ತಮ್ಮ ಮೆಚ್ಚಿನ ತಮಿಳು ಸಿನಿಮಾಗಳ ಹೆಸರಿಸಿದ ರಣ್​ಬೀರ್ ಕಪೂರ್

|

Updated on: Nov 26, 2023 | 7:17 PM

Ranbir Kapoor: ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು, ಚೆನ್ನೈನಲ್ಲಿ ಸಿನಿಮಾದ ಪ್ರಚಾರದ ವೇಳೆ ತಮಗೆ ಇಷ್ಟವಾದ ತಮಿಳು ಸಿನಿಮಾಗಳನ್ನು ರಣ್​ಬೀರ್ ಕಪೂರ್ ಹೆಸರಿಸಿದ್ದಾರೆ.

ತಮ್ಮ ಮೆಚ್ಚಿನ ತಮಿಳು ಸಿನಿಮಾಗಳ ಹೆಸರಿಸಿದ ರಣ್​ಬೀರ್ ಕಪೂರ್
ರಣ್​ಬೀರ್ ಕಪೂರ್
Follow us on

ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ ರಣ್​ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಇನ್ನು ಕೆಲವೇ ದಿನಗಳಲ್ಲಿ ‘ಅನಿಮಲ್’ ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಿರೀಕ್ಷೆಗಿಂತಲೂ ಚೆನ್ನಾಗಿಯೇ ನಡೆಯುತ್ತಿದೆ. ರಣ್​ಬೀರ್ ಸಹ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು ದೇಶದ ಹಲವು ನಗರಗಳಿಗೆ ತೆರಳಿ ಚುರುಕಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಸಿನಿಮಾದ ಪ್ರಚಾರಕ್ಕೆ ತೆರಳಿದ್ದ ವೇಳೆ ತಮಿಳು ಸಿನಿಮಾಗಳ ಬಗೆಗೂ ರಣ್​ಬೀರ್ ಮಾತನಾಡಿದ್ದಾರೆ.

ಯಾವುದೇ ನಗರಕ್ಕೆ ಹೋದರು ಸ್ಥಳೀಯ ಸಿನಿಮಾಗಳು, ನಟರ ಬಗ್ಗೆ ಗೌರವದಿಂದ ಮಾತನಾಡುವುದನ್ನು ರಣ್​ಬೀರ್ ಕಪೂರ್ ರೂಢಿಸಿಕೊಂಡಿದ್ದಾರೆ. ಈ ಹಿಂದೆ ‘ಬ್ರಹ್ಮಾಸ್ತ್ರ’ ಸಿನಿಮಾಕ್ಕೆ ದಕ್ಷಿಣದ ನಗರಗಳಲ್ಲಿ ಪ್ರಚಾರ ಮಾಡಿ ಅಭ್ಯಾಸವಿದೆ ಅವರಿಗೆ. ಇದೀಗ ಚೆನ್ನೈನಲ್ಲಿ ನಡೆದ ‘ಅನಿಮಲ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ರಣ್​ಬೀರ್ ಕಪೂರ್, ಪತ್ರಕರ್ತರು ತಮಿಳು ಸಿನಿಮಾ ರಂಗದ ಬಗ್ಗೆ ಕೇಳಿದಾಗ ತಮ್ಮ ಮೆಚ್ಚಿನ ತಮಿಳು ಸಿನಿಮಾಗಳನ್ನು ಹೆಸರಿಸಿದ್ದಾರೆ.

ರಣ್​ಬೀರ್ ಕಪೂರ್​ ಇತ್ತೀಚೆಗೆ ಹೆಚ್ಚು ತಮಿಳು ಸಿನಿಮಾಗಳನ್ನು ನೋಡಲು ಆರಂಭಿಸಿದ್ದಾರಂತೆ. ನನಗೆ ತಮಿಳು ಚಿತ್ರಗಳು ಹೆಚ್ಚು ಇಷ್ಟವಾಗುತ್ತಿವೆ ಎಂದು ಸಹ ರಣ್​ಬೀರ್ ಕಪೂರ್ ಹೇಳಿದ್ದಾರೆ ಜೊತೆಗೆ ಇತ್ತೀಚೆಗೆ ಬಿಡುಗಡೆ ಆದ ಸಿನಿಮಾಗಳಲ್ಲಿ ವಿಕ್ರಂ, ಜೈಲರ್ ಹಾಗೂ ಲಿಯೋ ಸಿನಿಮಾಗಳು ನನಗೆ ಬಹಳ ಇಷ್ಟ ಎಂದಿದ್ದಾರೆ. ಈ ಮೂರು ಸಿನಿಮಾಗಳ ಹೆಸರು ಹೇಳಿ ಬುದ್ಧಿವಂತಿಕೆ ಮೆರೆದಿದ್ದಾರೆ ರಣ್​ಬೀರ್ ಕಪೂರ್.

ಇದನ್ನೂ ಓದಿ:ಬೆಟ್ಟಿಂಗ್ ಆ್ಯಪ್ ಪ್ರಕರಣ: ರಣ್​ಬೀರ್ ಕಪೂರ್​ಗೂ ಬಂತು ಇಡಿ ಸಮನ್ಸ್

ಕಮಲ್ ಹಾಸನ್​, ರಜನೀಕಾಂತ್ ಹಾಗೂ ವಿಜಯ್ ತಮಿಳುನಾಡಿನಲ್ಲಿ ಭಾರಿ ದೊಡ್ಡ ಅಭಿಮಾನಿವರ್ಗ ಹೊಂದಿರುವ ನಟರು. ರಣ್​ಬೀರ್ ಕಪೂರ್ ಸರಿಯಾಗಿ ಆ ಮೂರೂ ನಟರ ಇತ್ತೀಚೆಗಿನ ಸಿನಿಮಾಗಳನ್ನು ಹೆಸರಿಸಿದ್ದಾರೆ. ತಮಿಳು ಸಿನಿಮಾಗಳನ್ನು ರಣ್​ಬೀರ್ ಕಪೂರ್ ನೋಡಿದ್ದಾರೆಯೋ ಇಲ್ಲವೋ, ಆದರೆ ಪ್ರಚಾರಕ್ಕೆ ಬೇಕಾದ ಜಾಣತನವನ್ನಂತೂ ಸಖತ್ ಆಗಿ ತೋರಿಸುತ್ತಿದ್ದಾರೆ ರಣ್​ಬೀರ್ ಕಪೂರ್.

ಇತ್ತೀಚೆಗಷ್ಟೆ ಬಾಲಕೃಷ್ಣ ನಡೆಸಿಕೊಡುವ ತೆಲುಗು ಟಾಕ್ ಶೋಗೆ ಅತಿಥಿಯಾಗಿ ರಣ್​ಬೀರ್ ಕಪೂರ್ ಹೋಗಿದ್ದರು. ಅಲ್ಲಿ ಬಾಲಕೃಷ್ಣ ಅವರ ಜನಪ್ರಿಯ ಡೈಲಾಗ್​ಗಳನ್ನು ಹೇಳಿ ರಂಜಿಸಿದ ರಣ್​ಬೀರ್ ಕಪೂರ್, ಬಳಿಕ ಪ್ರಭಾಸ್ ಅಣ್ಣ ಜೊತೆ ಸಣ್ಣ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕರೂ ಸಾಕು ಎಂದು ‘ವಿನಯದಿಂದ’ ಹೇಳಿದರು. ಅದೇ ಕಾರ್ಯಕ್ರಮದಲ್ಲಿ ತೆಲುಗು ಚಿತ್ರರಂಗದ ಬಗ್ಗೆ, ವಿಜಯ್ ದೇವರಕೊಂಡ ಬಗ್ಗೆ, ‘ಪುಷ್ಪ’ ಸಿನಿಮಾದ ಬಗ್ಗೆಯೂ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ