ನೆಪೊಟಿಸಂನಿಂದ ಅವಕಾಶಗಳನ್ನು ಕಳೆದುಕೊಂಡೆ: ಚಿತ್ರರಂಗದ ರಾಜಕೀಯ ಬಿಚ್ಚಿಟ್ಟ ರಕುಲ್ ಪ್ರೀತ್ ಸಿಂಗ್

|

Updated on: Sep 12, 2024 | 11:10 AM

Rakul Preet Singh: ಕನ್ನಡದ ‘ಗಿಲ್ಲಿ’ ಸಿನಿಮಾದಿಂದ ನಟನೆ ಆರಂಭಿಸಿ ಬಳಿಕ ತೆಲುಗಿನ ಟಾಪ್ ನಟಿಯಾಗಿ ಮೆರೆದ, ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ನಟಿಸಿರುವ, ನಟಿಸುತ್ತಿರುವ ರಕುಲ್ ಪ್ರೀತ್ ಸಿಂಗ್ ನೆಪೊಟಿಸಂನಿಂದಾಗಿ ಸಿನಿಮಾ ಅವಕಾಶಗಳನ್ನು ಕಳೆದುಕೊಂಡ ಬಗ್ಗೆ ಮಾತನಾಡಿದ್ದಾರೆ.

ನೆಪೊಟಿಸಂನಿಂದ ಅವಕಾಶಗಳನ್ನು ಕಳೆದುಕೊಂಡೆ: ಚಿತ್ರರಂಗದ ರಾಜಕೀಯ ಬಿಚ್ಚಿಟ್ಟ ರಕುಲ್ ಪ್ರೀತ್ ಸಿಂಗ್
Follow us on

ಸ್ವಜನ ಪಕ್ಷಪಾತ ಅಥವಾ ನೆಪೊಟಿಸಮ್​ ಕಳೆದ ಕೆಲ ವರ್ಷಗಳಿಂದ ಮನೊರಂಜನೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅದರಲ್ಲೂ ಬಾಲವುಡ್ ನಟ ಸುಶಾಂತ್ ಸಿಂಗ್ ನಿಧನದ ಬಳಿಕ ನೆಪೊಟಿಸಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಾವಂತರನ್ನು ಪರಿಗಣಿಸದೆ, ಸಿನಿಮಾ ಕುಟುಂಬಕ್ಕೆ ಸೇರಿದವರಿಗೆ, ಅಥವಾ ತಮಗೆ ತೀರ ಬೇಕಾದವರಿಗೆ ಮಾತ್ರವೇ ಅವಕಾಶ ನೀಡುವುದನ್ನು ನೆಪೊಟಿಸಂ ಎನ್ನಲಾಗುತ್ತದೆ. ಹಲವು ಸಿನಿಮಾ ನಟ-ನಟಿಯರು ನೆಪೊಟಿಸಂ ವಿರುದ್ಧ ಹಿಂದೆಲ್ಲ ಮಾತನಾಡಿದ್ದಿದೆ. ಇದೀಗ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ನೆಪೊಟಿಸಂನಿಂದ ತಾವು ಎದುರಿಸಿದ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ಬಹುಭಾಷಾ ತಾರೆ ರಕುಲ್ ಪ್ರೀತ್ ಸಿಂಗ್, ‘ಹೌದು ನೆಪೊಟಿಸಂನಿಂದ ನಾನೂ ಸಮಸ್ಯೆ ಅನುಭವಿಸಿದ್ದೇನೆ. ಕೆಲವು ಸಿನಿಮಾಗಳು ನನ್ನ ಕೈತಪ್ಪಿವೆ. ಆದರೆ ಅದನ್ನೇ ಕಾರಣ ಮಾಡಿಕೊಂಡು ದ್ವೇಷ ಸಾಧಿಸಿಕೊಂಡು ಕೂರುವ ವ್ಯಕ್ತಿ ನಾನಲ್ಲ. ನಮ್ಮ ತಂದೆ ಸೈನ್ಯದಲ್ಲಿದ್ದವರು, ನಾನು ಒಂದೊಮ್ಮೆ ಸೈನ್ಯಕ್ಕೆ ಸೇರುವ ನಿರ್ಧಾರ ಮಾಡಿದ್ದಿದ್ದರೆ ಅವರು ನನಗೆ ಸಹಾಯ ಮಾಡುತ್ತಿದ್ದರು, ಸಲಹೆ ಕೊಡುತ್ತಿದ್ದರು, ಅದನ್ನು ತಪ್ಪು ಎಂದು ಹೇಳಲಾಗದು’ ಎಂದು ನೆಪೊಟಿಸಮ್ ಪರವಹಿಸಿಯೇ ಮಾತನಾಡಿದ್ದಾರೆ ರಕುಲ್ ಪ್ರೀತ್ ಸಿಂಗ್.

ಇದನ್ನೂ ಓದಿ:ಡ್ರಗ್ಸ್​ ಕೇಸ್​ನಲ್ಲಿ ನಟಿ ರಕುಲ್​ ಸಹೋದರ ಅಮನ್​ ಪ್ರೀತ್​ ಸಿಂಗ್​ ಬಂಧನ

ರಕುಲ್ ಪ್ರೀತ್ ಸಿಂಗ್, ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಕುಲ್ ಪ್ರೀತ್ ಸಿಂಗ್ ಆ ನಂತರ ದೊಡ್ಡ ಎತ್ತರಕ್ಕೆ ಬೆಳೆದರು. 2014 ರಿಂದ ಸುಮಾರು ಐದಾರು ವರ್ಷ ತೆಲುಗಿನ ಬಹು ಬೇಡಿಕೆಯ ನಟಿಯಾಗಿದ್ದರು. ತಮಿಳಿನಲ್ಲಿಯೂ ಸಹ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದರು. ತೆಲುಗಿನ ಬಹುತೇಕ ಎಲ್ಲ ಸ್ಟಾರ್ ನಟರೊಟ್ಟಿಗೂ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಲ್ಲದೆ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿಯಲ್ಲಿಯೂ ಹಲವಾರು ಸಿನಿಮಾಗಳಲ್ಲಿ ರಕುಲ್ ನಟಿಸಿದ್ದಾರೆ. ಪ್ರಸ್ತುತ ಎರಡು ಹಿಂದಿ ಸಿನಿಮಾಗಳಲ್ಲಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಇದೇ ವರ್ಷ ಜನವರಿ ತಿಂಗಳಲ್ಲಿ ಜನಪ್ರಿಯ ನಿರ್ಮಾಪಕ, ನಟ ಜಾಕಿ ಭಗ್ನಾನಿಯೊಟ್ಟಿಗೆ ವಿವಾಹವಾದರು. ಹಲವು ವರ್ಷಗಳಿಂದಲೂ ಈ ಇಬ್ಬರು ಪರಸ್ಪರ ಪ್ರೀತಿಯಲ್ಲಿದ್ದರು. ಮದುವೆಯಾದ ಬಳಿಕವೂ ನಟನೆ ಮುಂದುವರೆಸಿದ್ದಾರೆ ರಕುಲ್ ಪ್ರೀತ್ ಸಿಂಗ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ