‘ರಾಮಾಯಣ’ ಚಿತ್ರಕ್ಕಾಗಿ ದಕ್ಷಿಣ ಭಾರತ ನಿರ್ದೇಶಕರ ಮೊರೆ ಹೋದ ತಂಡ

‘ರಾಮಾಯಣ’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಶೀಘ್ರವೇ ಶೂಟಿಂಗ್ ಆರಂಭ ಆಗಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿದೆ. ಈಗ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಕೇಳಿ ಬಂದಿದೆ.

‘ರಾಮಾಯಣ’ ಚಿತ್ರಕ್ಕಾಗಿ ದಕ್ಷಿಣ ಭಾರತ ನಿರ್ದೇಶಕರ ಮೊರೆ ಹೋದ ತಂಡ
ರಣಬೀರ್

Updated on: Apr 04, 2024 | 7:35 AM

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಹಲವು ಸಿನಿಮಾಗಳು ಹಿಂದಿಗೆ ರಿಲೀಸ್ ಆಗಿ ಗೆಲುವು ಕಂಡಿವೆ. ಈ ಸಾಲಿನಲ್ಲಿ ‘ಬಾಹುಬಲಿ’, ‘ಕೆಜಿಎಫ್’ (KGF Movie),  ‘ಪುಷ್ಪ’ ಮೊದಲಾದ ಸಿನಿಮಾಗಳು ಇವೆ. ಇಲ್ಲಿನ ಕಥೆಗಳನ್ನು ಅವರು ಇಷ್ಟಪಡುತ್ತಿದ್ದಾರೆ. ಆದರೆ, ಹಿಂದಿ ಸಿನಿಮಾಗಳು ಡಬ್ ಆಗಿ ರಿಲೀಸ್ ಆದರೂ ಅನೇಕರಿಂದ ಮೆಚ್ಚುಗೆ ಪಡೆದಿಲ್ಲ. ಇಲ್ಲಿನ ಸೊಗಡಿಗೆ ತಕ್ಕಂತೆ ಸಿನಿಮಾ ಡಬ್ ಆಗುವುದಿಲ್ಲ ಅನ್ನೋದು ಅನೇಕರ ಆರೋಪ. ಹೀಗಾಗಿ ‘ರಾಮಾಯಣ’ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾನ ಡಬ್ ಮಾಡುವಾಗ ಎಚ್ಚರಿಕೆ ವಹಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ದಕ್ಷಿಣ ಭಾರತದ ನಿರ್ದೇಶಕರ ಸಹಾಯ ಪಡೆಯುತ್ತಿದ್ದಾರೆ.

‘ರಾಮಾಯಣ’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಶೂಟಿಂಗ್ ಆರಂಭ ಆಗಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿದೆ. ಈಗ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಕೇಳಿ ಬಂದಿದೆ.

‘ರಾಮಾಯಣ’ ಸಿನಿಮಾ ಸಿದ್ಧವಾಗುತ್ತಿರುವುದು ಹಿಂದಿಯಲ್ಲಿ. ಬೇರೆ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿದೆ. ನಿರ್ದೇಶಕರು ಹಿಂದಿ ಭಾಷೆಗೆ ಕೊಟ್ಟಷ್ಟೇ ಕಾಳಜಿಯನ್ನು ಇತರ ಭಾಷೆಗಳಿಗೂ ಕೊಡಲು ನಿರ್ಧರಿಸಿದ್ದಾರೆ. ತೆಲುಗು ಡೈಲಾಗ್ ವಿಚಾರದಲ್ಲಿ ಅವರು ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಕನ್ನಡದಲ್ಲಿ ಯಾವ ನಿರ್ದೇಶಕರ ಜೊತೆ ಚರ್ಚೆ ನಡೆಸುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ರಾಮಾಯಣ ಸಿನಿಮಾದ ಶೂಟಿಂಗ್​ ಶುರು: ಮೊದಲು ಚಿತ್ರೀಕರಣಕ್ಕೆ ಬರೋದು ಯಾರು?

‘ರಾಮಾಯಣ’ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಒಳ್ಳೆಯ ಬಾಂಧವ್ಯ ಇದೆ. ಹೀಗಾಗಿ, ನಿತೇಶ್ ತಿವಾರಿ ಅವರು ಕನ್ನಡದ ಡೈಲಾಗ್ ವಿಚಾರಕ್ಕೆ ಪ್ರಶಾಂತ್ ನೀಲ್ ಅವರನ್ನು ಸಂಪರ್ಕಿಸಿದರೂ ಅಚ್ಚರಿ ಏನಿಲ್ಲ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us