ನಟಿ ರಾಖಿ ಸಾವಂತ್ (Rakhi Sawant) ಅವರು ವೈಯಕ್ತಿಕ ಜೀವನದಲ್ಲಿ ಮಾಡಿಕೊಂಡ ಎಡವಟ್ಟುಗಳು ಒಂದೆರಡಲ್ಲ. ಈ ಹಿಂದೆ ಅವರು ರಿತೇಶ್ ಎಂಬುವವರ ಜೊತೆ ಮದುವೆ ಆಗಿದ್ದರು. ಆದರೆ ಮೊದಲನೇ ಪತ್ನಿಗೆ ರಿತೇಶ್ ವಿಚ್ಛೇದನ ನೀಡಿಲ್ಲದ ಕಾರಣ ರಾಖಿ ಜೊತೆಗಿನ ಅವರ ವಿವಾಹ (Rakhi Sawant Wedding) ಮಾನ್ಯವಾಗಲಿಲ್ಲ. ಕಳೆದ ವರ್ಷ ಆದಿಲ್ ಖಾನ್ ಜೊತೆ ರಾಖಿ ಸಾವಂತ್ ಅವರು ಸೀಕ್ರೆಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆ ವಿಚಾರ ಇತ್ತೀಚೆಗೆ ಬಯಲಾಗಿತ್ತು. ಆದರೆ ಮದುವೆ ಆಗಿದ್ದನ್ನು ಒಪ್ಪಿಕೊಳ್ಳಲು ಆದಿಲ್ ಖಾನ್ (Adil Khan) ಹಿಂದೇಟು ಹಾಕಿದ್ದರು. ಅದು ರಾಖಿಗೆ ಸಾಕಷ್ಟು ನೋವುಂಟು ಮಾಡಿತ್ತು. ಲೇಟಸ್ಟ್ ನ್ಯೂಸ್ ಏನೆಂದರೆ ಆದಿಲ್ ಖಾನ್ ಅವರು ರಾಖಿ ಜೊತೆಗೆ ಮದುವೆ ಆಗಿರುವುದಾಗಿ ಈಗ ಒಪ್ಪಿಕೊಂಡಿದ್ದಾರೆ. ಆ ಕುರಿತು ಅವರು ಮಾಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.
‘ಕೊನೆಗೂ ಇಲ್ಲೊಂದು ಅನೌನ್ಸ್ಮೆಂಟ್ ಇದೆ. ರಾಖಿಯನ್ನು ಮದುವೆ ಆಗಿಲ್ಲ ಅಂತ ನಾನು ಎಂದಿಗೂ ಹೇಳಿಲ್ಲ. ಕೆಲವು ವಿಷಯಗಳನ್ನು ನಿಭಾಯಿಸಬೇಕಿತ್ತು. ಹಾಗಾಗಿ ಮೌನವಾಗಿದ್ದೆ. ಮದುವೆಯ ಶುಭಾಶಯಗಳು ರಾಖಿ’ ಎಂದು ಆದಿಲ್ ಖಾನ್ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕಮೆಂಟ್ ಮಾಡಿರುವ ರಾಖಿ ಸಾವಂತ್ ಅವರು, ‘ಧನ್ಯವಾದಗಳು ಜಾನ್.. ಲಾಟ್ಸ್ ಆಫ್ ಲವ್’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್
ರಾಖಿ ಸಾವಂತ್ ಅವರ ಮದುವೆಯ ಫೋಟೋಗಳು ವೈರಲ್ ಆಗಿದ್ದರೂ ಕೂಡ ಆದಿಲ್ ಮೌನವಾಗಿದ್ದರು. ಇದು ರಾಖಿಯ ಆತಂಕಕ್ಕೆ ಕಾರಣ ಆಗಿತ್ತು. ಈ ಮದುವೆಯೂ ದಾರಿ ತಪ್ಪಿ ಹೋಗುತ್ತದೆ ಎಂಬ ಭಯದಲ್ಲಿ ಅವರು ಕಣ್ಣೀರು ಹಾಕಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಈಗ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: Rakhi Sawant: ರಾಖಿ ಸಾವಂತ್ ಜೀವನ ಹಾಳು ಮಾಡಲು ಮಾಜಿ ಗಂಡನ ಪ್ಲ್ಯಾನ್; ಪೊಲೀಸ್ ಠಾಣೆ ಎದುರು ಬಿಕ್ಕಿ ಬಿಕ್ಕಿ ಅತ್ತ ನಟಿ
ಪ್ರಿಯಕರ ಆದಿಲ್ ಖಾನ್ ಅವರ ಜೊತೆ 2022ರಲ್ಲಿ ತಮ್ಮ ಮದುವೆ ನೆರವೇರಿತ್ತು ಎಂಬ ವಿಷಯವನ್ನು ರಾಖಿ ಸಾವಂತ್ ಇತ್ತೀಚೆಗೆ ಬಾಯಿಬಿಟ್ಟರು. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡರು. ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಅವರ ಮದುವೆ ನೋಂದಣಿ ಪತ್ರ ವೈರಲ್ ಆಗಿದೆ. ಅದರಲ್ಲಿ ‘ರಾಖಿ ಸಾವಂತ್ ಫಾತಿಮಾ’ ಎಂದು ರಾಖಿ ಸಹಿ ಮಾಡಿರುವುದು ಎಲ್ಲರ ಕಣ್ಣು ಕುಕ್ಕುತ್ತಿದೆ. ಮದುವೆ ನೋಂದಣಿ ಪತ್ರದಲ್ಲಿ ಹೆಸರು ಬದಲಾಗಿರುವುದರಿಂದ ರಾಖಿ ಸಾವಂತ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.