ಎರಡನೇ ಶುಕ್ರವಾರವೂ ಭರ್ಜರಿ ಕಲೆಕ್ಷನ್ ಮಾಡಿದ ‘ರಾಮಾಯಣ’ ಸಿನಿಮಾ; 1100 ಕೋಟಿ ರೂ. ಗಳಿಕೆ

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಾಮಾಯಣ ಸಿನಿಮಾ ಬಿಡುಗಡೆಯಾದ ಒಂಬತ್ತನೇ ದಿನವೂ ಗೆಲುವಿನ ಓಟ ಮುಂದುವರಿಸಿದೆ. ಶುಕ್ರವಾರ 47.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಗಳಿಸುವ ಮೂಲಕ ಭಾರತದ ಒಟ್ಟು ನಿವ್ವಳ ಕಲೆಕ್ಷನ್ 612.45 ಕೋಟಿ ರೂಪಾಯಿಗೆ ಏರಿದ್ದು, ವಿಶ್ವವ್ಯಾಪಿ ಒಟ್ಟು ಗ್ರಾಸ್ ಗಳಿಕೆ 1,110.70 ಕೋಟಿ ರೂಪಾಯಿ ಗಡಿ ದಾಟಿದೆ.

ಎರಡನೇ ಶುಕ್ರವಾರವೂ ಭರ್ಜರಿ ಕಲೆಕ್ಷನ್ ಮಾಡಿದ ‘ರಾಮಾಯಣ’ ಸಿನಿಮಾ; 1100 ಕೋಟಿ ರೂ. ಗಳಿಕೆ
ರಾಮಾಯಣ ಸಿನಿಮಾ

Updated on: Nov 14, 2026 | 6:53 AM

ಮುಖ್ಯಾಂಶಗಳು

  • ಒಂಬತ್ತನೇ ದಿನವೂ ತಗ್ಗದ 'ರಾಮಾಯಣ' ಹವಾ
  • ಭಾಷಾವಾರು ಗಳಿಕೆಯ ವಿವರ ಇಲ್ಲಿದೆ
  • ದೇಶದಲ್ಲಷ್ಟೇ ಅಲ್ಲ ವಿದೇಶದಲ್ಲೂ ಭರ್ಜರಿ ಬೇಡಿಕೆ

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಒಂಬತ್ತನೇ ದಿನವೂ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದು, ವಿಶ್ವದಾದ್ಯಂತ ಒಟ್ಟು 1,110.70 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಎರಡನೇ ಶುಕ್ರವಾರ (ನವೆಂಬರ್ 13) ಭಾರತದಾದ್ಯಂತ ಒಟ್ಟು 22,993 ಶೋಗಳಿಂದ ಸಿನಿಮಾ 47.85 ಕೋಟಿ ರೂಪಾಯಿ ನೆಟ್ ಹಾಗೂ 57.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ನವೆಂಬರ್ 13ರಂದು ಹಿಂದಿ ಅವತರಣಿಕೆಯಿಂದ 36.25 ಕೋಟಿ ರೂಪಾಯಿ ನೆಟ್ ಗಳಿಕೆ ಮಾಡಿ ಮುಂಚೂಣಿಯಲ್ಲಿದೆ. ದಕ್ಷಿಣ ಭಾರತದ ಭಾಷೆಗಳಲ್ಲೂ ಚಿತ್ರ ಉತ್ತಮ ಪ್ರದರ್ಶನ ಕಂಡಿದ್ದು, ಮಲಯಾಳಂನಲ್ಲಿ 3.25 ಕೋಟಿ ರೂಪಾಯಿ ಹಾಗೂ ಕನ್ನಡದಲ್ಲಿ 850 ಪ್ರದರ್ಶನಗಳಿಂದ 3 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ತಮಿಳಿನಲ್ಲಿ 2.75 ಕೋಟಿ ರೂಪಾಯಿ ಮತ್ತು ತೆಲುಗಿನಲ್ಲಿ 2.60 ಕೋಟಿ ರೂಪಾಯಿ ನೆಟ್ ಗಳಿಕೆ ಆಗಿದೆ.

Loading...

ವಾರದ ಮಧ್ಯದ ದಿನಗಳಲ್ಲೂ ತನ್ನ ಹಿಡಿತ ಕಾಯ್ದುಕೊಂಡ ‘ರಾಮಾಯಣ’ ಮಂಗಳವಾರ 94.10 ಕೋಟಿ ರೂಪಾಯಿ ನೆಟ್ ಹಾಗೂ 112.60 ಕೋಟಿ ರೂಪಾಯಿ ಗ್ರಾಸ್ ಗಳಿಸಿತ್ತು. ಬುಧವಾರ ಹಾಗೂ ಗುರುವಾರ ಕೂಡ ಉತ್ತಮ ಕಲೆಕ್ಷನ್ ಮಾಡಿತು. ಈ ಮೂಲಕ ಮೊದಲ ವಾರದ 8 ದಿನಗಳಲ್ಲಿ ಭಾರತದಾದ್ಯಂತ ಒಟ್ಟು 564.60 ಕೋಟಿ ಹಾಗೂ 675.05 ಕೋಟಿ ಗ್ರಾಸ್ ಗಳಿಕೆ ಮಾಡುವಲ್ಲಿ ಯಶಸ್ವಿಯಾಯಿತು. ವೀಕೆಂಡ್ ವೇಳೆ ಉತ್ತಮ ಗಳಿಕೆ ಮಾಡುವ ನಿರೀಕ್ಷೆ ಇದೆ.

ಒಂಭತ್ತನೇ ದಿನದ ಅಂತ್ಯಕ್ಕೆ ಭಾರತದಲ್ಲಿ ‘ರಾಮಾಯಣ’ ಚಿತ್ರದ ಒಟ್ಟು ನೆಟ್​ ಕಲೆಕ್ಷನ್ 612.45 ಕೋಟಿಗೆ ಏರಿದ್ದು, ಒಟ್ಟು ಭಾರತೀಯ ಗ್ರಾಸ್ ಕಲೆಕ್ಷನ್ 732.20 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾಗೆ ಭಾರಿ ಬೇಡಿಕೆಯಿದ್ದು, ಒಂಬತ್ತನೇ ದಿನ 25 ಕೋಟಿ ಗಳಿಸುವ ಮೂಲಕ ಇದುವರೆಗಿನ ಒಟ್ಟು ಸಾಗರೋತ್ತರ ಗ್ರಾಸ್ ಕಲೆಕ್ಷನ್ 378.50 ಕೋಟಿ ರೂಪಾಯಿಗೆ ತಲುಪಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾ ಮಾಡಿದ್ದರಿಂದ ಹಣ ವ್ಯರ್ಥ ಎಂದ ನಟ ಮುಖೇಶ್ ಖನ್ನಾ

ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಅವರು ನಟಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನ, ನಮಿತ್ ಮಲ್ಹೋತ್ರಾ  ನಿರ್ಮಾಣ ಸಿನಿಮಾಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us