AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajpal Yadav: 26,000 ರೂ. ನೀಡಿ ಹೇರ್​ಕಟ್​ ಮಾಡಿಸಿಕೊಂಡಿದ್ದ ರಾಜ್​ಪಾಲ್​ ಯಾದವ್​; ಹಾಸ್ಯ ನಟನ ಪ್ರಯತ್ನವೆಲ್ಲ ನೀರಲ್ಲಿ ಹೋಮ

ದುಬಾರಿ ಮೊತ್ತಕ್ಕೆ ಹೇರ್​ಕಟ್​ ಮಾಡಿಸಿಕೊಂಡ ರಾಜ್​ಪಾಲ್​ ಯಾದವ್​ ಅವರು ನಿರ್ದೇಶಕ ಪ್ರಿಯದರ್ಶನ್​ರನ್ನು ಭೇಟಿ ಮಾಡಲು ತೆರಳಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ.

Rajpal Yadav: 26,000 ರೂ. ನೀಡಿ ಹೇರ್​ಕಟ್​ ಮಾಡಿಸಿಕೊಂಡಿದ್ದ ರಾಜ್​ಪಾಲ್​ ಯಾದವ್​; ಹಾಸ್ಯ ನಟನ ಪ್ರಯತ್ನವೆಲ್ಲ ನೀರಲ್ಲಿ ಹೋಮ
ರಾಜ್​ಪಾಲ್​ ಯಾದವ್​
Follow us
ಮದನ್​ ಕುಮಾರ್​
|

Updated on: Jun 27, 2023 | 5:03 PM

ಬಾಲಿವುಡ್​ನಲ್ಲಿ ನಟ ರಾಜ್​ಪಾಲ್​ (Rajpal Yadav) ಯಾದವ್​ ಅವರು ಬಹುಬೇಡಿಕೆಯ ಕಾಮಿಡಿಯನ್​ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಹಾಸ್ಯಕ್ಕೆ ನಗದೇ ಇರುವ ಪ್ರೇಕ್ಷಕರೇ ಇಲ್ಲ. ಹಲವಾರು ಸಿನಿಮಾಗಳಲ್ಲಿ ಕಾಮಿಡಿ ಪಾತ್ರ ಮಾಡುವ ಮೂಲಕ ರಾಜ್​ಪಾಲ್​ ಯಾದವ್​ ಅವರು ಮನರಂಜನೆ ನೀಡಿದ್ದಾರೆ. ಅನೇಕ ಸ್ಟಾರ್​ ಕಲಾವಿದರ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. 2006ರಲ್ಲಿ ತೆರೆಕಂಡ ‘ಚುಪ್​ ಚುಪ್​ ಕೆ’ (Chup Chup Ke) ಸಿನಿಮಾವನ್ನು ಪ್ರೇಕ್ಷಕರು ಈಗಲೂ ನೋಡಿ ಎಂಜಾಯ್​ ಮಾಡುತ್ತಾರೆ. ಅಷ್ಟರಮಟ್ಟಿಗೆ ಹಾಸ್ಯಮಯವಾಗಿ ಮೂಡಿಬಂದಿತ್ತು ರಾಜ್​ಪಾಲ್​ ಯಾದವ್​ ಅವರ ಪಾತ್ರ. ಅಚ್ಚರಿ ಎಂದರೆ ಈ ಚಿತ್ರದ ಶೂಟಿಂಗ್​ ಶುರುವಾಗುವುದಕ್ಕೂ ಮುನ್ನ ಅವರು ಬರೋಬ್ಬರಿ 26 ಸಾವಿರ ರೂಪಾಯಿ ನೀಡಿ ಹೇರ್​ಕಟ್​ (Haircut) ಮಾಡಿಸಿಕೊಂಡಿದ್ದರು!

ಆಲಿಮ್​ ಹಕೀಂ ಅವರು ಮುಂಬೈನಲ್ಲಿ ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್​ ಆಗಿ ಫೇಮಸ್​. ಯಶ್​ ಕೂಡ ಅವರ ಬಳಿ ಹೇರ್​ ಕಟ್​ ಮಾಡಿಸಿಕೊಂಡು ಸುದ್ದಿ ಆಗಿದ್ದರು. ಹಲವು ವರ್ಷಗಳ ಹಿಂದೆ ರಾಜ್​ಪಾಲ್​ ಯಾದವ್​ ಅವರು ಆಲಿಮ್​ ಹಕೀಂ ಅವರ ಸಲೂನ್​ಗೆ ಭೇಟಿ ನೀಡಿದ್ದರು. 26 ಸಾವಿರ ರೂಪಾಯಿ ನೀಡಿ ಅವರು ಸ್ಟೈಲಿಶ್​ ಆಗಿ ಹೇರ್​ಕಟ್​ ಮಾಡಿಸಿದ್ದರು. ಆ ಸಂದರ್ಭದಲ್ಲಿ ‘ಚುಪ್ ಚುಪ್​ ಕೆ’ ಸಿನಿಮಾದಲ್ಲಿ ನಟಿಸುವ ಆಫರ್​ ಬಂತು. ಕೂಡಲೇ ನಿರ್ದೇಶಕ ಪ್ರಿಯದರ್ಶನ್​ ಅವರನ್ನು ಭೇಟಿ ಮಾಡಲು ರಾಜ್​ಪಾಲ್​ ಯಾದವ್​ ತೆರಳಿದರು. ಆದರೆ ಅಲ್ಲಿ ಆಗಿದ್ದೇ ಬೇರೆ.

ಇದನ್ನೂ ಓದಿ: ಕಾಮಿಡಿ ಕಿಲಾಡಿಗಳ ‘ಆನ್​ಲೈನ್ ಮದುವೆ, ಆಫ್​ಲೈನ್ ಶೋಭನ’

‘ಶೂಟಿಂಗ್​ಗಾಗಿ ನಾನು ಗೋವಾಗೆ ತೆರಳಿದೆ. ನನ್ನ ಹೇರ್​ಕಟ್​ ಬಗ್ಗೆ ನನಗೆ ಬಹಳ ಆತ್ಮವಿಶ್ವಾಸ ಇತ್ತು. ಆದರೆ ನಿರ್ದೇಶಕ ಪ್ರಿಯದರ್ಶನ್​ ಅವರಿಗೆ ಅದು ಕಿಂಚಿತ್ತೂ ಇಷ್ಟ ಆಗಲಿಲ್ಲ. ಸಹಾಯಕರನ್ನು ಕರೆದು ನನ್ನ ಕೂದಲು ಕಟ್​ ಮಾಡಿಸಿದರು’ ಎಂದಿದ್ದಾರೆ ರಾಜ್​ಪಾಲ್​ ಯಾದವ್​. ಅಲ್ಲಿಗೆ ಆಲಿಮ್​ ಹಕೀಂ ಮಾಡಿದ್ದ ಹೇರ್​ ಕಟ್ ಪೂರ್ತಿ​ ನೀರಲ್ಲಿ ಹೋಮ ಮಾಡಿದಂತೆ ಆಯಿತು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ

‘ಚುಪ್​ ಚುಪ್​ ಕೆ’ ಸಿನಿಮಾದಲ್ಲಿ ರಾಜ್​ಪಾಲ್​ ಯಾದವ್​ ಅವರನ್ನು ನೋಡಿದ ಬಳಿಕ ಆಲಿಮ್​ ಹಕೀಂ ಅವರಿಗೆ ಶಾಕ್​ ಆಯಿತು. ಹಾಗಾಗಿ ಅವರು 26 ಸಾವಿರ ರೂಪಾಯಿ ತೆಗೆದುಕೊಳ್ಳಲು ನಿರಾಕರಿಸಿದರು. ರಾಜ್​​ಪಾಲ್​ ಯಾದವ್​ ಅವರು ಅನೇಕ ಬಾರಿ ಒತ್ತಾಯಿಸಿದರೂ ಕೂಡ ಆಲಿಮ್​ ಹಕೀಂ ಅವರು ಹಣ ಪಡೆದುಕೊಳ್ಳಲಿಲ್ಲ. ಆ ಫನ್ನಿ ಘಟನೆಯನ್ನು ರಾಜ್​ಪಾಲ್​ ಯಾವದ್​ ಅವರು ನೆನಪಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ