ಬಂಧನ ಭೀತಿ, ಭಿಕ್ಷುಕಿಯಂತೆ ಬದುಕುತ್ತಿದ್ದೀನಿ ಎಂದ ರಾಖಿ ಸಾವಂತ್

Rakhi Sawant: ಕಾಂಟ್ರೊವರ್ಸಿ ಕ್ವೀನ್ ಎಂದೇ ಕರೆಸಿಕೊಳ್ಳುವ ರಾಖಿ ಸಾವಂತ್ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಭಾರತದಲ್ಲಿ ರಾಖಿ ಸಾವಂತ್​ಗೆ ಬಂಧನದ ಭೀತಿ ಇರುವ ಕಾರಣ ಅವರು ವಿದೇಶಕ್ಕೆ ಪಲಾಯನ ಮಾಡಿದ್ದು, ಅಲ್ಲಿ ಭಿಕ್ಷುಕಿಯಂತೆ ಬದುಕುತ್ತಿದ್ದಾರೆ.

ಬಂಧನ ಭೀತಿ, ಭಿಕ್ಷುಕಿಯಂತೆ ಬದುಕುತ್ತಿದ್ದೀನಿ ಎಂದ ರಾಖಿ ಸಾವಂತ್

Updated on: Nov 10, 2024 | 9:53 AM

ಕಾಂಟ್ರೊವರ್ಸಿ ಕ್ವೀನ್ ಎಂದೇ ಜನಪ್ರಿಯ ಆಗಿರುವ ರಾಖಿ ಸಾವಂತ್ ಈಗ ದುಬೈನಲ್ಲಿದ್ದಾರೆ. ಭಾರತದಲ್ಲಿ ಕಾರು, ಆಳು-ಕಾಳು, ಸುತ್ತಲೂ ಮಾಧ್ಯಮಗಳ ಕ್ಯಾಮೆರಾದಿಂದ ಸುತ್ತುವರೆದುಕೊಂಡಿದ್ದ ರಾಖಿ ಸಾವಂತ್ ದುಬೈನಲ್ಲಿ ತೀರ ಹೀನಾಯ ಬದುಕು ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರೇ ಮಾಧ್ಯಮಗಳಿಗೆ ಹೇಳಿರುವಂತೆ, ದುಬೈನಲ್ಲಿ ಅವರು ಭಿಕ್ಷುಕಿಯಂತೆ ಬದುಕಿದ್ದಾರಂತೆ. ಇಷ್ಟಕ್ಕೆಲ್ಲ ಕಾರಣ ಅವರ ಮಾಜಿ ಪತಿ, ಮೈಸೂರಿನ ಆದಿಲ್ ನೀಡಿರುವ ದೂರು.

ರಾಖಿ ಸಾವಂತ್ ಮಾಜಿ ಪತಿ ಮೈಸೂರಿನ ಆದಿಲ್, ರಾಖಿ ವಿರುದ್ಧ ವಂಚನೆ, ಕಳ್ಳತನ, ಮಾನಹಾನಿ ಇನ್ನಿತರೆ ದೂರುಗಳನ್ನು ದಾಖಲಿಸಿದ್ದು, ಭಾರತಕ್ಕೆ ಬಂದರೆ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇರುವ ಕಾರಣದಿಂದಾಗಿ ರಾಖಿ ಸಾವಂತ್ ದುಬೈಗೆ ಪಲಯಾನ ಮಾಡಿದ್ದಾರೆ. ಅಲ್ಲಿ ಕಳೆದ ಕೆಲ ವಾರಗಳಿಂದಲೂ ವಾಸವಿದ್ದು, ಅವರೇ ಹೇಳಿರುವಂತೆ ಹಣ ಇಲ್ಲದ ಕಾರಣ ಭಿಕ್ಷುಕಿಯಂತೆ ಜೀವನ ನಡೆಸುತ್ತಿದ್ದಾರಂತೆ. ‘ಎಷ್ಟು ದಿನ ನಾನು ಸಹಾಯಕ್ಕೆ ಕೇಳುತ್ತಾ ಇರಲಿ, ಎಷ್ಟು ಜನರನ್ನು ಕೇಳಲಿ, ನನ್ನ ಜೀವನ ಭಿಕ್ಷುಕಿಯಂತೆ ಆಗಿಬಿಟ್ಟಿದೆ. ನನಗೆ ಭಾರತೀಯ ಕಾನೂನಿನ ಮೇಲೆ ವಿಶ್ವಾಸವಿದೆ, ನಾನು ಭಾರತಕ್ಕೆ ಮರಳಲಿದ್ದೇನೆ’ ಎಂದಿದ್ದಾರೆ ರಾಖಿ ಸಾವಂತ್.

ದಶಕಗಳಿಂದಲೂ ಬಾಲಿವುಡ್​ನಲ್ಲಿರುವ ರಾಖಿ ಸಾವಂತ್, ಸಲ್ಮಾನ್ ಖಾನ್, ಫರ್ಹಾನ್ ಖಾನ್, ಶಾರುಖ್ ಖಾನ್ ಅವರ ಸಹಾಯವನ್ನೇಕೆ ಕೇಳಬಾರದು ಎಂಬ ಮಾಧ್ಯಮದವರ ಪ್ರಶ್ನೆಗೆ, ‘ನಾನು ಯಾರನ್ನೂ ಸಹ ಸಹಾಯಕ್ಕಾಗಿ ಕೇಳುವುದಿಲ್ಲ. ಇದು ನನ್ನ ಯುದ್ಧ ನಾನೇ ಹೋರಾಡುತ್ತೇನೆ. ಶಾರುಖ್, ಸಲ್ಮಾನ್ ಅವರನ್ನು ಕೇಳಿದೆ ಎಂದರೆ ಕೇವಲ ಒಂದು ನಿಮಿಷದಲ್ಲಿ ನನಗೆ ಜಾಮೀನು ಕೊಡಿಸಬಲ್ಲರು, ಆದರೆ ನಾನು ಹಾಗೆ ಮಾಡುವುದಿಲ್ಲ, ಈ ಯುದ್ಧವನ್ನು ನಾನೇ ಹೋರಾಡುತ್ತೀನಿ’ ಎಂದಿದ್ದಾರೆ ರಾಖಿ ಸಾವಂತ್.

ಇದನ್ನೂ ಓದಿ:ದೀಪಿಕಾ ಪಡುಕೋಣೆ ಮಗುವಿಗಾಗಿ ದುಬೈನಲ್ಲಿ ಶಾಪಿಂಗ್ ಮಾಡಿ ಟ್ರೋಲ್ ಆದ ರಾಖಿ ಸಾವಂತ್

2022 ರ ಮೇ ತಿಂಗಳಲ್ಲಿ ರಾಖಿ ಸಾವಂತ್ ಹಾಗೂ ಮೈಸೂರಿನ ಉದ್ಯಮಿ ಆದಿಲ್ ಖಾನ್ ವಿವಾಹ ಆಗಿದ್ದರು. ಆದಿಲ್, ಐಶಾರಾಮಿ ಕಾರುಗಳನ್ನು ರಾಖಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಆದರೆ ಮದುವೆಯಾದ ಕೆಲವೇ ದಿನಕ್ಕೆ ಆದಿಲ್ ವಿರುದ್ಧ ರಾಖಿ ಸಾವಂತ್ ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಇದರಿಂದಾಗಿ ಆದಿಲ್ ಕೆಲ ಸಮಯ ಜೈಲಿನಲ್ಲಿ ಸಮಯ ಕಳೆಯಬೇಕಾಯ್ತು. ಜೈಲಿನಿಂದ ಹೊರಬಂದ ಬಳಿಕ ಆದಿಲ್, ರಾಖಿ ವಿರುದ್ಧ ವಂಚನೆ, ಕಳ್ಳತನ ಇನ್ನಿತರೆ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ರಾಖಿ ಸಾವಂತ್ ದುಬೈಗೆ ಪಲಾಯನಗೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ