AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vidyut Jammwal: ಬೆತ್ತಲೆ ಫೋಟೋ ಹಂಚಿಕೊಂಡ ಖ್ಯಾತ ನಟ; ‘ನಿಮ್ಮೊಳಗಿನ ಮೃಗ ಹೊರಬಂತು’ ಎಂದ ಆರ್​ಜಿವಿ

Vidyut Jammwal Viral Photo: ವಿದ್ಯುತ್​ ಜಾಮ್ವಾಲ್​ ಅವರಿಗೆ ಈಗ 43 ವರ್ಷ ವಯಸ್ಸು. ಈ ಬಾರಿ ಜನ್ಮದಿನವನ್ನು ಅವರು ಹಿಮಾಲಯದಲ್ಲಿ ಆಚರಿಸಿದ್ದಾರೆ. ಸಂಪೂರ್ಣ ಬೆತ್ತಲಾಗಿ ಅವರು ಅಲ್ಲಿನ ನದಿಯಲ್ಲಿ ಮುಳುಗೆದ್ದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Vidyut Jammwal: ಬೆತ್ತಲೆ ಫೋಟೋ ಹಂಚಿಕೊಂಡ ಖ್ಯಾತ ನಟ; ‘ನಿಮ್ಮೊಳಗಿನ ಮೃಗ ಹೊರಬಂತು’ ಎಂದ ಆರ್​ಜಿವಿ
ರಾಮ್​ ಗೋಪಾಲ್​ ವರ್ಮಾ, ವಿದ್ಯುತ್​ ಜಾಮ್ವಾಲ್​
Follow us
ಮದನ್​ ಕುಮಾರ್​
|

Updated on:Dec 11, 2023 | 4:11 PM

ಬಾಲಿವುಡ್​ನ ಖ್ಯಾತ ನಟ ವಿದ್ಯುತ್​ ಜಾಮ್ವಾಲ್​ (Vidyut Jammwal) ಅವರು ಬೆತ್ತಲೆ ಫೋಟೋ ಹಂಚಿಕೊಂಡಿದ್ದಾರೆ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ. ಹಿಂದಿ ಚಿತ್ರರಂಗದಲ್ಲಿ ಆ್ಯಕ್ಷನ್​ ಸಿನಿಮಾಗಳನ್ನು ಮಾಡಿ ಹೆಸರು ಗಳಿಸಿರುವ ಅವರು ಭಾನುವಾರ (ಡಿಸೆಂಬರ್​ 10) ಹುಟ್ಟುಹಬ್ಬ ಆಚರಿಸಿಕೊಂಡರು. ಈ ಪ್ರಯುಕ್ತ ಬೆತ್ತಲೆ ಫೋಟೋಗಳನ್ನು (Vidyut Jammwal Photos) ಅಪ್​ಲೋಡ್​ ಮಾಡಿದ್ದಾರೆ. ಇದನ್ನು ನೋಡಿ ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಅವರು ಕಮೆಂಟ್​ ಮಾಡಿದ್ದಾರೆ. ವಿದ್ಯುತ್​ ಜಾಮ್ವಾಲ್​ ಅವರ ಈ ಕಾರ್ಯಕ್ಕೆ ಆರ್​ಜಿವಿ ಸೆಲ್ಯೂಟ್​ ಎಂದಿದ್ದಾರೆ.

ವಿದ್ಯುತ್​ ಜಾಮ್ವಾಲ್​ ಅವರಿಗೆ ಈಗ 43 ವರ್ಷ ವಯಸ್ಸು. 43ನೇ ಜನ್ಮದಿನವನ್ನು ಅವರು ಹಿಮಾಲಯದಲ್ಲಿ ಆಚರಿಸಿದ್ದಾರೆ. ಸಂಪೂರ್ಣ ಬೆತ್ತಲಾಗಿ ಅವರು ಅಲ್ಲಿನ ನದಿಯಲ್ಲಿ ಮುಳುಗೆದ್ದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡು ಅನಿಸಿಕೆ ತಿಳಿಸಿದ್ದಾರೆ.

‘ವಿದ್ಯುತ್​ ಜಾಮ್ವಾಲ್​ ಅವರೇ.. ನೀವು ಸರಿಯಾದ ಸಮಯದಲ್ಲಿ ನಿಮ್ಮೊಳಗಿನ ಮೃಗವನ್ನು (ಅನಿಮಲ್​) ಹೊರಗೆ ತಂದಿದ್ದೀರಿ. ನೀವು ನಿಜವಾಗಿಯೂ ಗ್ರೀಕ್​ ಗಾಡ್​ ರೀತಿ ಕಾಣುತ್ತಿದ್ದೀರಿ. ನಿಮಗೆ ಮಿಲಿಯನ್​ ಸೆಲ್ಯೂಟ್​’ ಎಂದು ರಾಮ್​ ಗೋಪಾಲ್​ ವರ್ಮಾ ಪೋಸ್ಟ್ ಮಾಡಿದ್ದಾರೆ. ರಣಬೀರ್ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಆ ಕಾರಣದಿಂದಲೇ ತಮ್ಮ ಪೋಸ್ಟ್​ನಲ್ಲಿ ರಾಮ್​ ಗೋಪಾಲ್​ ಅವರು ‘ಅನಿಮಲ್​’ ಎಂಬ ಪದ ಬಳಸಿದ್ದಾರೆ.

ಇದನ್ನೂ ಓದಿ: Ram Gopal Varma: ‘ಆಪನ್​ಹೈಮರ್​’ ಚಿತ್ರದಲ್ಲಿನ ಭಗವದ್ಗೀತೆ ಕುರಿತ ವಿವಾದಾತ್ಮಕ ದೃಶ್ಯದ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಪ್ರತಿಕ್ರಿಯೆ

ವಿದ್ಯುತ್​ ಜಾಮ್ವಾಲ್​ ಹಂಚಿಕೊಂಡಿರುವ ಈ ಫೋಟೋಗಳಿಗೆ 13 ಸಾವಿರಕ್ಕೂ ಅಧಿಕ ಕಮೆಂಟ್​ಗಳು ಬಂದಿವೆ. 10 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಕೆಲವರು ತಕರಾರು ತೆಗೆದಿದ್ದಾರೆ. ಈ ಹಿಂದೆ ರಣಬೀರ್​ ಕಪೂರ್​ ಅವರು ಬೆತ್ತಲೆಯಾಗಿ ಫೋಟೋಶೂಟ್​ ಮಾಡಿಸಿದ್ದಾಗ ವಿವಾದ ಸೃಷ್ಟಿಯಾಗಿತ್ತು. ರಣಬೀರ್​ ಕಪೂರ್​ ಅವರನ್ನೇ ವಿದ್ಯುತ್​ ಜಾಮ್ವಾಲ್​ ಕಾಪಿ ಮಾಡಿದ್ದಾರೆ ಎಂದು ಕೂಡ ಕೆಲವರು ಕಮೆಂಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:03 pm, Mon, 11 December 23

ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್
VIDEO: ಕರುಣ್ ನಾಯರ್​ನ ನಂಬಿ ರನ್ ಕಳೆದುಕೊಂಡ ಪಂಜಾಬ್ ಕಿಂಗ್ಸ್