ಪಾಕಿಸ್ತಾನಿ ನಟನ ಜೊತೆ ರಾಖಿ ಸಾವಂತ್ 3ನೇ ಮದುವೆಗೆ ತಯಾರಿ

ನಟಿ ರಾಖಿ ಸಾವಂತ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ಜೀವನದ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ. ರಾಖಿ ಸಾವಂತ್ ಅವರಿಗೆ ಪಾಕಿಸ್ತಾನದಿಂದ ಮದುವೆ ಪ್ರಪೋಸಲ್ ಬಂದಿದೆ. ಹಾಗಾಗಿ ಅವರು ಸಖತ್ ಖುಷಿಯಲ್ಲಿದ್ದಾರೆ. ‘ನಾನು ಪಾಕಿಸ್ತಾನದ ಸೊಸೆ ಆಗುತ್ತೇನೆ’ ಎಂದು ಅವರು ಸಿಕ್ಕಾಪಟ್ಟೆ ಸಂತಸದಲ್ಲಿದ್ದಾರೆ.

ಪಾಕಿಸ್ತಾನಿ ನಟನ ಜೊತೆ ರಾಖಿ ಸಾವಂತ್ 3ನೇ ಮದುವೆಗೆ ತಯಾರಿ
Rakhi Sawant, Dodi Khan

Updated on: Jan 29, 2025 | 3:38 PM

ಯಾವಾಗಲೂ ಕಿರಿಕ್​​ಗಳ ಮೂಲಕವೇ ರಾಖಿ ಸಾವಂತ್ ಅವರು ಸುದ್ದಿ ಆಗುತ್ತಾರೆ. ಈಗಾಗಲೇ ಅವರಿಗೆ ಎರಡು ಮದುವೆ ಆಗಿ ಮುರಿದು ಬಿದ್ದಿವೆ. 2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ಮದುವೆ ಆಗಿದ್ದರು. 2022ರಲ್ಲಿ ವಿಚ್ಛೇದನ ಪಡೆದುಕೊಂಡರು. ಬಳಿಕ ಮೈಸೂರು ಮೂಲದ ಆದಿಲ್ ಖಾನ್​ ಜೊತೆ ಮದುವೆ ನೆರವೇರಿತು. ಆ ಶಾದಿ ಕೂಡ ಕಿರಿಕ್​ನಲ್ಲಿ ಅಂತ್ಯವಾಯಿತು. ಈಗ ರಾಖಿ ಸಾವಂತ್ ಅವರು ಮೂರನೇ ಬಾರಿಗೆ ಮದುವೆಯಾಗಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಪಾಕಿಸ್ತಾನದ ಹುಡುಗನ ಕೈ ಹಿಡಿಯಲಿದ್ದಾರೆ.

ಪಾಕಿಸ್ತಾನದಲ್ಲಿ ಗುರುತಿಸಿಕೊಂಡಿರುವ ನಟ, ಮಾಡೆಲ್ ಡೊಡಿ ಖಾನ್ ಜೊತೆ ರಾಖಿ ಸಾವಂತ್ ಮದುವೆ ಆಗುವುದಾಗಿ ತಿಳಿಸಿದ್ದಾರೆ. ಡೊಡಿ ಖಾನ್ ಅವರು ಅಲ್ಲಿ ಪೊಲೀಸ್ ಅಧಿಕಾರಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಸ್ವತಃ ಡೊಡಿ ಖಾನ್ ಅವರು ರಾಖಿ ಸಾವಂತ್​ಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋವನ್ನು ರಾಖಿ ಸಾವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ದಿಬ್ಬಣ ತೆಗೆದುಕೊಂಡು ಭಾರತಕ್ಕೆ ಬರಲೇ ಅಥವಾ ದುಬೈಗೆ ಬರಲೇ’ ಎಂದು ಡೊಡಿ ಖಾನ್ ಕೇಳಿದ್ದಾರೆ.

‘ಅವರೇ ನನ್ನ ಪ್ರೀತಿ. ನಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಅವರು ಪಾಕಿಸ್ತಾನದವರು. ನಾನು ಭಾರತದವಳು. ನಮ್ಮದು ಲವ್ ಮ್ಯಾರೇಜ್ ಆಗಲಿದೆ’ ಎಂದು ರಾಖಿ ಸಾವಂತ್ ಅವರು ಹೇಳಿದ್ದಾರೆ. ಈ ನಡುವೆ ಮಾಜಿ ಪತಿ ಆದಿಲ್ ಖಾನ್​ ಬಗ್ಗೆ ರಾಖಿ ಸಾವಂತ್ ಕಿಡಿಕಾರಿದ್ದಾರೆ. ‘ನಾನು ಈಗ ಮದುವೆ ಆಗುತ್ತಿರುವುದಕ್ಕೆ ಆದಿಲ್ ಖಾನ್​ಗೆ ಹೊಟ್ಟೆ ಕಿಚ್ಚು. ಅವನಿಗೆ ಕೆಟ್ಟ ಪ್ರಚಾರ ಬೇಕು. ಆ ಮೂರ್ಖನಿಗೆ ನಾನು ಪ್ರಚಾರ ನೀಡುವುದಿಲ್ಲ’ ಎಂದು ರಾಖಿ ಸಾಂವತ್ ಹೇಳಿದ್ದಾರೆ.

ಇದನ್ನೂ ಓದಿ: ಬಂಧನ ಭೀತಿ, ಭಿಕ್ಷುಕಿಯಂತೆ ಬದುಕುತ್ತಿದ್ದೀನಿ ಎಂದ ರಾಖಿ ಸಾವಂತ್

‘ಮಕ್ಕಳಿಗೆ ಭಾರತದಲ್ಲಿ ಜನ್ಮ ನೀಡಬೇಕೋ ಅಥವಾ ಪಾಕಿಸ್ತಾನದಲ್ಲಿ ಜನ್ಮ ನೀಡಬೇಕೋ ಎಂಬ ಬಗ್ಗೆ ನಾನು ಇನ್ನೂ ನಿರ್ಧಾರ ಮಾಡಿಲ್ಲ. ಮೆಕ್ಕಾ, ಮದೀನಾಗೆ ಹೋಗುವ ಹುಡುಗ ನನಗೆ ಬೇಕಿತ್ತು. ಪಾಕಿಸ್ತಾನದ ಹುಡುಗರು ಇಸ್ಲಾಂ ವಿಚಾರದಲ್ಲಿ ಬಹಳ ಗಟ್ಟಿಯಾಗಿರುತ್ತಾರೆ. 5 ಬಾರಿ ನಮಾಜ್ ಮಾಡುತ್ತಾರೆ. ನನ್ನನ್ನು ಮದುವೆ ಆಗುವವರು ಪಾಕಿಸ್ತಾನದಲ್ಲಿ ದೊಡ್ಡ ಪೊಲೀಸ್ ಅಧಿಕಾರಿ ಹಾಗೂ ನಟ ಕೂಡ ಹೌದು’ ಎಂದು ರಾಖಿ ಸಾವಂತ್ ಅವರು ಹೇಳಿದ್ದಾರೆ. ಅವರ ಈ ಮೂರನೇ ಮದುವೆಯ ಸುದ್ದಿ ತಿಳಿದು ನೆಟ್ಟಿಗರ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:38 pm, Wed, 29 January 25