‘ಸಿಂಘಂ ರಿಟರ್ನ್ಸ್’ ಬಾಕ್ಸ್ ಆಫೀಸ್ ದಾಖಲೆಯನ್ನು ಐದೇ ದಿನಕ್ಕೆ ಮುರಿದ ‘ಸಿಂಘಂ ಅಗೇನ್’

ಅಜಯ್ ದೇವಗನ್ ನಟನೆಯ ‘ಸಿಂಘಂ ಅಗೇನ್’ ಸಿನಿಮಾ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಐದು ದಿನಕ್ಕೆ ಸುಮಾರು 250 ಕೋಟಿ ಗಳಿಕೆ ಮಾಡಿದೆ. ಈ ಹಿಂದಿನ ಎರಡು ‘ಸಿಂಘಂ’ ಸಿನಿಮಾಗಳ ಗಳಿಕೆ ದಾಖಲೆಯನ್ನು ಐದೇ ದಿನದಲ್ಲಿ ಮುರಿದು ಹಾಕಿದೆ ಈ ಸಿನಿಮಾ.

‘ಸಿಂಘಂ ರಿಟರ್ನ್ಸ್’ ಬಾಕ್ಸ್ ಆಫೀಸ್ ದಾಖಲೆಯನ್ನು ಐದೇ ದಿನಕ್ಕೆ ಮುರಿದ ‘ಸಿಂಘಂ ಅಗೇನ್’
Follow us
ಮಂಜುನಾಥ ಸಿ.
|

Updated on: Nov 09, 2024 | 3:49 PM

ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿರುವ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಸಿಂಘಂ ಅಗೇನ್’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಸಿನಿಮಾ ಬಾಕ್ಸ್​ ಆಫೀಸ್​ ನಲ್ಲಿ ಯಶಸ್ವಿಯಾಗಿದೆ. ಸಿನಿಮಾ ಬಿಡುಗಡೆ ಆದ ಕೇವಲ ಐದು ದಿನಗಳಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಸಿದೆ. ವಿಶೇಷವೆಂದರೆ ‘ಸಿಂಘಂ’ ಸಿನಿಮಾ ಸರಣಿಯ ಈ ಹಿಂದಿನ ಸಿನಿಮಾಗಳ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯನ್ನು ಕೇವಲ ಐದು ದಿನದಲ್ಲಿ ಮುರಿದಿದೆ ಈ ಸಿನಿಮಾ.

ಅಜಯ್ ದೇವಗನ್ ನಟನೆಯ ‘ಸಿಂಘಂ’ ಮೊದಲ ಬಾರಿ 2011 ರಲ್ಲಿ ಬಿಡುಗಡೆ ಆಗಿತ್ತು. ಇದು ತಮಿಳಿನಲ್ಲಿ ಸೂರ್ಯ ನಟಿಸಿದ್ದ ‘ಸಿಂಘಂ’ ಸಿನಿಮಾದ ರೀಮೇಕ್ ಆಗಿತ್ತು. 2011 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಹಿಂದಿಯಲ್ಲಿ ಸೂಪರ್ ಹಿಟ್ ಆಯ್ತು. 2011 ಕೇವಲ 20 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಅಂದಿನ ಕಾಲಕ್ಕೆ ಒಟ್ಟು ಕಲೆಕ್ಷನ್ ಮಾಡಿದ್ದು 160 ಕೋಟಿ ರೂಪಾಯಿಗಳು. ಈ ದಾಖಲೆಯನ್ನು ಈಗ ಬಿಡುಗಡೆ ಆಗಿರುವ ‘ಸಿಂಘಂ ಅಗೇನ್’ ಸಿನಿಮಾ ಕೇವಲ ಮೂರು ದಿನಗಳಲ್ಲಿ ಮುರಿದು ಹಾಕಿದೆ.

‘ಸಿಂಘಂ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಅದೇ ರೋಹಿತ್ ಶೆಟ್ಟಿ, ಅಜಯ್ ದೇವಗನ್ ಅವರನ್ನು ನಾಯಕರನ್ನಾಗಿಸಿಕೊಂಡು 2014 ರಲ್ಲಿ ‘ಸಿಂಘಂ ರಿಟರ್ನ್ಸ್’ ಸಿನಿಮಾ ತೆಗೆದರು. ಅದೂ ಸಹ ಹಿಟ್ ಎನಿಸಿಕೊಂಡಿತು. ಸಿನಿಮಾಕ್ಕೆ 100 ಕೋಟಿ ಬಜೆಟ್ ಹಾಕಲಾಗಿತ್ತು. ಚೆನ್ನಾಗಿ ಓಡಿದ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 216 ಕೋಟಿ ರೂಪಾಯಿ ಹಣ ಗಳಿಸಿತು. ಇಷ್ಟು ಮೊತ್ತದ ಹಣ ಗಳಿಸಲು ಈ ಸಿನಿಮಾಕ್ಕೆ ತಿಂಗಳುಗಳು ಬೇಕಾದವು.

ಇದನ್ನೂ ಓದಿ:ಜೀವ ಬೆದರಿಕೆ ನಡುವೆಯೂ ‘ಸಿಂಘಂ ಅಗೇನ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ ಸಲ್ಮಾನ್ ಖಾನ್

ಆದರೆ ಈಗ ಬಿಡುಗಡೆ ಆಗಿರುವ ‘ಸಿಂಘಂ ಅಗೇನ್’ ಸಿನಿಮಾ ಬಿಡುಗಡೆ ಆದ ಕೇವಲ ಐದು ದಿನಗಳಲ್ಲಿ ಸುಮಾರು 250 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಆ ಮೂಲಕ ‘ಸಿಂಘಂ’ ಸಿನಿಮಾ ಸರಣಿಯ ಅತ್ಯಂತ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ಮಾತ್ರವಲ್ಲದೆ ಅತ್ಯಂತ ವೇಗವಾಗಿ ಹಣ ಗಳಿಸಿದ ಸಿನಿಮಾ ಎನಿಸಿಕೊಂಡಿದೆ. ನಾಳೆ (ಭಾನುವಾರ) ವೇಳೆಗೆ ಈ ಸಿನಿಮಾ 300 ಕೋಟಿ ಕಲೆಕ್ಷನ್ ದಾಟಲಿದೆ.

‘ಸಿಂಘಂ ಅಗೇನ್’ ಸಿನಿಮಾದಲ್ಲಿ ಭಾರತದ ಹಲವು ಸ್ಟಾರ್ ನಟ-ನಟಿಯರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್ ನಾಯಕ, ಕರೀನಾ ಕಪೂರ್ ನಾಯಕಿ ಆಗಿರುವ ಈ ಸಿನಿಮಾದಲ್ಲಿ, ಟೈಗರ್ ಶ್ರಾಫ್, ರಣ್ವೀರ್ ಸಿಂಗ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ಸಹ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ