀವನದಲ್ಲಿ ನಡೆದ ಘಟನೆ ನೆನಪಿಸಿಕೊಳ್ಳಲಾಗುತ್ತಿದೆ.

ರಾಜ್​ಪಾಲ್ ಅವರಿಗೆ ಆಗ 20 ವರ್ಷ. ಅವರಿಗೆ ಮಾಡಲು ಒಂದು ಕೆಲಸ ಇತ್ತು. ಈ ವೇಳೆ ಮನೆಯವರಿಂದ ಮದುವೆ ಆಗಬೇಕು ಎನ್ನುವ ಒತ್ತಾಯ ಬಂತು. ಅವರು ಅರೇಂಜ್ ಮ್ಯಾರೇಜ್ ಆದರು. ಆದರೆ, ರಾಜ್​ಪಾಲ್ ಅವರ ಮೊದಲ ಪತ್ನಿ ನಿಧನ ಹೊಂದಿದರು. ಮಗು ಹುಟ್ಟಿದ ಬೆನ್ನಲ್ಲೇ ಅವರ ಮೊದಲ ಪತ್ನಿ ಕರುಣಾ ಮೃತಪಟ್ಟರು. ಇದು ಅವರನ್ನು ಸಾಕಷ್ಟು ಧೃತಿಗೆಡಿಸಿತು. ಈ ವೇಳೆ ರಾಜ್​ಪಾಲ್ ಅವರ ಸಹಾಯಕ್ಕೆ ಬಂದಿದ್ದು ಅವರ ತಾಯಿ ಹಾಗೂ ಅತ್ತಿಗೆ. ಮಗುವನ್ನು ಸಾಕುವ ಜವಾಬ್ದಾರಿಯನ್ನು ಅವರೂ ತೆಗೆದುಕೊಂಡರು.

ಪತ್ನಿ ಮೃತಪಟ್ಟ ನಂತರ ರಾಜ್​ಪಾಲ್ ಯಾದವ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಟನೆ ಕಲಿತರು. ಅವರು ನಂತರ ಟಿವಿ ಹಾಗೂ ಸಿನಿಮಾಗೆ ಬಂದರು. 199ರಲ್ಲಿ ಅಜಯ್ ದೇವಗನ್ ನಟನೆಯ ‘ದಿಲ್ ಕ್ಯಾ ಕರೇ’ ಚಿತ್ರದಲ್ಲಿ ಮೊದಲು ನಟಿಸಿದರು. 2000ರಲ್ಲಿ ರಿಲೀಸ್ ಆದ ‘ಜಂಗಲ್’ ಸಿನಿಮಾ ಅವರ ಬದುಕು ಬದಲಿಸಿತು. ಅವರಿಗೆ 31 ವರ್ಷ ಆದಾಗ ರಾಧಾನ ಭೇಟಿ ಆದರು. ಅವರ ಜೀವನದಲ್ಲಿ ರಾಧಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇಬ್ಬರೂ 2003ರಲ್ಲಿ ಮದುವೆ ಆದರು.

ಕಲಾವಿದರ ಬದುಕಿನಲ್ಲಿ ಏರಿಳತಗಳು ಸಾಮಾನ್ಯ. ಅದೇ ರೀತಿ ರಾಜ್​ಪಾಲ್ ಅವರ ಜೀವನದಲ್ಲೂ ಸಾಕಷ್ಟು ಏರಿಳಿತಗಳು ಇದ್ದವು. ಈ ಸಂದರ್ಭದಲ್ಲಿ ರಾಧಾ ಅವರ ಪಕ್ಕದಲ್ಲಿ ನಿಂತರು. ರಾಧಾ ಹಾಗೂ ರಾಜ್​ಪಾಲ್ ಅವರ ಸಂಸ್ಕೃತಿ ಬೇರೆ ಬೇರೆ. ಆದಾಗ್ಯೂ ಅವರು ರಾಜ್​ಪಾಲ್ ಅವರ ಕುಟುಂಬದ ಸಂಪ್ರದಾಯವನ್ನು ಕಲಿತರು. ರಾಜ್​ಪಾಲ್ ಮೊದಲ ಮದುವೆಯಿಂದ ಹುಟ್ಟಿದ ಮಗಳನ್ನು ರಾಧಾ ಗೌರವಿಸಿದರು. ತಮ್ಮ ಮಗಳಂತೆ ಅವರು ನೋಡಿಕೊಂಡರು. ಈ ಕಾರಣಕ್ಕೆ ರಾಜ್​ಪಾಲ್​ಗೆ ಅವರು ಹೆಚ್ಚು ಇಷ್ಟ ಆದರು.

ಇದನ್ನೂ ಓದಿ:26,000 ರೂ. ನೀಡಿ ಹೇರ್​ಕಟ್​ ಮಾಡಿಸಿಕೊಂಡಿದ್ದ ರಾಜ್​ಪಾಲ್​ ಯಾದವ್​; ಹಾಸ್ಯ ನಟನ ಪ್ರಯತ್ನವೆಲ್ಲ ನೀರಲ್ಲಿ ಹೋಮ

ರಾಜ್​ಪಾಲ್ ಅವರು ಅನೇಕರಿಗೆ ಸ್ಫೂರ್ತಿ. ಅವರು ಸದಾ ಪ್ರೀತಿ ಹರಡಲು ಬಯಸುತ್ತಾರೆ. ಜೀವನದಲ್ಲಿ ಎಷ್ಟೇ ನೋವುಗಳು ಇದ್ದರು ಪ್ರೀತಿ ಹಂಚಲು ಬಯಸುತ್ತಾರೆ. ಅವರ ನಟನೆಯ ‘ಫಿರ್ ಹೇರಾ ಫೇರಿ’ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಕಳೆದ ವರ್ಷ ಅವರ ನಟನೆಯ ‘ಸತ್ಯ ಪ್ರೇಮ್​ ಕಿ ಕಹಾನಿ’, ‘ಡ್ರೀಮ್ ಗರ್ಲ್ 2’ ಮೊದಲಾದ ಸಿನಿಮಾಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ