‘ಅನಿಮಲ್’ ಸಿನಿಮಾದ ದೃಶ್ಯ ನೋಡಿ ಶಾಕ್​ಗೆ ಒಳಗಾದ ತೃಪ್ತಿ ತಂದೆ-ತಾಯಿ

‘ಅನಿಮಲ್’ ಚಿತ್ರದಲ್ಲಿ ರಣಬೀರ್ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ತೃಪ್ತಿ ನಟಿಸಿದ್ದಾರೆ. ಈ ದೃಶ್ಯಗಳಿಂದಾಗಿಯೇ ಅವರು ಗಮನ ಸೆಳೆದಿದ್ದಾರೆ. ತೃಪ್ತಿ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.

‘ಅನಿಮಲ್’ ಸಿನಿಮಾದ ದೃಶ್ಯ ನೋಡಿ ಶಾಕ್​ಗೆ ಒಳಗಾದ ತೃಪ್ತಿ ತಂದೆ-ತಾಯಿ
ತೃಪ್ತಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 11, 2023 | 12:15 PM

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರ (Animal Movie) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಈ ಚಿತ್ರದ ದೃಶ್ಯಗಳು ಮತ್ತು ಸಂಭಾಷಣೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸುತ್ತಿದ್ದಾರೆ. ಈ ಚಿತ್ರವನ್ನು ಕೆಲವರು ಕೊಂಡಾಡಿದರೆ, ಇನ್ನೂ ಕೆಲವರು ಸಿನಿಮಾ ಬಗ್ಗೆ ಅಪಸ್ವರ ತೆಗೆದಿದ್ದಾರೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿ ಕೆಲಸ ಮಾಡಿದೆ. ಇದರ ಜೊತೆಗೆ ನಟಿ ತೃಪ್ತಿ ದಿಮ್ರಿ ಪಾತ್ರವೂ ಕ್ರೇಜ್ ಸೃಷ್ಟಿ ಮಾಡುತ್ತಿದೆ.

‘ಅನಿಮಲ್’ ಚಿತ್ರದಲ್ಲಿ ರಣಬೀರ್ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ತೃಪ್ತಿ ನಟಿಸಿದ್ದಾರೆ. ಈ ದೃಶ್ಯಗಳಿಂದಾಗಿಯೇ ಅವರು ಗಮನ ಸೆಳೆದಿದ್ದಾರೆ. ತೃಪ್ತಿ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಅವರು ಸಂದರ್ಶನವೊಂದರಲ್ಲಿ ಸಿನಿಮಾದಲ್ಲಿ ತಾವು ಮಾಡಿದ ಪಾತ್ರಕ್ಕೆ ಪಾಲಕರ ಪ್ರತಿಕ್ರಿಯೆ ಹೇಗಿತ್ತು ಎನ್ನುವ ಬಗ್ಗೆ ಮಾತನಾಡಿದ್ದಾರೆ.

‘ಇಂತಹ ದೃಶ್ಯಗಳನ್ನು ಮಾಡಬೇಡ ಎಂದರು..’

‘ಅನಿಮಲ್’ ಚಿತ್ರವನ್ನು ತೃಪ್ತಿ ಅವರ ತಂದೆ, ತಾಯಿ ವೀಕ್ಷಿಸಿದ್ದಾರೆ. ಅದರಲ್ಲಿ ಬರುವ ದೃಶ್ಯಗಳನ್ನು ನೋಡಿ ಅವರು ಆಘಾತಕ್ಕೊಳಗಾಗಿದ್ದಾರಂತೆ. ‘ಬಾಲಿವುಡ್ ಹಂಗಾಮಾ’ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ತೃಪ್ತಿ ಈ ಬಗ್ಗೆ ಮಾತನಾಡಿದ್ದಾರೆ. ‘ಅನಿಮಲ್ ಸಿನಿಮಾ ನೋಡಿ ನನ್ನ ಪಾಲಕರು ಆಘಾತಕ್ಕೊಳಗಾಗಿದ್ದರು. ನಾವು ಈ ರೀತಿಯ ಸಿನಿಮಾಗಳನ್ನು ನೋಡಿಲ್ಲ, ನೀನು ಅಂತಹ ಪಾತ್ರಗಳನ್ನು ಎಂದಿಗೂ ಮಾಡಿಲ್ಲ ಎಂದು ಪಾಲಕರು ನನಗೆ ಹೇಳಿದರು. ಆ ದೃಶ್ಯಗಳಿಂದ ಉಂಟಾದ ಶಾಕ್​ನಿಂದ ಹೊರಬರಲು ಅವರಿಗೆ ಸ್ವಲ್ಪ ಸಮಯ ಬೇಕಾಯಿತು. ಪೋಷಕರಾದವರಿಗೆ ಹಾಗೆ ಅನಿಸುವುದು ಸಹಜ. ಆದರೆ ಅವರು ನನ್ನನ್ನು ಅರ್ಥಮಾಡಿಕೊಂಡರು’ ಎಂದಿದ್ದಾರೆ ತೃಪ್ತಿ.

ಅರ್ಥ ಮಾಡಿಸಿದರು ತೃಪ್ತಿ..

ತೃಪ್ತಿ ತನ್ನ ಪೋಷಕರಿಗೆ ಎಲ್ಲವನ್ನೂ ಅರ್ಥ ಮಾಡಿಸಿದರು. ‘ಯಾವುದೇ ತಪ್ಪು ಮಾಡುತ್ತಿಲ್ಲ ಎಂದು ನಾನು ಅವರಿಗೆ ಹೇಳಿದೆ. ನಾನು ಸುರಕ್ಷಿತವಾಗಿ ಇರುತ್ತೇನೆ. ಅಂತಹ ದೃಶ್ಯಗಳನ್ನು ಮಾಡಲು ನನಗೆ ಯಾವುದೇ ತೊಂದರೆ ಇಲ್ಲ. ನಾನೊಬ್ಬ ನಟಿ ಮತ್ತು ನಾನು ಒಂದು ಪಾತ್ರಕ್ಕೆ 100 ಪ್ರತಿಶತ ನೀಡಬೇಕು’ ಎಂದು ತೃಪ್ತಿ ಪಾಲಕರಿಗೆ ವಿವರಿಸಿದ್ದರು.

ನಾಲ್ಕು ಜನ ಮಾತ್ರ..

‘ಅನಿಮಲ್’ ಸಿನಿಮಾದ ಇಂಟಿಮೇಟ್ ದೃಶ್ಯ ಮಾಡುವಾಗ ಸೆಟ್​ನಲ್ಲಿ ಇದ್ದಿದ್ದು ಕೇವಲ ನಾಲ್ಕು ಮಂದಿ ಮಾತ್ರ. ನಟ ರಣಬೀರ್ ಕಪೂರ್, ತೃಪ್ತಿ, ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಹಾಗೂ ಛಾಯಾಗ್ರಾಹಕ ಮಾತ್ರ ಶೂಟಿಂಗ್​ ಸ್ಪಾಟ್​​ನಲ್ಲಿದ್ದರು. ಹೀಗಾಗಿ, ಯಾವುದೇ ಒತ್ತಡ, ಮುಜುಗರ ಇಲ್ಲದೆ ಈ ದೃಶ್ಯವನ್ನು ಶೂಟ್ ಮಾಡಲಾಯಿತು. ಕಂಫರ್ಟ್​ ಇದೆಯೇ ಎಂದು ನಿರ್ದೇಶಕರು ಆಗಾಗ ತೃಪ್ತಿ ಅವರನ್ನು ಕೇಳುತ್ತಲೇ ಇದ್ದರು.

ಇದನ್ನೂ ಓದಿ: ಎರಡನೇ ಭಾನುವಾರವೂ ‘ಅನಿಮಲ್’ ಸಿನಿಮಾ ಅಬ್ಬರ; 400 ಕೋಟಿ ರೂಪಾಯಿ ದಾಟಿದ ಕಲೆಕ್ಷನ್

ಕಲೆಕ್ಷನ್ ಬಗ್ಗೆ

‘ಅನಿಮಲ್’ ಸಿನಿಮಾ ಎರಡನೇ ಭಾನುವಾರ (ಡಿಸೆಂಬರ್ 10) ಬರೋಬ್ಬರಿ 37 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದ ಕಲೆಕ್ಷನ್ 430 ಕೋಟಿ ರೂಪಾಯಿ ಆಗಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ 700 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶೀಘ್ರವೇ ಸಿನಿಮಾ 1000 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:14 pm, Mon, 11 December 23