ಬಾಲಿವುಡ್ನ ಖ್ಯಾತ ನಟ ವಿದ್ಯುತ್ ಜಾಮ್ವಾಲ್ (Vidyut Jammwal) ಅವರು ಬೆತ್ತಲೆ ಫೋಟೋ ಹಂಚಿಕೊಂಡಿದ್ದಾರೆ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ. ಹಿಂದಿ ಚಿತ್ರರಂಗದಲ್ಲಿ ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಹೆಸರು ಗಳಿಸಿರುವ ಅವರು ಭಾನುವಾರ (ಡಿಸೆಂಬರ್ 10) ಹುಟ್ಟುಹಬ್ಬ ಆಚರಿಸಿಕೊಂಡರು. ಈ ಪ್ರಯುಕ್ತ ಬೆತ್ತಲೆ ಫೋಟೋಗಳನ್ನು (Vidyut Jammwal Photos) ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಕಮೆಂಟ್ ಮಾಡಿದ್ದಾರೆ. ವಿದ್ಯುತ್ ಜಾಮ್ವಾಲ್ ಅವರ ಈ ಕಾರ್ಯಕ್ಕೆ ಆರ್ಜಿವಿ ಸೆಲ್ಯೂಟ್ ಎಂದಿದ್ದಾರೆ.
ವಿದ್ಯುತ್ ಜಾಮ್ವಾಲ್ ಅವರಿಗೆ ಈಗ 43 ವರ್ಷ ವಯಸ್ಸು. 43ನೇ ಜನ್ಮದಿನವನ್ನು ಅವರು ಹಿಮಾಲಯದಲ್ಲಿ ಆಚರಿಸಿದ್ದಾರೆ. ಸಂಪೂರ್ಣ ಬೆತ್ತಲಾಗಿ ಅವರು ಅಲ್ಲಿನ ನದಿಯಲ್ಲಿ ಮುಳುಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡು ಅನಿಸಿಕೆ ತಿಳಿಸಿದ್ದಾರೆ.
Hey @VidyutJammwal I think it’s so timely that you have brought out the ANIMAL in you …you are truly looking like a GREEK GOD ..A million salutes to you 🙏🙏🙏🙏🙏 https://t.co/czoiCxeh8n
— Ram Gopal Varma (@RGVzoomin) December 10, 2023
‘ವಿದ್ಯುತ್ ಜಾಮ್ವಾಲ್ ಅವರೇ.. ನೀವು ಸರಿಯಾದ ಸಮಯದಲ್ಲಿ ನಿಮ್ಮೊಳಗಿನ ಮೃಗವನ್ನು (ಅನಿಮಲ್) ಹೊರಗೆ ತಂದಿದ್ದೀರಿ. ನೀವು ನಿಜವಾಗಿಯೂ ಗ್ರೀಕ್ ಗಾಡ್ ರೀತಿ ಕಾಣುತ್ತಿದ್ದೀರಿ. ನಿಮಗೆ ಮಿಲಿಯನ್ ಸೆಲ್ಯೂಟ್’ ಎಂದು ರಾಮ್ ಗೋಪಾಲ್ ವರ್ಮಾ ಪೋಸ್ಟ್ ಮಾಡಿದ್ದಾರೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಕಾರಣದಿಂದಲೇ ತಮ್ಮ ಪೋಸ್ಟ್ನಲ್ಲಿ ರಾಮ್ ಗೋಪಾಲ್ ಅವರು ‘ಅನಿಮಲ್’ ಎಂಬ ಪದ ಬಳಸಿದ್ದಾರೆ.
ವಿದ್ಯುತ್ ಜಾಮ್ವಾಲ್ ಹಂಚಿಕೊಂಡಿರುವ ಈ ಫೋಟೋಗಳಿಗೆ 13 ಸಾವಿರಕ್ಕೂ ಅಧಿಕ ಕಮೆಂಟ್ಗಳು ಬಂದಿವೆ. 10 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಕೆಲವರು ತಕರಾರು ತೆಗೆದಿದ್ದಾರೆ. ಈ ಹಿಂದೆ ರಣಬೀರ್ ಕಪೂರ್ ಅವರು ಬೆತ್ತಲೆಯಾಗಿ ಫೋಟೋಶೂಟ್ ಮಾಡಿಸಿದ್ದಾಗ ವಿವಾದ ಸೃಷ್ಟಿಯಾಗಿತ್ತು. ರಣಬೀರ್ ಕಪೂರ್ ಅವರನ್ನೇ ವಿದ್ಯುತ್ ಜಾಮ್ವಾಲ್ ಕಾಪಿ ಮಾಡಿದ್ದಾರೆ ಎಂದು ಕೂಡ ಕೆಲವರು ಕಮೆಂಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:03 pm, Mon, 11 December 23